Home
ಮೊಬೈಲ್

ಎದುರಾಳಿಗಳಿಗೆ ನಡುಕ! ಬರಲಿದೆ ಹೊಸ Tecno 5G ಫೋನ್; 108MP ಕ್ಯಾಮೆರಾ.. 256GB ಸ್ಟೋರೇಜ್‌.. ಬೆಲೆ ಇಷ್ಟೆನಾ?

ಟೆಕ್ನೋ ಸಂಸ್ಥೆಯು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಜ್ಜಾಗಿದೆ. ಇದನ್ನು ಕಡಿಮೆ ಬಜೆಟ್‌ನಲ್ಲಿ ಪರಿಚಯಿಸಲಿದೆ. ಹೌದು, ಟೆಕ್ ಬ್ರ್ಯಾಂಡ್ ಟೆಕ್ನೋ ತನ್ನ 'POVA' ಸರಣಿಯಲ್ಲಿ Tecno POVA 6 Pro ಮತ್ತು Tecno POVA 6 Neo 5G ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದೀಗ, ಈ ಸರಣಿಯ ಅಡಿಯಲ್ಲಿ ಮತ್ತೊಂದು ಹೊಸ ಮೊಬೈಲ್ ತರುತ್ತಿದೆ. ಅದುವೇ ಟೆಕ್ನೋ ಪೋವಾ 6 5G (Tecno POVA 6 5G) ಸ್ಮಾರ್ಟ್‌ಫೋನ್. ಈ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಮುಂಬರುವ ಟೆಕ್ನೋ ಪೋವಾ 6 5G ಫೋನಿನ ಫೋಟೋ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ.

ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಮೂಲಕ ಟೆಕ್ನೋ ಪೋವಾ 6 5G ಫೋನಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಈ ಮೊಬೈಲ್‌ನ ಲುಕ್ ಟೆಕ್ನೋ ಸ್ಪಾರ್ಕ್ 20 ಪ್ರೊ ಫೋನಿಗೆ ಹೋಲುತ್ತದೆ. ಫೋನಿನ ಹಿಂಭಾಗದಲ್ಲಿ ದೊಡ್ಡ ಚೌಕಾಕಾರದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಕಾಣಬಹುದು. ಇದು ಮೂರು ಲೆನ್ಸ್‌ಗಳು ಮತ್ತು ಫ್ಲ್ಯಾಷ್ ಲೈಟ್ ಹೊಂದಿದೆ. ಈ ಫೋನಿನ ಬಲ ಭಾಗದಲ್ಲಿ ವಾಲ್ಯೂಮ್ ಬಟನ್‌ ಇದೆ. ಇದರ ಕೆಳಗೆ ಫಿಂಗರ್‌ಪ್ರಿಂಟ್ ಸೆನ್ಸರ್ ಎಂಬೆಡೆಡ್ ಪವರ್ ಬಟನ್ ಕಾಣಬಹುದು. ಈ ಫೋನ್ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ.

ಶೀಘ್ರವೇ Tecno Pova 6 ಲಾಂಚ್; 108MP ಕ್ಯಾಮೆರಾ, 256GB ಸ್ಟೋರೇಜ್‌; ಬೆಲೆ ನೋಡಿ

ಟೆಕ್ನೋ ಪೋವಾ 6 5G ವೈಶಿಷ್ಟ್ಯಗಳು (ಸೋರಿಕೆ)

ಟಿಪ್‌ಸ್ಟರ್ ಮೂಲಕ ಟೆಕ್ನೋ ಪೋವಾ 6 5G ವೈಶಿಷ್ಟ್ಯಗಳು ಬಹಿರಂಗವಾಗಿವೆ. ಅದರಂತೆ ಟೆಕ್ನೋ ಪೋವಾ 6 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 3x ಆಪ್ಟಿಕಲ್ ಜೂಮ್ ಬೆಂಬಲದೊಂದಿಗೆ 108 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6.5 ಇಂಚುಗಳಿಗಿಂತ ದೊಡ್ಡದಾದ ಡಿಸ್ಪ್ಲೇ ಹೊಂದಿರಲಿದೆ. ಇದು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಪಂಚ್ ಹೋಲ್ ಡಿಸ್ಪ್ಲೇಯನ್ನು ಒಳಗೊಂಡಿರುತ್ತದೆ.

ಟೆಕ್ನೋ ಪೋವಾ 6 5G ಫೋನನ್ನು 8GB RAM + 256GB ಸ್ಟೋರೇಜ್‌ನೊಂದಿಗೆ ಬಿಡುಗಡೆ ಮಾಡಲಾಗುವುದು. ಇದು ಫೋನಿನ ಟಾಪ್ ರೂಪಾಂತರವಾಗಿರಲಿದೆ. ಮತ್ತು ಮೂಲ ರೂಪಾಂತರವನ್ನು 128GB ಸ್ಟೋರೇಜ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಈ ಟೆಕ್ನೋ ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುತ್ತದೆ. ಇದನ್ನು ಚಾರ್ಜ್‌ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.

ಟೆಕ್ನೋ ಪೋವಾ 6 ಪ್ರೊ ಬೆಲೆ

ಟೆಕ್ನೋ ಪೋವಾ 6 ಪ್ರೊ ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವನ್ನು 19,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಮತ್ತು 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 21,999 ರೂ. ಆಗಿದೆ. ಪ್ರಸ್ತುತ, ಈ ಎರಡೂ ರೂಪಾಂತರಗಳು ಕಡಿಮೆ ದರದಲ್ಲಿ ಖರೀದಿಗೆ ಲಭ್ಯವಿದೆ. ಮುಂಬರುವ ಟೆಕ್ನೋ ಪೋವಾ 6 5G ಮೊಬೈಲ್ ಬೆಲೆ ಸಹ ಇದೇ ಬಜೆಟ್‌ನಲ್ಲಿ ಇರುವ ಸಾಧ್ಯತೆಯಿದೆ.

ಶೀಘ್ರವೇ Tecno Pova 6 ಲಾಂಚ್; 108MP ಕ್ಯಾಮೆರಾ, 256GB ಸ್ಟೋರೇಜ್‌; ಬೆಲೆ ನೋಡಿ

ಟೆಕ್ನೋ ಪೋವಾ 6 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 2160Hz PWM ಡಿಮ್ಮಿಂಗ್‌ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಟೆಕ್ನೋ ಪೋವಾ 6 ಪ್ರೊ ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 6080 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ 12GB ವಿಸ್ತೃತ RAM ಹೊಂದಿದೆ. ನೀವು ಭೌತಿಕ RAM ಜೊತೆಗೆ 24GB RAM ಬಳಸಬಹುದು.

ಟ್ರಿಪಲ್ ಕ್ಯಾಮೆರಾ ಸೆಟಪ್

ಟೆಕ್ನೋ ಪೋವಾ 6 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 3x ಜೂಮ್ ಮತ್ತು 10x ಡಿಜಿಟಲ್ ಜೂಮ್ ಬೆಂಬಲ ಇದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು ಎಐ ಕ್ಯಾಮೆರಾ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 70W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
Tecno Pova 6 5G with 108MP camera smartphone teaser released launch coming soon: check specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+