Home
ಮೊಬೈಲ್

Tecno: ಬರ್ತಿದೆ ಪವರ್‌ಫುಲ್‌ ಫೋನ್: ಹೇಗಿದೆ.. ಯಾವಾಗ ಲಾಂಚ್?

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 5G ಮೊಬೈಲ್‌ಗಳ ಅಬ್ಬರ ಜೋರಾಗಿದೆ. ಹಲವು ಕಂಪನಿಗಳು ಪೈಪೋಟಿಗೆ ಬಿದ್ದಂತೆ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಸಾಲಿಗೆ ಟೆಕ್ನೋ ಕೂಡ ಸೇರ್ಪಡೆಯಾಗಿದೆ. ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಟೆಕ್ನೋ ಶೀಘ್ರದಲ್ಲೇ ಪೋವಾ (Pova) ಸರಣಿಯಲ್ಲಿ ಹೊಸ ಮೊಬೈಲ್‌ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ ಟೆಕ್ನೋ ಪೋವಾ 6 ನಿಯೋ 5G (Tecno Pova 6 Neo 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಟೆಕ್ನೋ ಕಂಪನಿಯು ಶೀಘ್ರದಲ್ಲೇ ಟೆಕ್ನೋ ಪೋವಾ 6 ನಿಯೋ 5G ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದು Tecno Pova 6 Neo 4G ಫೋನಿನ ಉತ್ತರಾಧಿಕಾರಿಯಾಗಿ ಬರಲಿದೆ. ಇತ್ತೀಚೆಗೆ ಟಿಪ್‌ಸ್ಟರ್ ಈ ಫೋನಿನ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮುಂಬರು ಹೊಸ ಮೊಬೈಲ್‌ನ ಪ್ರಮುಖ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಬನ್ನಿ, ಈ ಹೊಸ ಫೋನಿನ ಬಿಡುಗಡೆ ವಿವರ ಮತ್ತು ವೈಶಿಷ್ಷ್ಯಗಳನ್ನು ತಿಳಿಯೋಣ.

Tecno: ಬರ್ತಿದೆ ಜಬರ್ದಸ್ತ್‌ ಫೋನ್: ಹೇಗಿದೆ.. ಯಾವಾಗ ಲಾಂಚ್?

ಟೆಕ್ನೋ ಪೋವಾ 6 ನಿಯೋ 5G ಬಿಡುಗಡೆ ವಿವರಗಳು

ಜನಪ್ರಿಯ ಟಿಪ್‌ಸ್ಟರ್ ಮುಕುಲ್ ಶರ್ಮಾ ಅವರು ಟೆಕ್ನೋ ಪೊವಾ 6 ನಿಯೋ 5G ಫೋನಿನ ವಿವರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಟಿಪ್‌ಸ್ಟರ್ ಪೋಸ್ಟ್ ಈ ಫೋನ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸೂಚಿಸುತ್ತದೆ. ವರದಿಯ ಪ್ರಕಾರ, ಈ ಮೊಬೈಲ್ AIGC ಪೋರ್ಟ್ರೇಟ್, ಎಐ (AI) ಕಟೌಟ್, ಎಐ ಮ್ಯಾಜಿಕ್ ಎರೇಸರ್ ಮತ್ತು Ask AI ನಂತಹ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಟೆಕ್ನೋ ಪೋವಾ 6 ನಿಯೋ 4G ವೈಶಿಷ್ಟ್ಯಗಳು

ಶೀಘ್ರದಲ್ಲೇ ಟೆಕ್ನೋ ಪೋವಾ 6 ನಿಯೋ 5G ಬಿಡುಗಡೆ ಕುರಿತು ಟೆಕ್ನೋ ಕಂಪನಿಯಿಂದ ಅಧಿಕೃತ ಪ್ರಕಟಣೆ ಬರಲಿದೆ. ಟೆಕ್ನೋ ಪೋವಾ 6 ನಿಯೋ 4G ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಫೋನನ್ನು ಈ ವರ್ಷದ ಏಪ್ರಿಲ್‌ನಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು. ಇದರ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.

ಡಿಸ್ಪ್ಲೇ: ಟೆಕ್ನೋ ಪೋವಾ 6 ನಿಯೋ 4G ಫೋನ್ 6.78-ಇಂಚಿನ ಪೂರ್ಣ HD+ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಕಟೌಟ್ (ನಾಚ್), 120 Hz ರಿಫ್ರೆಶ್ ದರವನ್ನು ಹೊಂದಿದೆ.

ಪ್ರೊಸೆಸರ್: ಟೆಕ್ನೋ ಪೋವಾ 6 ನಿಯೋ 4G ಅನ್ನು MediaTek Helio G99 ಅಲ್ಟಿಮೇಟ್ ಆಕ್ಟಾಕೋರ್ ಪ್ರೊಸೆಸರ್ 6ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಚಿಪ್‌ಸೆಟ್‌ನ ಗಡಿಯಾರದ ವೇಗ 2.2 GHz ಆಗಿದೆ.

ಸ್ಟೋರೇಜ್: ಟೆಕ್ನೋ ಪೋವಾ 6 ನಿಯೋ 4G ಸ್ಮಾರ್ಟ್‌ಫೋನ್ 8GB RAM, 8GB ವರ್ಚುವಲ್ RAM ಹೊಂದಿದೆ. ಇದು 128GB ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ವರ್ಚುವಲ್ RAM ವೈಶಿಷ್ಟ್ಯದೊಂದಿಗೆ, 16GB RAM ಶಕ್ತಿಯನ್ನು ಒದಗಿಸುತ್ತದೆ.

ಕ್ಯಾಮೆರಾ: ಟೆಕ್ನೋ ಪೋವಾ 6 ನಿಯೋ 4G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಎಐ (AI) ಸೆಕೆಂಡರಿ ಲೆನ್ಸ್ ಅನ್ನು ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಇತರೆ ವೈಶಿಷ್ಟ್ಯಗಳು: ಟೆಕ್ನೋ ಪೋವಾ 6 ನಿಯೋ 4G ಫೋನ್ ಡ್ಯುಯಲ್ ಸಿಮ್, 4G, 3.5 ಎಂಎಂ ಆಡಿಯೋ ಜ್ಯಾಕ್, ಸ್ಟೀರಿಯೋ ಸ್ಪೀಕರ್‌ಗಳು, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 5 GHz ವೈ-ಫೈ, ಬ್ಲೂಟೂತ್ 5.1 ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Tecno Pova 6 Neo 5G india launch soon, details leaked: Expected specs, price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+