Tecno: 2 ದೈತ್ಯ ಫೋಲ್ಡಬಲ್ ಫೋನ್ ಲಾಂಚ್: ಅಬ್ಬಾ ಎಂಥಾ ಫೀಚರ್ಸ್, ಬೆಲೆ ಇಷ್ಟೊಂದಾ?
ಫೋಲ್ಡಬಲ್ ಪ್ರಿಯರಿಗೆ ಡಬಲ್ ಗುಡ್ ನ್ಯೂಸ್ ಇದೆ. ಸದ್ದಿಲ್ಲದೆ ಎರಡು ಹೊಸ ಫೋನ್‌ಗಳು ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಟೆಕ್ನೋ (Tecno) ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಎರಡು ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳು, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 (Tecno Phantom V Fold 2) ಮತ್ತು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 (Tecno Phantom V Flip2) ಎಂಬ ಹೆಸರುಗಳೊಂದಿಗೆ ಎಂಟ್ರಿ ಕೊಟ್ಟಿವೆ. ಬನ್ನಿ, ಹೊಸ ಫೋನ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಎರಡೂ ಫೋನ್‌ಗಳು ಅನೇಕ ಎಐ (AI) ವೈಶಿಷ್ಟ್ಯಗಳನ್ನು ಹೊಂದಿವೆ. ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಬೆಲೆ ಸುಮಾರು 93 ಸಾವಿರ ರೂ. (1,099 ಡಾಲರ್) ಇದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಬೆಲೆ 58 ಸಾವಿರ ರೂ. (699 ಡಾಲರ್) ಆಗಿದೆ. ಎರಡೂ ಫೋನ್‌ಗಳು ಪ್ರಸ್ತುತ ಆಫ್ರಿಕಾ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಲಭ್ಯವಿರುತ್ತದೆ. ಸೆಪ್ಟೆಂಬರ್ 23 ರಿಂದ ಆಫ್ರಿಕಾದಲ್ಲಿ ಮೊದಲ ಮಾರಾಟ ಪ್ರಾರಂಭವಾಗುತ್ತದೆ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ 120Hz ರಿಫ್ರೆಶ್ ದರದೊಂದಿಗೆ 7.85 ಇಂಚಿನ LTPO AMOLED ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿದೆ. 6.45 ಇಂಚಿನ ಕವರ್ ಡಿಸ್ಪ್ಲೇ ಇದೆ. ಇದರ ಮೇಲೆ LTPO AMOLED ಪ್ಯಾನೆಲ್ ಸಹ ಲಭ್ಯವಿದೆ.
ಪ್ರೊಸೆಸರ್: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ಲಸ್ ಚಿಪ್‌ಸೆಟ್ ಹೊಂದಿದೆ. ಈ ಮೊಬೈಲ್ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ.
ಕ್ಯಾಮೆರಾ: ಈ ಫೋನ್ ಹಿಂಭಾಗದಲ್ಲಿ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಇದರಲ್ಲಿ OIS ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಇದರೊಂದಿಗೆ, 50 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಇದೆ. 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಎರಡು 32 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಸಹ ಒಳಗೊಂಡಿದೆ.
ಬ್ಯಾಟರಿ: ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ 5,750mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಫೋನ್ 70 ವ್ಯಾಟ್ ವೈರ್ಡ್ ಚಾರ್ಜರ್‌ನೊಂದಿಗೆ ಬರುತ್ತದೆ. 15 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಇದೆ. ಇದು ವಿವಿಧ ಎಐ ಕ್ಯಾಮೆರಾಗಳು ಮತ್ತು ಇತರ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಹಿಂಭಾಗದಲ್ಲಿ 3.64 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 6.9 ಇಂಚಿನ ಪ್ರಾಥಮಿಕ ಡಿಸ್ಪ್ಲೇ ಇದೆ. ಇದು LTPO AMOLED ಡಿಸ್ಪ್ಲೇ ಮತ್ತು FullHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದೆ.
ಪ್ರೊಸೆಸರ್: ಈ ಫೋನ್ MediaTek ಡೈಮೆನ್ಸಿಟಿ 8020 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನಿನಲ್ಲಿ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ.
ಕ್ಯಾಮೆರಾ: ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಹೊಸ ಟೆಕ್ನೋ ಫ್ಲಿಪ್ ಫೋನ್ 4,720mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 70 ವ್ಯಾಟ್ ವೈರ್ಡ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.


Click it and Unblock the Notifications








