ಭಾರತದಲ್ಲಿ POVA Curve 5G ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಮತ್ತು ಎಲ್ಲಾ ಮಾಹಿತಿ
ಭಾರತದ ಮೊಬೈಲ್ ಮಾರುಕಟ್ಟೆಗೆ ಟೆಕ್ನೊ ತನ್ನ ಜನಪ್ರಿಯ "Curve" ಸರಣಿಯಲ್ಲಿ ಹೊಚ್ಚ ಹೊಸ ಟೆಕ್ನೊ POVA Curve 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಆಕರ್ಷಕ ಹಾರ್ಡ್‌ವೇರ್ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ದೇಶದಲ್ಲಿ 15,999 ರೂ. ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದ್ದು, ಈ ಬೆಲೆಯಲ್ಲಿ ಕರ್ವ್ಡ್ AMOLED ಡಿಸ್ಪ್ಲೇ, ಭಾರತದಲ್ಲಿ ಮೊದಲ AI ವೈಶಿಷ್ಟ್ಯಗಳು ಮತ್ತು ಸ್ಲಿಮ್ ಫ್ರೇಮ್‌ನಲ್ಲಿ ಪ್ಯಾಕ್ ಮಾಡಲಾದ ದೊಡ್ಡ ಬ್ಯಾಟರಿಯೊಂದಿಗೆ, ದೈನಂದಿನ ಬಳಕೆಗಾಗಿ ಕೆಲವು ಪ್ರಾಯೋಗಿಕ ವರ್ಧನೆಗಳೊಂದಿಗೆ ಪರಿಚಯಸಲಾಗಿದೆ. ಹಾಗಾದರೆ, ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಉತ್ತಮ ಸ್ಪರ್ಧೆಯನ್ನು ನೀಡಲು ಬಂದಿರುವ ಹೊಸ ಟೆಕ್ನೊ POVA Curve 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬೆಲ್ಲಾ ವಿವರಗಳನ್ನು ನೋಡೋಣ ಬನ್ನಿ.
ಟೆಕ್ನೊ POVA Curve 5G ಸ್ಮಾರ್ಟ್‌ಫೋನ್ ವಶಿಷ್ಟ್ಯಗಳು,
ಟೆಕ್ನೊ POVA Curve 5G ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯವೆಂದರೆ 6.78-ಇಂಚಿನ ಪೂರ್ಣ-HD+ 3D ಕರ್ವ್ಡ್ AMOLED ಡಿಸ್ಪ್ಲೇ. ಇದು 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತಿದ್ದು, ಈ ವಿಭಾಗದಲ್ಲಿ ಅತ್ಯಂತ ಹೆಚ್ಚು ರಿಫ್ರೆಶ್ ದರವನ್ನು ಹೊಂದಿರುವ ಕೈಗೆಟುಕುವ ಕರ್ವ್ಡ್-ಸ್ಕ್ರೀನ್ ಫೋನ್‌ಗಳಲ್ಲಿ ಒಂದಾಗಿದೆ. ಪರದೆಯು 1300nits ಗರಿಷ್ಠ ಹೊಳಪನ್ನು ಒದಗಿಸುತ್ತದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲಾಗಿದೆ. ಫೋನ್ "ಸ್ಟಾರ್‌ಶಿಪ್-ಪ್ರೇರಿತ" ವಿನ್ಯಾಸವನ್ನು ಹೊಂದಿದ್ದು, ಮ್ಯಾಜಿಕ್ ಸಿಲ್ವರ್, ನಿಯಾನ್ ಸಯಾನ್ ಮತ್ತು ಗೀಕ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇದರ ಸ್ಲಿಮ್ 7.45mm ಬಾಡಿ ಕೂಡ ಗಮನ ಸೆಳೆಯುತ್ತದೆ.
ಕಾರ್ಯಕ್ಷಮತೆಯ ದೃಷ್ಟಿಯಿಂದ, 4nm ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಚಿಪ್‌ಸೆಟ್ POVA Curve 5G ಗೆ ಶಕ್ತಿ ನೀಡುತ್ತದೆ. ಈ ಫೋನ್ 6GB RAM ಮತ್ತು 8GB RAM ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಇವು 128GB UFS 2.2 ಸಂಗ್ರಹಣೆಯೊಂದಿಗೆ ಬರುತ್ತವೆ. 8GB ವರೆಗೆ ವರ್ಚುವಲ್ RAM ಗೆ ಬೆಂಬಲವಿದೆ, ಇದು ಮಲ್ಟಿಟಾಸ್ಕಿಂಗ್ ಅನ್ನು ಸುಗಮಗೊಳಿಸುತ್ತದೆ. POVA Curve 5G ಆಂಡ್ರಾಯ್ಡ್ 15 ಆಧಾರಿತ HiOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಟೆಕ್ನೊ ಆಂಡ್ರಾಯ್ಡ್ 16 ಗೆ ಪ್ರಮುಖ OS ಅಪ್‌ಗ್ರೇಡ್ ಮತ್ತು ಎರಡು ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ನೀಡಿದೆ.
