Home
ಮೊಬೈಲ್

ಹೊಸ Tecno POP 9 ಸೇಲ್ ಶುರು: ಅಗ್ಗದ ಬೆಲೆ.. ಜಬರ್ದಸ್ತ್ ಫೀಚರ್ಸ್‌.. ಆಫರ್‌ ಏನಿದೆ?

ಟೆಕ್ನೋ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ. ಹೊಸ ಫೋನ್ ಇಂದು ಗ್ರಾಹಕರ ಕೈ ಸೇರಲಿದೆ. ಹೌದು, ಟೆಕ್ನೋ ಕಳೆದ ವಾರ ಭಾರತದಲ್ಲಿ ನೂತನ ಟೆಕ್ನೋ ಪಾಪ್ 9 4G (Tecno POP 9 4G) ಫೋನನ್ನು ಬಿಡುಗಡೆ ಮಾಡಿದೆ. ಅಂದಹಾಗೆ, ಕಂಪನಿಯು ಇಂದಿನಿಂದ (ನ.26) ಹೊಸ ಮೊಬೈಲ್‌ನ ಮಾರಾಟವನ್ನು ಪ್ರಾರಂಭಿಸಲಿದೆ. ನೀವು, ರಿಯಾಯಿತಿಯೊಂದಿಗೆ ಕೇವಲ 6,499 ರೂ.ಗೆ ಟೆಕ್ನೋ ಪಾಪ್ 9 ಫೋನನ್ನು ಖರೀದಿಸಬಹುದು. ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕಂಪನಿಯು, ಅಗ್ಗದ ದರವೆಂಬ ಕಾರಣಕ್ಕೆ ಟೆಕ್ನೋ ಪಾಪ್ 9 4G ಫೋನಿನ ಫೀಚರ್ಸ್‌ ಹಾಗೂ ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಈ ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ G50 ಪ್ರೊಸೆಸರ್‌ ಹೊಂದಿದೆ. ಹೊಸ ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್‌ ಹೊಂದಿದೆ. ಜೊತೆಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾ, 64GB ಸ್ಟೋರೇಜ್‌ ಮತ್ತು IP54 ರೇಟಿಂಗ್‌ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇಂದು Tecno POP 9 ಸೇಲ್: ಅಗ್ಗದ ಬೆಲೆ.. ಅದ್ಭುತ ಫೀಚರ್ಸ್‌.. ಆಫರ್‌ಗಳೇನು?

ಟೆಕ್ನೋ ಪಾಪ್ 9 4G ಫೋನಿನ ಬೆಲೆ ಮತ್ತು ಆಫರ್‌ಗಳು

ಟೆಕ್ನೋ ಪಾಪ್ 9 4G ಫೋನ್ 6GB RAM + 64GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದನ್ನು ಕೇವಲ 6,699 ರೂ.ಗೆ ಬಿಡುಗಡೆ ಮಾಡಲಾಗಿದೆ. ಕಂಪನಿಯು, ಫೋನಿನ ಮೊದಲ ಮಾರಟದ ಭಾಗವಾಗಿ 200 ರೂ. ರಿಯಾಯಿತಿ ನೀಡುತ್ತಿದೆ. ನೀವು ಕೇವಲ 6,499 ರೂ.ಗೆ ಈ ಫೋನನ್ನು ಖರೀದಿಸಬಹುದು. ಇದು ಗ್ಲಿಟರಿ ವೈಟ್, ಲೈಮ್ ಗ್ರೀನ್ ಮತ್ತು ಸ್ಟಾರ್ಟ್ರೈಲ್ ಕಪ್ಪು ಬಣ್ಣಗಳಲ್ಲಿ ಮಾರಾಟವಾಗಲಿದೆ. ಅಮೆಜಾನ್‌ನಲ್ಲಿ ಇಂದು (ನ.26) ಮಧ್ಯಾಹ್ನ 12 ಗಂಟೆಗೆ ಈ ಫೋನಿನ ಸೇಲ್ ಶುರುವಾಗಲಿದೆ.

ಟೆಕ್ನೋ ಪಾಪ್ 9 4G: ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಪಾಪ್ 9 4G ಫೋನಿನ ಟಾಪ್ 5 ವೈಶಿಷ್ಟ್ಯಗಳಲ್ಲಿ ಮೊದಲಿಗೆ ಡಿಸ್ಪ್ಲೇ ಬಗ್ಗೆ ತಿಳಿಯೋಣ. ಈ ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್‌ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರ, 720 x 1,600 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಮತ್ತು 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಟೆಕ್ನೋ ಪಾಪ್ 9 4G ಮೊಬೈಲ್ ಅನ್ನು ಮೀಡಿಯಾ ಟೆಕ್ ಹೆಲಿಯೊ G50 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಗೋ ಆವೃತ್ತಿಯ ಹೈ ಆಪರೇಟಿಂಗ್ ಸಿಸ್ಟಮ್‌ 14 ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್‌ ಆಯ್ಕೆ

ಟೆಕ್ನೋ ಪಾಪ್ 9 4G ಫೋನಿನಲ್ಲಿ 6GB RAM ಲಭ್ಯವಿದೆ. ಜೊತೆಗೆ 3GB ವರ್ಚುವಲ್ RAM ಸಹ ಹೊಂದಿದೆ. ನೀವು, 3GB ಭೌತಿಕ RAM ಜೊತೆಗೆ 6GB ಬಳಸಬಹುದು. ಫೋನಿನಲ್ಲಿ 64GB ಸ್ಟೋರೇಜ್ ಲಭ್ಯವಿದೆ. ನೀವು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು.

ಇಂದು Tecno POP 9 ಸೇಲ್: ಅಗ್ಗದ ಬೆಲೆ.. ಅದ್ಭುತ ಫೀಚರ್ಸ್‌.. ಆಫರ್‌ಗಳೇನು?

ಕ್ಯಾಮೆರಾ ಸೆಟಪ್

ಹೊಸ ಟೆಕ್ನೋ ಪಾಪ್ 9 4G ಸ್ಮಾರ್ಟ್‌ಫೋನ್‌ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 13 ಮೆಗಾಪಿಕ್ಸೆಲ್ ಫ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದು ಪಿಡಿಎಎಫ್‌ (PDAF) ತಂತ್ರಜ್ಞಾನ ಸಹ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಟೆಕ್ನೋ ಪಾಪ್ 9 4G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ನೂತನ ಟೆಕ್ನೋ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಐಆರ್ ಸೆನ್ಸಾರ್ ತಂತ್ರಜ್ಞಾನ ಹೊಂದಿದೆ. ಧೂಳು ಮತ್ತು ಸ್ಪ್ಲಾಶ್ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇದರಲ್ಲಿ 3.5 ಎಂಎಂ ಆಡಿಯೋ ಜಾಕ್, ಸ್ಟೀರಿಯೋ ಸ್ಪೀಕರ್‌ಗಳು, ಡಿಟಿಎಸ್ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.1, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Tecno POP 9 4G First Sale Start Today via amazon: Price Starts at Rs 6,699: know offers, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+