Home
ಮೊಬೈಲ್

ಭಾರತಕ್ಕೆ ಫೆ.13 ರಂದು Tecno Pova Curve 2 5G ಆಗಮನ: ಕುತೂಹಲ ಹೆಚ್ಚಾಗಿರುವುದೇಕೆ?

ಭಾರತದಲ್ಲಿ ಟೆಕ್ನೋ ಕಂಪೆನಿಯು ತನ್ನ ಜನಪ್ರಿಯ Pova ಸರಣಿಗೆ ಹೊಸ ಸೇರ್ಪಡೆಯಾಗಿ Tecno Pova Curve 2 5G ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಿದೆದೆ. ಮೇ 2025ರಲ್ಲಿ ಬಿಡುಗಡೆಯಾದ Pova Curve 5G ಮಾದರಿಯ ಉತ್ತರಾಧಿಕಾರಿಯಾಗಿ ಈ ಫೋನ್ ಬರುತ್ತಿದ್ದು, ಹೊಸ Space 2.0 ಫ್ಯೂಚರಿಸ್ಟಿಕ್ ಡಿಸೈನ್, ಸ್ಲಿಮ್ ಬಾಡಿ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಮಧ್ಯಮ ಬೆಲೆ ವಿಭಾಗದಲ್ಲಿ ಭಾರೀ ಗಮನ ಸೆಳೆಯಲು ತಯಾರಾಗಿದೆ. ಬಿಡುಗಡೆಗೂ ಮುನ್ನವೇ ಕಂಪನಿಯುTecno Pova Curve 2 5G ಸ್ಮಾರ್ಟ್‌ಫೋನಿನ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿರುವುದರಿಂದ, ಟೆಕ್ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Tecno Pova Curve 2 5G: ಬಿಡುಗಡೆ ದಿನಾಂಕ
Tecno Pova Curve 2 5G ಅನ್ನು ಭಾರತದಲ್ಲಿ ಫೆಬ್ರವರಿ 13ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಪರಿಚಯಿಸಲಾಗುತ್ತದೆ. ಈ ಲಾಂಚ್ ಕಾರ್ಯಕ್ರಮವು ಲೈವ್ ಇವೆಂಟ್ ರೂಪದಲ್ಲಿರಬಹುದಾಗಿದ್ದು, ಟೆಕ್ನೋನ ಅಧಿಕೃತ ಯೂಟ್ಯೂಬ್ ಚಾನೆಲ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಕಾಣಬಹುದಾಗಿದೆ. ಲಾಂಚ್ ಸಮೀಪಿಸುತ್ತಿರುವುದರಿಂದ, ಫೋನ್ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಸ್ಪಷ್ಟವಾಗಲಿವೆ.

Tecno Pova Curve 2 5G ಬೆಲೆ ಮತ್ತು ಲಭ್ಯತೆ (ಅಂದಾಜು)
Tecno ಇನ್ನೂ ಅಧಿಕೃತ ಬೆಲೆಯನ್ನು ಪ್ರಕಟಿಸಿಲ್ಲ. ಆದರೆ ಲೀಕ್ ವರದಿಗಳ ಪ್ರಕಾರ, ಈ ಫೋನ್‌ನ ಬೆಲೆ ಭಾರತದಲ್ಲಿ30,000 ಇರಬಹುದೆಂದು ಅಂದಾಜಿಸಲಾಗಿದೆ. ಹಿಂದಿನ Pova Curve 5G ಮಾದರಿಯ ಬೆಲೆಯನ್ನು ಗಮನಿಸಿದರೆ, ಈ ಹೊಸ ಮಾದರಿಯ ಬೆಲೆ ಸ್ವಲ್ಪ ಹೆಚ್ಚಾಗುವ ನಿರೀಕ್ಷೆ ಇದೆ. 2026ರಲ್ಲಿ RAM ಕಾಂಪೊನೆಂಟ್ ಬೆಲೆಗಳು ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಇನ್ನು ಬಿಡುಗಡೆ ನಂತರ ಈ ಸ್ಮಾರ್ಟ್‌ಫೋನ್ Flipkart ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

