Home
ಮೊಬೈಲ್

Tecno: ಬರಲಿವೆ 2 ದೈತ್ಯ ಫೋನ್‌; 512GB ಸ್ಟೋರೇಜ್‌.. ಎರಡು 32MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು?

ಟೆಕ್ನೋ (Tecno) ಎರಡು ಹೊಸ ಮೊಬೈಲ್‌ ಬಿಡುಗಡೆ ಮಾಡಲು ಸಿದ್ಧವಾಗಿದೆ. ನೀವು, ಫೋಲ್ಡಬಲ್ ಅಥವಾ ಫ್ಲಿಪ್ ಫೋನ್ ಖರೀದಿಸಲು ಬಯಸಿದರೆ, ಸ್ವಲ್ಪ ದಿನ ಕಾಯುವುದು ಉತ್ತಮ. ಹೌದು, ಟೆಕ್ನೋ ಶೀಘ್ರದಲ್ಲೇ ತನ್ನ ಎರಡು ಹೊಸ ಫೋಲ್ಡಬಲ್ ಫೋನ್‌ಗಳನ್ನು ಭಾರತದಲ್ಲಿ ಅನಾವರಣಗೊಳಿಸಲಿದೆ. ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 (Tecno Phantom V Fold 2) ಮತ್ತು ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 (Tecno Phantom V Flip2) ಬಿಡುಗಡೆಯನ್ನು ಖಚಿತಪಡಿಸಿದೆ. ಇವು ಅಮೆಜಾನ್ ಮೂಲಕ ಮಾರಾಟವಾಗಲಿವೆ.

ಕಂಪನಿಯು ಲಾಂಚ್ ಟೀಸರ್‌ ಹಂಚಿಕೊಂಡಿದೆ. ಆದರೆ, ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಎರಡೂ ಫೋಲ್ಡಬಲ್ ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದೀಗ, ಭಾರತಕ್ಕೆ ಬರಲು ಸಿದ್ಧವಾಗಿವೆ. ಟೆಕ್ನೋ ಅಮೆಜಾನ್‌ನಲ್ಲಿ ಮೈಕ್ರೋಸೈಟ್ ರಚಿಸಿದ್ದು, ಮುಂಬರುವ ಫೋನ್‌ಗಳ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಪೈಕಿ ಫ್ಯಾಂಟಮ್ ವಿ ಫೋಲ್ಡ್ 2 ದೊಡ್ಡ ಬ್ಯಾಟರಿ ಮತ್ತು ಡಿಸ್ಪ್ಲೇಯನ್ನು ಹೊಂದಿದೆ. ಫೋನಿನಲ್ಲಿ 6.42 ಇಂಚಿನ ಕವರ್ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ ಎರಡು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ.

Tecno: ಶೀಘ್ರವೇ 2 ದೈತ್ಯ ಫೋನ್‌ ಲಾಂಚ್: ಅದ್ಭುತ ಫೀಚರ್ಸ್‌, ಬೆಲೆ ನೋಡಿ

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮತ್ತು ವಿ ಫ್ಲಿಪ್ ಬೆಲೆ

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ 24GB + 512GB ಸ್ಟೋರೇಜ್ ಮತ್ತು ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಮೊಬೈಲ್ 16GB + 256GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನನ್ನು ಭಾರತದಲ್ಲಿ 88,888 ರೂ.ಗೆ ಬಿಡುಗಡೆ ಮಾಡಲಾಗುತ್ತದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಅನ್ನು 49,999 ರೂ.ಗೆ ಪರಿಚಯಿಸುವ ಸಾಧ್ಯತೆಯಿದೆ.

ಟೆಕ್ನೋ ಫೋಲ್ಡ್ 2 ಮತ್ತು ವಿ ಫ್ಲಿಪ್ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 7.85 ಇಂಚಿನ 2K+ ಅಮೋಲೆಡ್ ಮುಖ್ಯ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 6.45 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಅಮೋಲೆಡ್ ಕವರ್ ಡಿಸ್ಪ್ಲೇ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನ್ 120Hz ರಿಫ್ರೆಶ್ ದರದೊಂದಿಗೆ 6.9 ಇಂಚಿನ ಅಮೋಲೆಡ್ ಮುಖ್ಯ ಡಿಸ್ಪ್ಲೇ ಮತ್ತು 3.64 ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 + ಪ್ರೊಸೆಸರ್‌ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ಹೊಂದಿದೆ.

Tecno: ಶೀಘ್ರವೇ 2 ದೈತ್ಯ ಫೋನ್‌ ಲಾಂಚ್: ಅದ್ಭುತ ಫೀಚರ್ಸ್‌, ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಎರಡು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇವೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ 5750mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 70W ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹೊಸ ಟೆಕ್ನೋ ಫ್ಲಿಪ್ ಫೋನ್ 4720mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 70W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

ಇತರೆ ವೈಶಿಷ್ಟ್ಯಗಳು

ಈ ಎರಡೂ ಫೋನಿನಲ್ಲಿ ಹಲವು ಎಐ (AI) ಕ್ಯಾಮೆರಾಗಳು ಮತ್ತು ಇತರೆ ವೈಶಿಷ್ಟ್ಯಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, 4G, ವೈಫೈ, ಬ್ಲೂಟೂತ್ 5.3 ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Tecno Phantom V Fold 2 and V Flip launching in India soon; Amazon availability confirmed: know specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+