ಇದೇ ಫೆ.13 ರಂದು ಭಾರತಕ್ಕೆ Tecno Pova Curve 2 5G ಆಗಮನ ಖಚಿತ!
ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರಾಗಿರುವ Tecno ತನ್ನ ಜನಪ್ರಿಯ Pova ಸರಣಿಗೆ ಹೊಸ ಸೇರ್ಪಡೆ ಆಗಿ Tecno Pova Curve 2 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಕಳೆದ ಕೆಲವು ವಾರಗಳಿಂದ ವದಂತಿಗಳ ಮೂಲಕವೇ ಸುದ್ದಿಯಾಗಿದ್ದ ಈ ಹೊಸ Tecno Pova Curve 2 5G ಫೋನ್, ಮುಂದಿನ ವಾರ ದೇಶದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಕಳೆದ ಮೇ 2025ರಲ್ಲಿ ಬಿಡುಗಡೆಯಾದ Tecno Pova Curve 5Gಗೆ ಉತ್ತರಾಧಿಕಾರಿಯಾಗಿ ಬರುತ್ತಿರುವ ಈ ಫೋನ್ ಡಿಸೈನ್ ಹೆಚ್ಚು ಗಮನಸೆಳೆಯುತ್ತಿದೆ.
ಹೌದು, ಅಧಿಕೃತ ಬಿಡುಗಡೆಗೂ ಮುನ್ನವೇ ಕಂಪನಿಯು Tecno Pova Curve 2 5G ಫೋನ್‌ನ ಡಿಸೈನ್ ಅನ್ನು ಬಹಿರಂಗಪಡಿಸಿದ್ದು, ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಲಭ್ಯವಾದ ಚಿತ್ರಗಳ ಪ್ರಕಾರ, ಈ ಫೋನ್ ಕರ್ವ್ಡ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿದ್ದು, ಪ್ರೀಮಿಯಂ ಲುಕ್ ನೀಡುವ ಸ್ಲಿಮ್ ಫ್ರೇಮ್ ಹಾಗೂ ದೊಡ್ಡ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಕಾಣಿಸಿಕೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಇರಬಹುದೆಂಬ ನಿರೀಕ್ಷೆಯೂ ಇದೆ. Tecno Pova Curve 2 5G ಫೋನ್ ಕುರಿತಂತೆ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.
Tecno Pova Curve 2 5G ಬಿಡುಗಡೆ ದಿನಾಂಕ
ಕಂಪನಿಯ ಅಧಿಕೃತ ಮಾಹಿತಿ ಪ್ರಕಾರ, Tecno Pova Curve 2 5G ಸ್ಮಾರ್ಟ್‌ಫೋನ್ ಫೆಬ್ರವರಿ 13ರಂದು ಮಧ್ಯಾಹ್ನ 12 ಗಂಟೆಗೆ (IST) ಭಾರತದಲ್ಲಿ ಬಿಡುಗಡೆ ಆಗಲಿದೆ. ಲಾಂಚ್ ಘೋಷಣೆಯೊಂದಿಗೆ ಹಂಚಿಕೊಂಡಿರುವ ಟೀಸರ್ ಚಿತ್ರಗಳು, ಈ ಫೋನ್ ಹಿಂದಿನ ಮಾದರಿಗಿಂತ ಹೆಚ್ಚು ಪ್ರೀಮಿಯಂ ಹಾಗೂ ಸ್ಟೈಲಿಶ್ ಲುಕ್ ಹೊಂದಿರುವುದನ್ನು ಸೂಚಿಸುತ್ತವೆ.

ಹೊಸ ವಿನ್ಯಾಸ ಮತ್ತು ಬ್ಯಾಕ್ ಪ್ಯಾನೆಲ್ ಲುಕ್
Tecno Pova Curve 2 5Gನಲ್ಲಿ ಕರ್ವ್ಡ್ ರಿಯರ್ ಪ್ಯಾನೆಲ್ ನೀಡಲಾಗಿದ್ದು, ಅಂಚುಗಳತ್ತ ಸ್ಮೂತ್ ಆಗಿ ತಿರುಗುವ ವಿನ್ಯಾಸ ಹೊಂದಿದೆ. ಹಿಂಭಾಗದಲ್ಲಿ ಮ್ಯಾಟ್ ಫಿನಿಶ್ ಜೊತೆಗೆ ಕೋನೀಯ ರೇಖೆಗಳು ಮತ್ತು ಆಕರ್ಷಕ ಪ್ಯಾಟರ್ನ್‌ಗಳು ಕಾಣಿಸಿಕೊಳ್ಳುತ್ತವೆ. ಈ ವಿನ್ಯಾಸವು ಯುವ ಬಳಕೆದಾರರು ಮತ್ತು ಗೇಮಿಂಗ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ.