ಡಿಸೈನ್ ಮತ್ತು ಗುಣಮಟ್ಟ
Tecno Pova Curve 2 5G ವಿನ್ಯಾಸದ ವಿಷಯದಲ್ಲಿ ಸ್ಪಷ್ಟವಾದ ಅಪ್‌ಗ್ರೇಡ್ ಅನ್ನು ತರುತ್ತದೆ. Space 2.0 ಡಿಸೈನ್ ಭಾಷೆಯೊಂದಿಗೆ ವಕ್ರಾಕಾರದ ಬ್ಯಾಕ್ ಪ್ಯಾನೆಲ್, ಮ್ಯಾಟ್ ಫಿನಿಷ್ ಮತ್ತು ಹೊಸ ತ್ರಿಕೋನಾಕಾರದ ಕ್ಯಾಮೆರಾ ಮಾಡ್ಯೂಲ್ ಇದಕ್ಕೆ ಪ್ರೀಮಿಯಂ ಲುಕ್ ನೀಡುತ್ತದೆ. ಕೇವಲ 7.4 ಮಿಮೀ ದಪ್ಪ ಮತ್ತು ಸುಮಾರು 194 ಗ್ರಾಂ ತೂಕ ಹೊಂದಿರುವ ಈ ಫೋನ್ ಕೈಯಲ್ಲಿ ಹಿಡಿಯಲು ಹಗುರವಾಗಿದೆ. ಇದು ಕಪ್ಪು, ಬೆಳ್ಳಿ ಮತ್ತು ವೈಲೆಟ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಡಿಸ್ಪ್ಲೇ ಮತ್ತು ವೀಕ್ಷಣಾ ಅನುಭವ
Tecno Pova Curve 2 5G ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ ವಕ್ರಾಕಾರದ AMOLED ಡಿಸ್ಪ್ಲೇ ನೀಡಲಾಗಿದ್ದು, ಸ್ಮೂತ್ ಸ್ಕ್ರೋಲಿಂಗ್ ಅನುಭವಕ್ಕೆ ಒತ್ತು ನೀಡಲಾಗಿದೆ. ವರದಿಗಳ ಪ್ರಕಾರ, ಇದರಲ್ಲಿ 6.78 ಇಂಚಿನ 1.5K ರೆಸಲ್ಯೂಶನ್ AMOLED ಡಿಸ್ಪ್ಲೇ ಮತ್ತು 144Hz ರಿಫ್ರೆಶ್ ರೇಟ್ ಇರಬಹುದು. ಕಣ್ಣುಗಳಿಗೆ ಹಾನಿ ಕಡಿಮೆ ಮಾಡುವ ಐ-ಪ್ರೊಟೆಕ್ಷನ್ ಫೀಚರ್‌ಗಳು ಕೂಡ ಇದರಲ್ಲಿ ಸೇರಿವೆ.

ಭಾರತಕ್ಕೆ ಫೆ.13 ರಂದು Tecno Pova Curve 2 5G ಆಗಮನ: ಕುತೂಹಲ!

ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್

Tecno Pova Curve 2 5G ನಲ್ಲಿ MediaTek Dimensity 7100 ಪ್ರೊಸೆಸರ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ದಿನನಿತ್ಯದ ಬಳಕೆಗೂ ಹಾಗೂ ಗೇಮಿಂಗ್‌ಗೆ ಉತ್ತಮ ಕಾರ್ಯಕ್ಷಮತೆ ನೀಡುವ ಸಾಮರ್ಥ್ಯ ಹೊಂದಿದೆ. ಫೋನ್‌ನಲ್ಲಿ 12GB ವರೆಗೆ RAM ಮತ್ತು 256GB ವರೆಗೆ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳು ಇರಬಹುದು. ಸಾಫ್ಟ್‌ವೇರ್ ಭಾಗದಲ್ಲಿ Tecno ನ HiOS ಇಂಟರ್‌ಫೇಸ್ ಬಳಸಲಾಗುತ್ತದೆ. ಜೊತೆಗೆ AI ಆಧಾರಿತ ನೊಯಿಸ್ ಕ್ಯಾನ್ಸಲೇಶನ್ ಸೇರಿದಂತೆ ಹಲವು ಸ್ಮಾರ್ಟ್ ಫೀಚರ್‌ಗಳು ಇರಲಿವೆ.

