Home
ಮೊಬೈಲ್

12000 ಸಾಕು! 18% ಡಿಸ್ಕೌಂಟ್.. 108MP ಕ್ಯಾಮೆರಾ.. 256GB ಸ್ಟೋರೇಜ್‌; ಯಾವ ಫೋನ್?

ಟೆಕ್ನೋ ಮೊಬೈಲ್‌ಗಳಿಗೆ ಭಾರತದಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ಹೀಗಾಗಿ, ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಕನ್ನಡತಿ ಹಾಗೂ ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಸಹ ಟೆಕ್ನೋ ಮೊಬೈಲ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮಾರಾಟ ಮಾಡುವ ಸ್ಮಾರ್ಟ್‌ಫೋನ್‌ಗಳು ಎಲ್ಲ ಯುವಜನತೆಯನ್ನು ಆಕರ್ಷಿಸಿವೆ. ಪ್ರಸ್ತುತ, ಕಂಪನಿಯು ಟೆಕ್ನೋ ಪೋವಾ 6 ನಿಯೋ 5G (TECNO POVA 6 Neo 5G) ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಹೌದು, ಟೆಕ್ನೋ ಪೋವಾ 6 ನಿಯೋ 5G ಮೊಬೈಲ್‌ ಖರೀದಿ ಮೇಲೆ ಶೇ.18 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ನೀವು 13,000 ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಈ ಮೊಬೈಲ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಶನ್ 6300 5G ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ.

ಕೇವಲ 12000 ರೂ.! 108MP ಕ್ಯಾಮೆರಾ.. 256GB ಸ್ಟೋರೇಜ್‌.. ಯಾವ ಫೋನ್?

ಟೆಕ್ನೋ ಪೋವಾ 6 ನಿಯೋ 5G ಬೆಲೆ ಮತ್ತು ಆಫರ್‌ಗಳು

ಕಂಪನಿಯು 6GB + 128GB ಸ್ಟೋರೇಜ್‌ ರೂಪಾಂತರವನ್ನು 13,999 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ, ಇದು ಕೇವಲ 12,286 ರೂ.ಗೆ ಮಾರಾಟವಾಗುತ್ತಿದೆ. ಅಮೆಜಾನ್‌ನಲ್ಲಿ 1,000 ರೂ. ಕೂಪನ್ ರಿಯಾಯಿತಿ ಮತ್ತು 974 ರೂ. ಬ್ಯಾಂಕ್ ಡಿಸ್ಕೌಂಟ್ ಲಭ್ಯವಿದೆ. ನೀವು ಮಿಡ್‌ನೈಟ್ ಶಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್‌ ಬಣ್ಣಗಳಲ್ಲಿ ಖರೀದಿಸಬಹುದು.

ಟೆಕ್ನೋ ಪೋವಾ 6 ನಿಯೋ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಪೋವಾ 6 ನಿಯೋ 5G ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್, 240Hz ಸ್ಪರ್ಶ ಮಾದರಿ ದರ ಮತ್ತು 480 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಟೆಕ್ನೋ ಪೋವಾ 6 ನಿಯೋ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಶನ್ 6300 5G ಪ್ರೊಸೆಸರ್‌ ಹೊಂದಿದೆ. ಇದನ್ನು 6 ​​ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ತಯಾರಿಸಲಾಗಿದೆ. ಗ್ರಾಫಿಕ್ಸ್‌ಗಾಗಿ ಈ ಫೋನ್ ಮಾಲಿ G57 MC2 ಜಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ಹೈ ಓಎಸ್‌ 14.5 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್‌ ಆಯ್ಕೆ

ಟೆಕ್ನೋ ಪೋವಾ 6 ನಿಯೋ 5G ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್‌ ಹೊಂದಿದೆ. ಇದು 8GB ವಿಸ್ತೃತ ಮೆಮೊರಿ ಒಳಗೊಂಡಿದೆ. ನೀವು, ಇದರ ಸಹಾಯದಿಂದ ಒಟ್ಟು 16GB RAM ಬಳಸಬಹುದು. ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 1 TB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು.

ಕೇವಲ 12000 ರೂ.! 108MP ಕ್ಯಾಮೆರಾ.. 256GB ಸ್ಟೋರೇಜ್‌.. ಯಾವ ಫೋನ್?

ಕ್ಯಾಮೆರಾ ಸೆಟಪ್

ಟೆಕ್ನೋ ಪೋವಾ 6 ನಿಯೋ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದೊಂದಿಗೆ ದ್ವಿತೀಯ ಲೆನ್ಸ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಟೆಕ್ನೋ ಪೋವಾ 6 ನಿಯೋ 5G ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಟೆಕ್ನೋ ಪೋವಾ 6 ನಿಯೋ 5G ಸ್ಮಾರ್ಟ್‌ಫೋನ್ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಎಐ ಸೂಟ್, AIGC, ಎಐ ಮ್ಯಾಜಿಕ್ ಎರೇಸರ್, ಎಐ ಕಟೌಟ್, ಎಐ ವಾಲ್‌ಪೇಪರ್, ಎಐ ಆರ್ಟ್‌ಬೋರ್ಡ್, ಆಸ್ಕ್ ಎಐ (Ask AI) ವೈಶಿಷ್ಟ್ಯ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್ 5G, ವೈ-ಫೈ, ಬ್ಲೂಟೂತ್, ಇನ್ಫ್ರಾರೆಡ್ ಸೆನ್ಸರ್, ಎನ್‌ಎಫ್‌ಸಿ, ಲೈಟ್ ಸೆನ್ಸರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
TECNO Pova 6 Neo available with with huge discount on amazon: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+