ಟೆಕ್ನೊ POVA Curve 5G ಸ್ಮಾರ್ಟ್‌ಫೋನ್ ಟೆಕ್ನೊ ನ AI ವೈಶಿಷ್ಟ್ಯಗಳೊಂದಿಗೆ ಸಂಪೂರ್ಣವಾಗಿ ಲೋಡ್ ಆಗಿದೆ, ಇದರಲ್ಲಿ AI ಕಾಲ್ ಅಸಿಸ್ಟೆಂಟ್, ಆಟೋ ಉತ್ತರ, ಬಹುಭಾಷಾ ಬೆಂಬಲ ಮತ್ತು ಧ್ವನಿ ಮುದ್ರಣ ಶಬ್ದ ನಿಗ್ರಹ ಸೇರಿವೆ. ಭಾರತೀಯ ಬಳಕೆದಾರರಿಗೆ ಅನುಗುಣವಾಗಿ, ಧ್ವನಿಮುದ್ರಣ ನಿಗ್ರಹವು ಗದ್ದಲದ ಪರಿಸರದಲ್ಲಿ ಸ್ಪಷ್ಟ ಕರೆಗಳಿಗೆ ಸಹಾಯ ಮಾಡುತ್ತದೆ. WhatsApp ಕರೆಗಳಿಗೆ ನೇರ ಅನುವಾದ, ನಂತರದ ಕರೆ ಸಾರಾಂಶಗಳು, ಮತ್ತು ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಸಂದೇಶ ಕಳುಹಿಸುವ ವ್ಯವಸ್ಥೆ ಸೇರಿದಂತೆ ಸ್ವಯಂ ಕರೆ ಉತ್ತರಿಸುವಿಕೆ ಇವು ಪ್ರಮುಖ AI ವೈಶಿಷ್ಟ್ಯಗಳಾಗಿವೆ. ಬಹು ಭಾರತೀಯ ಭಾಷೆಗಳಲ್ಲಿ ಪೋಸ್ಟ್ ಮಾಡುವ ಮತ್ತು ಪ್ರತಿಕ್ರಿಯಿಸುವ ಅಂತರ್ನಿರ್ಮಿತ ಸಹಾಯಕವೂ ಇದೆ.

ಕ್ಯಾಮೆರಾ ವಿಭಾಗದಲ್ಲಿ, ಟೆಕ್ನೊ POVA Curve 5G 64-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾವನ್ನು ಹೊಂದಿದೆ, ಇದು ಸೋನಿಯ IMX682 ಸಂವೇದಕವನ್ನು ಬಳಸುತ್ತದೆ. ಮುಂಭಾಗದಲ್ಲಿ 13-ಮೆಗಾಪಿಕ್ಸೆಲ್ ಶೂಟರ್ ಇದೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ, ಇದು ಈ ಬೆಲೆಯ ಫೋನ್‌ಗಾಗಿ ಉತ್ತಮ ವೈಶಿಷ್ಟ್ಯವಾಗಿದೆ. ಸಂಪರ್ಕಕ್ಕಾಗಿ, ಟೆಕ್ನೊ 5G++, VoWiFi ಡ್ಯುಯಲ್ ಪಾಸ್ ಮತ್ತು ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಇಂಟೆಲಿಜೆಂಟ್ ಸಿಗ್ನಲ್ ಹಬ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳು, ಡ್ಯುಯಲ್ ಮೈಕ್ರೊಫೋನ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, IR ಬ್ಲಾಸ್ಟರ್ ಮತ್ತು NFC ಇವು ಇತರ ಗಮನಾರ್ಹ ವೈಶಿಷ್ಟ್ಯಗಳಾಗಿವೆ.
ಬ್ಯಾಟರಿ ವಿಭಾಗದಲ್ಲಿ, ಟೆಕ್ನೊ POVA Curve 5G 5,500mAh ಬ್ಯಾಟರಿಯನ್ನು ಹೊಂದಿದ್ದು, 45W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸುತ್ತದೆ. ಟೆಕ್ನೊ ಪ್ರಕಾರ, ಬಂಡಲ್ ಮಾಡಿದ ಚಾರ್ಜರ್ ಬಳಸಿ ಫೋನ್ ಅನ್ನು 45 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಗೇಮಿಂಗ್ ಅಥವಾ ದೀರ್ಘಕಾಲದ ಬಳಕೆಯ ಸಮಯದಲ್ಲಿ ತಾಪಮಾನವನ್ನು ಕಡಿಮೆ ಮಾಡಲು ಫೋನ್ ಬೈಪಾಸ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ. ಇನ್ನು ಟೆಕ್ನೊ POVA Curve 5G ಸ್ಮಾರ್ಟ್‌ಫೋನ್ 6GB RAM ಹೊಂದಿರುವ ಮೂಲ ಮಾದರಿಯ ಬೆಲೆ ರೂ 15,999 ಆಗಿದ್ದು, 8GB ರೂಪಾಂತರದ ಬೆಲೆ ರೂ 16,999 ಆಗಿದ್ದು, ಜೂನ್ 5 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ.


Click it and Unblock the Notifications








