ಸದ್ದಿಲ್ಲದೆ TECNO POP 9 5G ಲಾಂಚ್: 48MP ಎಐ ಕ್ಯಾಮೆರಾ.. ಕೇವಲ 9,499 ರೂ.!
ಟೆಕ್ನೋ ತನ್ನ ಭಾರತೀಯ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಹೊಸ ಪವರ್‌ಫುಲ್ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಿದೆ. ಇದನ್ನು ಟೆಕ್ನೋ ಪಾಪ್ 9 5G (Tecno Pop 9 5G) ಹೆಸರಿನೊಂದಿಗೆ ಬಿಡುಗಡೆ ಮಾಡಲಾಗಿದೆ. ಕಂಪನಿಯು ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಅಳವಡಿಸಿದೆ. ಇದು, ವಿಶಿಷ್ಟ ಸ್ಕಿನ್ ವಿನ್ಯಾಸ, 48 ಮೆಗಾಪಿಕ್ಸೆಲ್ ಎಐ ಹಿಂಬದಿಯ ಕ್ಯಾಮೆರಾ, 8GB RAM, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಟೆಕ್ನೋ ಪಾಪ್ 9 5G ಫೋನ್ ಹಿಂಭಾಗದ ಪ್ಯಾನೆಲ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ರಿಂಗ್ ಎಲ್‌ಇಡಿ ಲೈಟ್ ಹೊಂದಿದೆ. ಮುಂಭಾಗದ ಫಲಕವು ಸಮತಟ್ಟಾಗಿದೆ. ಡಿಸ್ಪ್ಲೇಯ ಮೇಲೆ ಸೆಲ್ಫಿ ಕ್ಯಾಮೆರಾಗಾಗಿ ಪಂಚ್ ಹೋಲ್ ಕಟೌಟ್ ನಾಚ್ ಇದೆ. ಜೊತೆಗೆ, ನೀರು ಮತ್ತು ಧೂಳಿನಿಂದ ಸಾಧನವನ್ನು ರಕ್ಷಣೆಗೆ IP54 ರೇಟಿಂಗ್ ಪಡೆದಿದೆ. ಈ ಫೋನಿನ ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್ ಇದೆ. ಇದಲ್ಲದೆ, ಟೆಕ್ನೋ ಪಾಪ್ 9 5G ಯೊಂದಿಗೆ ಬಾಕ್ಸ್‌ನಲ್ಲಿ ಎರಡು ಸ್ಕಿನ್‌ಗಳು ಸಹ ಲಭ್ಯವಿರುತ್ತವೆ.

ಟೆಕ್ನೋ ಪಾಪ್ 9 5G ಫೋನಿನ ಬೆಲೆ ಮತ್ತು ಆಫರ್‌ಗಳು
ಟೆಕ್ನೋ ಪಾಪ್ 9 5G ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 4GB RAM+64GB ವೇರಿಯಂಟ್ ಬೆಲೆ 9,499 ರೂ. ಆಗಿದೆ. ಮತ್ತು ಟಾಪ್ ಮಾಡೆಲ್ 4GB RAM+128GB ಬೆಲೆ 9,999 ರೂ. ಇದೆ. ನೀವು, ಮಿಡ್‌ನೈಟ್ ಶಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟವಾಗುತ್ತದೆ. ಪ್ರಸ್ತುತ, ನೀವು ಅಮೇಜಾನ್‌ನಲ್ಲಿ ಮುಂಗಡ ಬುಕಿಂಗ್ ಮಾಡಬಹುದು.
ಟೆಕ್ನೋ ಪಾಪ್ 9 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಕಂಪನಿಯು ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನಿನಲ್ಲಿ ದೊಡ್ಡ 6.67 ಇಂಚಿನ IPS LCD ಡಿಸ್ಪ್ಲೇಯನ್ನು ಅಳವಡಿಸಿದೆ. ಇದು 120Hz ರಿಫ್ರೆಶ್ ದರ ಮತ್ತು ಹೆಚ್ಚಿನ ರೆಸಲ್ಯೂಶನ್ ಹೊಂದಿದೆ.
ಪ್ರೊಸೆಸರ್: ಟೆಕ್ನೋ ಪಾಪ್ 9 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್ ಅನ್ನು ಹೊಂದಿದೆ. ಇದು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ಮಾಡಿದ ಪ್ರೊಸೆಸರ್ ಆಗಿದೆ. ಗೇಮಿಂಗ್ ಸೇರಿದಂತೆ ಇತರ ಕಾರ್ಯಾಚರಣೆಗಳಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ಟೆಕ್ನೋ ಪಾಪ್ 9 5G ಫೋನ್ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ, ವಿಸ್ತೃತ RAM ಸಹಾಯದಿಂದ 4GB ಬೆಂಬಲವನ್ನು ಒದಗಿಸಲಾಗಿದೆ. ಅಂದರೆ, ನೀವು 8GB ವರೆಗೆ ಶಕ್ತಿಯನ್ನು ಬಳಸಬಹುದು.
ಕ್ಯಾಮೆರಾ: ಕಂಪನಿಯು ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ ಅನ್ನು ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಇದು ಎಲ್ಇಡಿ ಫ್ಲ್ಯಾಷ್ ಮತ್ತು ರಿಂಗ್ ಎಲ್ಇಡಿ ಲೈಟ್‌ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ IMX582 ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ.
ಬ್ಯಾಟರಿ: ಟೆಕ್ನೋ ಪಾಪ್ 9 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ದೀರ್ಘವಾದ ಬ್ಯಾಕಪ್ ಅನ್ನು ನೀಡುತ್ತದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಬೆಂಬಲವಿದೆ.
ಇತರೆ ವೈಶಿಷ್ಟ್ಯಗಳು: ಟೆಕ್ನೋ ಪಾಪ್ 9 5G ಫೋನ್ ನೀರು ಮತ್ತು ಧೂಳು ನಿರೋಧಕ IP54 ರೇಟಿಂಗ್, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮೋಸ್, ಡ್ಯುಯಲ್ ಸಿಮ್ 5G, Wi-Fi ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








