Home
ಮೊಬೈಲ್

ನಾಳೆ Tecno POP 9 ಸೇಲ್: ಕೇವಲ 6,499 ರೂ.! ಖರೀದಿಗೆ ಕ್ಯೂ ಗ್ಯಾರಂಟಿ

ಟೆಕ್ನೋ ಇತ್ತೀಚೆಗೆ ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ಟೆಕ್ನೋ ಪಾಪ್ 9 4G (Tecno POP 9 4G) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಕಂಪನಿಯು ಈ ಮೊಬೈಲ್‌ ಅನ್ನು ಅಗ್ಗದ ಬೆಲೆಗೆ ಪರಿಚಯಿಸಿದೆ. ನೀವು, ಕೇವಲ 6,499 ರೂ.ಗೆ ಕೊಳ್ಳಬಹುದು. ಅಂದಹಾಗೆ, ಈ ಸ್ಮಾರ್ಟ್‌ಫೋನ್ ನಾಳೆ (ನವೆಂಬರ್ 26) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಟೆಕ್ನೋ ಪಾಪ್ 9 4G ಮೊಬೈಲ್ ಕೇವಲ 6GB RAM + 64GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಮೀಡಿಯಾ ಟೆಕ್ ಹೆಲಿಯೊ G50 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು 13 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಸಜ್ಜಾಗಿದೆ.

ನಾಳೆ Tecno POP 9 ಸೇಲ್: ಕೇವಲ 6,499 ರೂ.! ಖರೀದಿಗೆ ಕ್ಯೂ ಗ್ಯಾರಂಟಿ

ಟೆಕ್ನೋ ಪಾಪ್ 9 4G ಬೆಲೆ ಮತ್ತು ಲಭ್ಯತೆ

ಕಂಪನಿಯು ಟೆಕ್ನೋ ಪಾಪ್ 9 4G ಫೋನಿನ 6GB RAM + 64GB ಸ್ಟೋರೇಜ್‌ ರೂಪಾಂತರವನ್ನು ಕೇವಲ 6,699 ರೂ.ಗೆ ಬಿಡುಗಡೆ ಮಾಡಿದೆ. ಫೋನಿನ ಮೊದಲ ಮಾರಟದ ಪ್ರಯುಕ್ತ 200 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ. ರಿಯಾಯಿತಿಯೊಂದಿಗೆ ನೀವು, ಕೇವಲ 6,499 ರೂ.ಗೆ ಈ ಮೊಬೈಲ್ ಕೊಳ್ಳಬಹುದು. ಇದು ಗ್ಲಿಟರಿ ವೈಟ್, ಲೈಮ್ ಗ್ರೀನ್ ಮತ್ತು ಸ್ಟಾರ್ಟ್ರೈಲ್ ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಕಂಪನಿಯು ನಾಳೆ (ನವೆಂಬರ್ 26) ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ ಮೂಲಕ ಫೋನನ್ನು ಮಾರಾಟ ಮಾಡಲಿದೆ.

ಟೆಕ್ನೋ ಪಾಪ್ 9 4G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಪಾಪ್ 9 4G ಮೊಬೈಲ್ 90Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಹೆಚ್‌ಡಿ ಪ್ಲಸ್‌ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಮತ್ತು 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ನೂತನ ಟೆಕ್ನೋ ಪಾಪ್ 9 4G ಫೋನ್ ಮೀಡಿಯಾ ಟೆಕ್ ಹೆಲಿಯೊ G50 ಆಕ್ಟಾ ಕೋರ್ ಪ್ರೊಸೆಸರ್‌ ಹೊಂದಿದೆ. ಈ ಪ್ರೊಸೆಸರ್ 2.2GHz ಗಡಿಯಾರದ ವೇಗದಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಗೋ ಆವೃತ್ತಿಯ ಹೈ ಓಎಸ್‌ 14 ನೊಂದಿಗೆ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್‌ ಆಯ್ಕೆ

ಟೆಕ್ನೋ ಪಾಪ್ 9 4G ಸ್ಮಾರ್ಟ್‌ಫೋನ್ 6GB RAM ಹೊಂದಿದೆ. ಜೊತೆಗೆ 3GB ವರ್ಚುವಲ್ RAM ಸಹ ಲಭ್ಯವಿದೆ. ನೀವು 3GB ಭೌತಿಕ RAM ಜೊತೆಗೆ 6GB ಬಳಸಬಹುದು. ಇದು 64GB ಸ್ಟೋರೇಜ್ ಆಯ್ಕೆ ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್‌ ಹೆಚ್ಚಿಸಬಹುದು.

ನಾಳೆ Tecno POP 9 ಸೇಲ್: ಕೇವಲ 6,499 ರೂ.! ಖರೀದಿಗೆ ಕ್ಯೂ ಗ್ಯಾರಂಟಿ

ಕ್ಯಾಮೆರಾ ಸೆಟಪ್

ಟೆಕ್ನೋ ಪಾಪ್ 9 4G ಮೊಬೈಲ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಶ್‌ ಮತ್ತು PDAF ತಂತ್ರಜ್ಞಾನ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಟೆಕ್ನೋ ಪಾಪ್ 9 4G ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

ಇತರೆ ವೈಶಿಷ್ಟ್ಯಗಳು

ಟೆಕ್ನೋ ಪಾಪ್ 9 4G ಸ್ಮಾರ್ಟ್‌ಫೋನ್ ಧೂಳು ಮತ್ತು ಸ್ಪ್ಲಾಶ್ ನಿರೋಧಕ IP54 ರೇಟಿಂಗ್ ಪಡೆದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಐಆರ್ ಸೆನ್ಸಾರ್ ತಂತ್ರಜ್ಞಾನ ಹೊಂದಿದೆ. ಜೊತೆಗೆ 3.5 ಎಂಎಂ ಆಡಿಯೋ ಜಾಕ್, ಸ್ಟೀರಿಯೋ ಸ್ಪೀಕರ್‌ಗಳು, ಡಿಟಿಎಸ್ ಸಹ ಹೊಂದಿದೆ. ಇದರೊಂದಿಗೆ 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.1, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ, ಎನ್‌ಎಫ್‌ಸಿ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Tecno POP 9 4G First Sale Start Tomorrow via Flipkart: Price Starts at Rs 6,699: know offers, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+