Tecno: 35 ಸಾವಿರಕ್ಕಿಂತ ಕಡಿಮೆ.. ಎರಡು ದೈತ್ಯ ಫೋನ್ ಬಿಡುಗಡೆ; ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು
ಫೋಲ್ಡಬಲ್ ಪ್ರಿಯರಿಗೆ ಇಲ್ಲಿದೆ ಖುಷಿ ಸುದ್ದಿ. ಸದ್ದಿಲ್ಲದೆ ಎರಡು ಹೊಚ್ಚ ಹೊಸ ಫೋನ್‌ಗಳು ಭಾರತಕ್ಕೆ ಲಗ್ಗೆಯಿಟ್ಟಿವೆ. ಹೌದು, ಟೆಕ್ನೋ ತನ್ನ ನೂತನ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 (Tecno Phantom V Flip2) ಮತ್ತು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 (Tecno Phantom V Fold2) ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಇವು ಕಡಿಮೆ ಬೆಲೆಯ ಫೋಲ್ಡಬಲ್ ಫೋನ್ ಆಗಿವೆ. ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.
ಹೌದು, ಟೆಕ್ನೋ 35 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಈ ದೈತ್ಯ ಫೋನನ್ನು ಪರಿಚಯಿಸಿದೆ. ಎರಡೂ ಫೋನ್‌ಗಳಲ್ಲಿ ಹಲವು ಎಐ (AI) ವೈಶಿಷ್ಟ್ಯಗಳು ಲಭ್ಯವಿದೆ. ಈ ಎರಡು ಮೊಬೈಲ್‌ಗಳ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿವೆ. ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ 7.85 ಇಂಚಿನ ಡಿಸ್ಪ್ಲೇ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನಿನಲ್ಲಿ 6.9 ಇಂಚಿನ ಡಿಸ್ಪ್ಲೇ ಇದೆ. ಫೋಲ್ಡ್ ಮೊಬೈಲ್ 5750mAh ಬ್ಯಾಟರಿ ಮತ್ತು ಫ್ಲಿಪ್ ಫೋನ್ 4720mAh ಬ್ಯಾಟರಿ ಹೊಂದಿದೆ.

ಹೊಸ ಫೋಲ್ಡಬಲ್ ಫೋನ್‌ಗಳ ಬೆಲೆ
ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಬೆಲೆ = 34,999 ರೂ.
ಫ್ಯಾಂಟಮ್ ವಿ ಫೋಲ್ಡ್ 2 ಬೆಲೆ = 79,999 ರೂ.
ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನನ್ನು 34,999 ರೂ. ಮತ್ತು ಫ್ಯಾಂಟಮ್ ವಿ ಫೋಲ್ಡ್ 2 ಅನ್ನು 79,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಈ ಎರಡೂ ಫೋಲ್ಡಬಲ್ ಫೋನ್‌ಗಳ ಮಾರಾಟವು ಡಿಸೆಂಬರ್ 13 ರಿಂದ ಪ್ರಾರಂಭವಾಗಲಿದೆ. ಈ ಹೊಸ ಮೊಬೈಲ್‌ಗಳನ್ನು ಅಮೆಜಾನ್‌ನಲ್ಲಿ ಖರೀದಿಸಬಹುದು.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ 120Hz ರಿಫ್ರೆಶ್ ದರದೊಂದಿಗೆ 7.85 ಇಂಚಿನ 2K+ ಅಮೋಲೆಡ್ ಮುಖ್ಯ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 6.45 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಕವರ್ ಡಿಸ್ಪ್ಲೇ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನ್ 120Hz ರಿಫ್ರೆಶ್ ದರದೊಂದಿಗೆ 6.9 ಇಂಚಿನ ಅಮೋಲೆಡ್ ಮುಖ್ಯ ಡಿಸ್ಪ್ಲೇ ಮತ್ತು 3.64 ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 + ಪ್ರೊಸೆಸರ್ ಹೊಂದಿದೆ. ಇದನ್ನು 4ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ಹೊಂದಿದೆ. ಇದನ್ನು 6ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ.
ಸ್ಟೋರೇಜ್ ಆಯ್ಕೆ
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಸ್ಮಾರ್ಟ್‌ಫೋನ್ 12GB RAM ಜೊತೆಗೆ 512GB ಸ್ಟೋರೇಜ್ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ಒಳಗೊಂಡಿದೆ.

ಕ್ಯಾಮೆರಾ ಸೆಟಪ್
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಇದು ಎರಡು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ 5,750mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 70W ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹೊಸ ಟೆಕ್ನೋ ಫ್ಲಿಪ್ ಫೋನ್ 4,720mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 70W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.
ಇತರೆ ವೈಶಿಷ್ಟ್ಯಗಳು
ಈ ಎರಡೂ ಫೋನಿನಲ್ಲಿ ಹಲವು ಎಐ (AI) ಕ್ಯಾಮೆರಾಗಳು ಮತ್ತು ಇತರೆ ವೈಶಿಷ್ಟ್ಯಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, 4G, ವೈಫೈ, ಬ್ಲೂಟೂತ್ 5.3 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