ಬದಲಾಗಿರುವ ಕ್ಯಾಮೆರಾ ಮಾಡ್ಯೂಲ್
ಈ ಬಾರಿ ಕ್ಯಾಮೆರಾ ವಿನ್ಯಾಸದಲ್ಲೂ Tecno ಸ್ಪಷ್ಟ ಬದಲಾವಣೆ ತಂದಿದೆ. ಹಿಂದಿನ Pova Curve 5Gಯಲ್ಲಿ ನೇರವಾಗಿ ಸಾಲುಗಟ್ಟಿದ ಕ್ಯಾಮೆರಾಗಳಿದ್ದರೆ, ಹೊಸ ಮಾದರಿಯಲ್ಲಿ ತ್ರಿಕೋನ ಆಕಾರದ ಅಸಮಮಿತ ಕ್ಯಾಮೆರಾ ಐಲ್ಯಾಂಡ್ ನೀಡಲಾಗಿದೆ. ಎರಡು ಕ್ಯಾಮೆರಾಗಳು ಒಂದೇ ಹಾರಿಜಾಂಟಲ್ ಪಿಲ್ ಮಾಡ್ಯೂಲ್‌ನಲ್ಲಿ ಇರಲಿದ್ದು, ಮೂರನೇ ಕ್ಯಾಮೆರಾವನ್ನು ಕೆಳಭಾಗದಲ್ಲಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ. ಇದರ ಪಕ್ಕದಲ್ಲೇ LED ಫ್ಲ್ಯಾಶ್ ಹಾಗೂ ಹಿಂಭಾಗದಲ್ಲಿ Pova ಬ್ರ್ಯಾಂಡಿಂಗ್ ಸ್ಪಷ್ಟವಾಗಿ ಕಾಣಿಸುತ್ತದೆ.
Tecno Pova Curve 2 5G ಬಣ್ಣ ಆಯ್ಕೆಗಳು
Tecno ಈ ಸ್ಮಾರ್ಟ್‌ಫೋನ್ ಅನ್ನು ಮೂರು ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಕಪ್ಪು, ಬೆಳ್ಳಿ ಮತ್ತು ವೈಲೆಟ್ ಬಣ್ಣ ಆಯ್ಕೆಗಳು ಲಭ್ಯವಾಗಲಿದ್ದು, ಪ್ರತಿಯೊಂದು ಬಣ್ಣದಲ್ಲೂ ಹಿಂಭಾಗದ ಕೆಳಭಾಗದಲ್ಲಿ ಸೆಮಿ-ಟ್ರಾನ್ಸ್‌ಪರೆಂಟ್ ಅಕ್ಸೆಂಟ್ ಡಿಸೈನ್ ನೀಡಲಾಗಿದೆ. ಇದು ಫೋನ್‌ಗೆ ವಿಭಿನ್ನ ಹಾಗೂ ಟ್ರೆಂಡಿ ಲುಕ್ ನೀಡುತ್ತದೆ.
ನಿರೀಕ್ಷಿತ ಸ್ಪೆಸಿಫಿಕೇಶನ್‌ಗಳು
ಕಂಪನಿ ಇನ್ನೂ ಅಧಿಕೃತವಾಗಿ ಫೀಚರ್‌ಗಳನ್ನು ಪ್ರಕಟಿಸಿಲ್ಲ. ಆದರೆ ವರದಿಗಳ ಪ್ರಕಾರ, Tecno Pova Curve 2 5Gನಲ್ಲಿ MediaTek Dimensity 7100 (MT6858) ಪ್ರೊಸೆಸರ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ಗರಿಷ್ಠ 12GB RAM ಬೆಂಬಲಿಸುವ ಸಾಧ್ಯತೆ ಇದೆ. ಸಾಫ್ಟ್‌ವೇರ್ ವಿಚಾರದಲ್ಲಿ, ಈ ಫೋನ್ ಹೊಸ Android 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಬಹುದು. ಜೊತೆಗೆ, ಇತ್ತೀಚಿನ ಸೆರ್ಟಿಫಿಕೇಶನ್ ಮಾಹಿತಿಯ ಪ್ರಕಾರ, ಇದರಲ್ಲಿ ದೊಡ್ಡ 7,750mAh ಬ್ಯಾಟರಿ ಇರಲಿದ್ದು, ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುವ ನಿರೀಕ್ಷೆ ಇದೆ.
ಒಟ್ಟಾರೆಯಾಗು, Tecno Pova Curve 2 5G ಫೋನ್ ಬಜೆಟ್ ಸೆಗ್ಮೆಂಟ್‌ನಲ್ಲಿ ಶಕ್ತಿಶಾಲಿ ಬ್ಯಾಟರಿ, 5G ಕನೆಕ್ಟಿವಿಟಿ ಹಾಗೂ ಗೇಮಿಂಗ್-ಫೋಕಸ್‌ಡ್ ಫೀಚರ್‌ಗಳೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಇದರ ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಲಾಂಚ್ ಸಮಯದಲ್ಲಿ ಬಹಿರಂಗವಾಗಲಿದ್ದು, ಬಜೆಟ್ ಮತ್ತು ಗೇಮಿಂಗ್ ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ Tecno ಈ ಫೋನ್ ಕುರಿತು ಇನ್ನಷ್ಟು ವಿವರಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.


Click it and Unblock the Notifications








