ಕೇವಲ 9,999 ರೂ.! 6.67 ಡಿಸ್ಪ್ಲೇ.. ದೊಡ್ಡ ಬ್ಯಾಟರಿ.. ಯಾವ ಫೋನ್? ಯಾವಾಗ ಬರುತ್ತೆ?
ಟೆಕ್ನೋ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ. 9,999 ರೂ.ಗಿಂತ ಕಡಿಮೆ ಬೆಲೆಗೆ ಬರುತ್ತಿದೆ ಹೊಸ ಫೋನ್. ಹೌದು, ಅಗ್ಗದ ಮೊಬೈಲ್‌ಗಳಿಗೆ ಪ್ರಸಿದ್ಧವಾಗಿರುವ ಟೆಕ್ನೋ (TECNO) ಕಂಪನಿಯು, ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಇದು ಟೆಕ್ನೋ ಪಾಪ್ 9 (TECNO POP 9) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಂಪನಿಯು, ನೂತನ ಫೋನಿನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಅಗ್ಗದೆ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ ಎನ್ನುವುದನ್ನು ತಿಳಿಯೋಣ ಬನ್ನಿ.
ಟೆಕ್ನೋ ಪಾಪ್ 9 ಮಿಡಿಯಾಟೆಕ್ ಹೆಲಿಯೊ G50 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಭಾರತದ ಮೊದಲ ಫೋನ್ ಇದಾಗಿದೆ. ಫೋನಿನಲ್ಲಿ 90Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ದೊಡ್ಡ ಡಿಸ್ಪ್ಲೇ ಇರಲಿದೆ. ಈ ಫೋನ್ 6GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಜೊತೆಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ ಮತ್ತು 15W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಟೆಕ್ನೋ ಪಾಪ್ 9 ಫೋನಿನ ಬಿಡುಗಡೆ ದಿನಾಂಕ
ಕಂಪನಿಯು ತನ್ನ ಹೊಸ ಟೆಕ್ನೋ ಪಾಪ್ 9 ಫೋನನ್ನು ಇದೇ ನವೆಂಬರ್ 22 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ, ಫೋನಿನ ಮೈಕ್ರೋ ಸೈಟ್ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. ಈ ಮೂಲಕ ಟೆಕ್ನೋ ಪಾಪ್ 9 ಫೋನಿನ ಫೋಟೋ ಮತ್ತು ವಿಶೇಷತೆಗಳನ್ನು ಸಹ ಬಹಿರಂಗಪಡಿಸಲಾಗಿದೆ. ಮಾಹಿತಿಯ ಪ್ರಕಾರ, ಕಂಪನಿಯು ಟೆಕ್ನೋ ಪಾಪ್ 9 ಅನ್ನು 9,999 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಿದೆ.
ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯ
ಟೆಕ್ನೋ ತನ್ನ ಮುಂಬರುವ ಅಗ್ಗದ ಟೆಕ್ನೋ ಪಾಪ್ 9 ಫೋನನ್ನು ಮೂರು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ನೀವು ಗ್ಲಿಟರಿ ವೈಟ್, ಲೈಮ್ ಗ್ರೀನ್ ಮತ್ತು ಸ್ಟಾರ್‌ಟ್ರೈಲ್ ಕಪ್ಪು ಬಣ್ಣಗಳಲ್ಲಿ ಖರೀದಿಸಬಹುದು.
ಟೆಕ್ನೋ ಪಾಪ್ 9 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಟೆಕ್ನೋ ಪಾಪ್ 9 ಮೊಬೈಲ್ 6.67 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 90Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಇದು ಪಂಚ್ ಹೋಲ್ ಶೈಲಿಯ ಡಿಸ್ಪ್ಲೇ ಆಗಿದೆ.
ಪ್ರೊಸೆಸರ್ ಸಾಮರ್ಥ್ಯ
ಮೊದಲೇ ಹೇಳಿದಂತೆ, ಟೆಕ್ನೋ ಪಾಪ್ 9 ಫೋನ್ ಮೀಡಿಯಾ ಟೆಕ್ ಹೆಲಿಯೊ G50 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಈ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಈ ಪ್ರೊಸೆಸರ್ 2.2GHz ಗಡಿಯಾರದ ವೇಗದಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಟೆಕ್ನೋ ಪಾಪ್ 9 ಮೊಬೈಲ್ 6GB RAM ನೊಂದಿಗೆ ಬರಲಿದೆ. ಇದು ವರ್ಚುವಲ್ RAM ಸಹ ಒಳಗೊಂಡಿರುತ್ತದೆ. ಫೋನಿನ ಭೌತಿಕ RAM 3GB ಅಥವಾ 4GB ಆಗಿರಲಿದೆ. ಈ ಮೊಬೈಲ್ ಮೀಡಿಯಾ ಫೈಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ಡೇಟಾವನ್ನು ಸಂಗ್ರಹಿಸಲು 64GB ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ನೀವು, ಮೆಮೊರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಹೆಚ್ಚಿಸಬಹುದು.
ಕ್ಯಾಮೆರಾ ಸೆಟಪ್
ಮುಂಬರುವ ಟೆಕ್ನೋ ಪಾಪ್ 9 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ. ಇದು PDAF ತಂತ್ರಜ್ಞಾನದೊಂದಿಗೆ ಬರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಟೆಕ್ನೋ ಪಾಪ್ 9 ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 10W ಅಥವಾ 15W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.


Click it and Unblock the Notifications








