₹7,749 ರೂ.ಗೆ Tecno Pop X ಲಾಂಚ್: 5,000mAh ಬ್ಯಾಟರಿ ಫೋನ್!
ಭಾರತದ ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ಸ್ಪರ್ಧಿಯಾಗಿ ಬಹುನಿರೀಕ್ಷಿತ Tecno Pop X ಸ್ಮಾರ್ಟ್‌ಫೋನ್ ಇಂದು (ಮಾರ್ಚ್ 04) ಭರ್ಜರಿಯಾಗಿ ಬಿಡುಗಡೆಯಾಗಿದೆ. ಟ್ರಾನ್ಸ್ಷನ್ ಗ್ರೂಪ್ ಒಡೆತನದ Tecno ದಿಂದ ಬಿಡುಗಡೆಯಾಗಿರುವ ಈ ಹೊಸ ಸಾಧನವು, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೆ, IP64 ರೇಟಿಂಗ್ ಮತ್ತು 5,000mAh ಬ್ಯಾಟರಿ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಬ್ಯಾಂಕ್ ಕೊಡುಗೆಯ ಜೊತೆಗೆ ಕೇವಲ 7,749 ರೂ.ಗೆ ಖರೀದಿಗೆ ಲಭ್ಯವಾಗುತ್ತಿದೆ. ಈ ಹೊಸ ಬಜೆಟ್ ಫೋನ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Tecno Pop X: ಬೆಲೆ ಮತ್ತು ಲಭ್ಯತೆ!
ಭಾರತದಲ್ಲಿ Tecno Pop X ಸ್ಮಾರ್ಟ್‌ಫೋನ್‌ನ ಬೆಲೆ ₹8,499 ಆಗಿದ್ದು, ಇದು 4GB RAM ಹಾಗೂ 64GB ಸ್ಟೋರೇಜ್ ಹೊಂದಿರುವ ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ. ಆದರೆ HDFC ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ವಿಶೇಷ ರಿಯಾಯಿತಿ ದೊರೆಯಲಿದ್ದು, ಈ ಫೋನ್ ಅನ್ನು ₹7,749 ಕ್ಕೆ ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಮಾರ್ಚ್ 6ರಿಂದ ಅಮೆಜಾನ್, ಆನ್‌ಲೈನ್ ವೇದಿಕೆಗಳು ಹಾಗೂ ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.
Tecno Pop X: ಪ್ರಮುಖ ವೈಶಿಷ್ಟ್ಯಗಳು
Tecno Pop X ಡ್ಯುಯಲ್ ಸಿಮ್ ಫೋನ್ ಆಗಿದ್ದು, ಕಂಪನಿಯ HiOS 15 ಬಳಕೆದಾರ ಇಂಟರ್ಫೇಸ್‌ನೊಂದಿಗೆ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಲಾಗಿದೆ. ಆದರೆ, ಚಿಪ್‌ಸೆಟ್ ಹೆಸರನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಪ್ರೊಸೆಸರ್ ವಿವರವನ್ನು ಬಹಿರಂಗಪಡಿಸದಿದ್ದರೂ, ಸಾಮಾನ್ಯ ಬಳಕೆಗೆ ತಕ್ಕಂತೆ ಆಪ್ಟಿಮೈಸ್ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಈ ಫೋನ್ 4GB LPDDR4x RAM ಮತ್ತು 64GB eMMC ಸಂಗ್ರಹಣೆಯನ್ನು ಹೊಂದಿದೆ.

ಡಿಸ್‌ಪ್ಲೇ ವಿಭಾಗದಲ್ಲಿ Tecno Pop X ಫೋನಿನಲ್ಲಿ 6.75 ಇಂಚಿನ HD+ LCD ಪರದೆ ಹೊಂದಿದೆ. ಡಿಸ್‌ಪ್ಲೆಯು 120Hz ರಿಫ್ರೆಶ್ ರೇಟ್ ಬೆಂಬಲ ಹೊಂದಿದ್ದು, ಈ ಬೆಲೆ ವಿಭಾಗದಲ್ಲಿ 120Hz ಪರದೆ ದೊರೆಯುವುದು ಗಮನಾರ್ಹ ಅಂಶ ಎನ್ನಬಹುದು. ಕ್ಯಾಮೆರಾ ವಿಭಾಗದಲ್ಲಿ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ದಿನನಿತ್ಯದ ಫೋಟೋ ಹಾಗೂ ಸೋಷಿಯಲ್ ಮೀಡಿಯಾ ಅಪ್‌ಲೋಡ್‌ಗಳಿಗೆ ಸೂಕ್ತವಾದಂತಿದೆ.
ಬ್ಯಾಟರಿ ವಿಭಾಗದಲ್ಲಿ, Tecno Pop X 5,000mAh ಬ್ಯಾಟರಿ ಹೊಂದಿದ್ದು, 15W ಚಾರ್ಜಿಂಗ್ ಬೆಂಬಲಿಸುತ್ತದೆ. ಒಂದು ದಿನದ ಸಾಮಾನ್ಯ ಬಳಕೆಗೆ ಸಾಕಷ್ಟು ಬ್ಯಾಟರಿ ಬ್ಯಾಕಪ್ ನಿರೀಕ್ಷಿಸಬಹುದು. ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi, Bluetooth 5.2, GPS ಹಾಗೂ USB Type-C ಪೋರ್ಟ್ ಸೇರಿವೆ. . ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಧೂಳು ಮತ್ತು ಸಣ್ಣ ಪ್ರಮಾಣದ ನೀರಿನ ಸಿಂಪಡಣೆಗಳಿಂದ ರಕ್ಷಣೆಗೆ IP64 ರೇಟಿಂಗ್ ಇದೆ. ಮತ್ತು 3. 5mm ಹೆಡ್‌ಫೋನ್ ಜಾಕ್ ಇರುವುದು ಉತ್ತಮವಾಗಿದೆ.
ಒಟ್ಟಾರೆಯಾಗಿ, ಕಡಿಮೆ ಬೆಲೆಯಲ್ಲಿ 120Hz ಪರದೆ, ದೊಡ್ಡ ಬ್ಯಾಟರಿ ಮತ್ತು IP64 ರಕ್ಷಣೆ ಸೇರಿದಂತೆ ಪ್ರಮುಖ ಫೀಚರ್‌ಗಳನ್ನು ನೀಡುವ Tecno Pop X, ಭಾರತದಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವವರಿಗೆ ಗಮನಾರ್ಹ ಹೊಸ ಆಯ್ಕೆಯಾಗಿದೆ. ಬೆಲೆ-ಪ್ರಮಾಣದಲ್ಲಿ ಸಮತೋಲನ ಹೊಂದಿರುವ ಈ ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುವ ಸಾಧ್ಯತೆಯಿದೆ. ಈ ಫೋನ್, ವಿದ್ಯಾರ್ಥಿಗಳು ಮತ್ತು ಪ್ರಥಮ ಬಾರಿಗೆ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಸೂಕ್ತ ಆಯ್ಕೆಯಾಗಬಹುದು.


Click it and Unblock the Notifications