ಕ್ಯಾಮೆರಾ ವೈಶಿಷ್ಟ್ಯಗಳು
ಕ್ಯಾಮೆರಾ ವಿಭಾಗದಲ್ಲೂ ಈ ಬಾರಿ Tecno ಹೊಸ ಪ್ರಯೋಗ ಮಾಡಿದೆ. ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇರಬಹುದಾಗಿದ್ದು, ಲೀಕ್ ಪ್ರಕಾರ 50MP ಪ್ರೈಮರಿ ಕ್ಯಾಮೆರಾ ಒಳಗೊಂಡಿರಬಹುದು. ಫೋಟೋಗ್ರಫಿ ಮತ್ತು ವೀಡಿಯೊ ರೆಕಾರ್ಡಿಂಗ್ ಅನುಭವವನ್ನು ಉತ್ತಮಗೊಳಿಸಲು AI ಆಧಾರಿತ ಕ್ಯಾಮೆರಾ ಫೀಚರ್‌ಗಳನ್ನೂ ನಿರೀಕ್ಷಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ಈ ಫೋನ್‌ನ ದೊಡ್ಡ ಹೈಲೈಟ್ ಎಂದರೆ ಇದರ 8,000mAh ಸಾಮರ್ಥ್ಯದ ಬ್ಯಾಟರಿ. ಇದು ದೀರ್ಘಕಾಲದ ಬಳಕೆಗೆ ಸೂಕ್ತವಾಗಿದ್ದು, 45W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಸಾಧ್ಯತೆ ಇದೆ. ಕಂಪನಿಯ ಪ್ರಕಾರ, ಈ ಬ್ಯಾಟರಿ ಹಿಂದಿನ ಮಾದರಿಗಿಂತ ಹೆಚ್ಚು ಇಂಟರ್‌ನೆಟ್ ಬಳಕೆ ಸಮಯ, ಉತ್ತಮ ವೀಡಿಯೊ ಪ್ಲೇಬ್ಯಾಕ್ ಮತ್ತು ದೀರ್ಘ ಸ್ಟ್ಯಾಂಡ್‌ಬೈ ನೀಡಲಿದೆ.

ಒಟ್ಟಾರೆಯಾಗಿ, Tecno Pova Curve 2 5G ಮಧ್ಯಮ ಬೆಲೆ ವಿಭಾಗದಲ್ಲಿ ಆಕರ್ಷಕ ಡಿಸೈನ್, ದೊಡ್ಡ ಬ್ಯಾಟರಿ, ಸ್ಮೂತ್ ಡಿಸ್ಪ್ಲೇ ಮತ್ತು ಶಕ್ತಿಶಾಲಿ ಪ್ರೊಸೆಸರ್‌ನೊಂದಿಗೆ ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಭಾರತದಲ್ಲಿ ಬಿಡುಗಡೆ ಬಳಿಕ ಇದರ ನಿಖರ ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಸ್ಪಷ್ಟವಾಗಲಿದ್ದು, ಗ್ರಾಹಕರ ನಿರೀಕ್ಷೆಯನ್ನು ಇದು ಎಷ್ಟು ಮಟ್ಟಿಗೆ ಪೂರೈಸುತ್ತದೆ ಎಂಬುದು ಗಮನಾರ್ಹವಾಗಿರಲಿದೆ ಎಂಬುದು ನಮ್ಮ ನಿರೀಕ್ಷೆ.

Best Mobiles in India

English summary
Tecno Pova Curve 2 5G is set to launch in India on February 13, featuring a futuristic Space 2.0 design, slim body, and a large battery, targeting the mid-range smartphone segment with an expected price between ₹15,000 and ₹20,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+