Tecno: ನಾಳೆ ಎರಡು ದೈತ್ಯ ಫೋನ್ ಸೇಲ್; ಬೆಲೆ 35,000ಕ್ಕಿಂತ ಕಡಿಮೆ.. ವಿಶೇಷತೆಗಳೇನು?
ಇತ್ತೀಚೆಗೆ ಹೊಸ ಫೋಲ್ಡಬಲ್ ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಟೆಕ್ನೋ ತನ್ನ ಫ್ಯಾಂಟಮ್ V (Phantom V) ಸರಣಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 (Tecno Phantom V Flip2) ಮತ್ತು ಫ್ಯಾಂಟಮ್ V ಫೋಲ್ಡ್ 2 (Tecno Phantom V Fold2) ಫೋನ್‌ಗಳನ್ನು ಪರಿಚಯಿಸಿದೆ. ಅಂದಹಾಗೆ, ನಾಳೆ (ಡಿಸೆಂಬರ್ 13) ಈ ಮೊಬೈಲ್‌ಗಳು ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿವೆ.
ಟೆಕ್ನೋ ಇವುಗಳನ್ನು ಬಜೆಟ್ ಸ್ನೇಹಿ ರೀತಿಯಲ್ಲಿ ಪರಿಚಯಿಸಿದೆ. ಎರಡೂ ಸ್ಮಾರ್ಟ್ಫೋನ್ಗಳು ದೇಶದ ಅತ್ಯಂತ ಕೈಗೆಟುಕುವ ಫೋಲ್ಡಬಲ್ ಫೋನ್‌ಗಳಾಗಿವೆ. ನೀವು, 35 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಈ ಫೋನನ್ನು ಖರೀದಿಸಬಹುದು. ಎರಡು ಮೊಬೈಲ್‌ಗಳು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿವೆ. ಇದರಲ್ಲಿ 7.85 ಇಂಚಿನ ಡಿಸ್ಪ್ಲೇ ಮತ್ತು 6.9 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಫೋಲ್ಡ್ ಮೊಬೈಲ್ 5750mAh ಬ್ಯಾಟರಿ ಮತ್ತು ಫ್ಲಿಪ್ ಫೋನ್ 4720mAh ಬ್ಯಾಟರಿ ಹೊಂದಿದೆ. ಈ ಮೊಬೈಲ್‌ಗಳ ಬೆಲೆ ತಿಳಿಯಲು ಮುಂದೆ ಓದಿ.

ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 ಬೆಲೆ
- 8GB RAM ಮತ್ತು 256GB ಸ್ಟೋರೇಜ್ ಬೆಲೆ= 34,999 ರೂ.
ಫ್ಯಾಂಟಮ್ V ಫೋಲ್ಡ್ 2 ಬೆಲೆ
- 2GB RAM + 512GB ಸ್ಟೋರೇಜ್ ಬೆಲೆ = 79,999 ರೂ.
ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 ಫೋನನ್ನು 34,999 ರೂ. ಮತ್ತು ಫ್ಯಾಂಟಮ್ V ಫೋಲ್ಡ್ 2 ಅನ್ನು 79,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಈ ಎರಡೂ ಫೋಲ್ಡಬಲ್ ಫೋನ್‌ಗಳ ಮಾರಾಟವು ಡಿಸೆಂಬರ್ 13 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ನೀವು, ಅಮೆಜಾನ್‌ನಲ್ಲಿ ಈ ಹೊಸ ಮೊಬೈಲ್‌ಗಳನ್ನು ಖರೀದಿಸಬಹುದು. ಇವು ಟ್ರಾವರ್ಟೈನ್ ಗ್ರೀನ್ ಮತ್ತು ಮೂಂಡಸ್ಟ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಹೊಸ ಫೋಲ್ಡಬಲ್ ಮೊಬೈಲ್‌ಗಳ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.9 ಇಂಚಿನ ಅಮೋಲೆಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಇದು 3.64 ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಹೊಂದಿದೆ. ಆದರೆ, ಟೆಕ್ನೋ ಫ್ಯಾಂಟಮ್ V ಫೋಲ್ಡ್ 2 ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 7.85 ಇಂಚಿನ 2K+ ಅಮೋಲೆಡ್ ಮುಖ್ಯ ಡಿಸ್ಪ್ಲೇಯನ್ನು ಹೊಂದಿದೆ. ಇದು 6.45 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಕವರ್ ಡಿಸ್ಪ್ಲೇ ಹೊಂದಿದೆ.
ಪ್ರೊಸೆಸರ್ ಯಾವುದು?
ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಆದರೆ, ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 + ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ.
512GB ದೊಡ್ಡ ಸ್ಟೋರೇಜ್
ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದೆ. ಆದರೆ, ಟೆಕ್ನೋ ಫ್ಯಾಂಟಮ್ V ಫೋಲ್ಡ್ 2 ಸ್ಮಾರ್ಟ್‌ಫೋನ್ 12GB RAM ಜೊತೆಗೆ 512GB ಸ್ಟೋರೇಜ್ ಆಯ್ಕ ಒಳಗೊಂಡಿದೆ.

ಮೂರು 50MP ಕ್ಯಾಮೆರಾಗಳು
ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಇದರಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಲಭ್ಯವಿದೆ. ಟೆಕ್ನೋ ಫ್ಯಾಂಟಮ್ V ಫೋಲ್ಡ್ 2 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ ಎರಡು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
5750mAh ಸಾಮರ್ಥ್ಯದ ಬ್ಯಾಟರಿ
ಟೆಕ್ನೋ ಫ್ಲಿಪ್ ಮೊಬೈಲ್ 4720mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 70W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಟೆಕ್ನೋ ಫೋಲ್ಡ್ 2 ಮೊಬೈಲ್ 5750mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 70W ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 ಮತ್ತು ಫ್ಯಾಂಟಮ್ V ಫೋಲ್ಡ್ 2 ಫೋನಿನಲ್ಲಿ ಹಲವು ಎಐ (AI) ಕ್ಯಾಮೆರಾಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇವು ಡ್ಯುಯಲ್ ಸಿಮ್ 5G, 4G, ವೈಫೈ, ಬ್ಲೂಟೂತ್ 5.3 ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿವೆ.


Click it and Unblock the Notifications








