Home
ಮೊಬೈಲ್

ಸ್ಲಿಮ್ & ಸ್ಟೈಲಿಷ್: ಹೊಸ Pova Slim 5G ಫೋನ್ ಆಕರ್ಷಕ ಬೆಲೆಯಲ್ಲಿ ಲಾಂಚ್!

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರಾಗಿರುವ ಟೆಕ್ನೋ ಕಂಪೆನಿಯು, ಭಾರತದ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಸ್ಮಾರ್ಟ್‌ಫೋನ್ 'ಟೆಕ್ನೋ ಪೋವಾ ಸ್ಲಿಮ್ 5G' (Tecno Pova Slim 5G) ಅನ್ನು ಇಂದು (ಸೆಪ್ಟೆಂಬರ್ 4) ಬಿಡುಗಡೆ ಮಾಡಿದೆ. ಕೇವಲ 5.95mm ದಪ್ಪವಿರುವ ಈ ಫೋನ್ ಅನ್ನು ಸೆಗ್ಮೆಂಟ್‌ನಲ್ಲೇ ಅತ್ಯಂತ ತೆಳ್ಳಗಿನ 5G ಸ್ಮಾರ್ಟ್‌ಫೋನ್ ಎಂದು ಕಂಪನಿ ಹೇಳಿಕೊಂಡಿದ್ದು, ವಿಶಿಷ್ಟ ವಿನ್ಯಾಸ ಮತ್ತು ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಬಂದಿರುವ ಈ ಫೋನ್ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ವಿಶೇಷವಾಗಿ ತೆಳ್ಳಗಿನ ಮತ್ತು ಹಗುರವಾದ ಫೋನ್ ಬಯಸುವವರಿಗೆ ಇದು ಒಂದು ಉತ್ತಮ ಆಯ್ಕೆ ಕೂಡ ಆಗಿದೆ.! ಹಾಗಾದರೆ ಹೊಸ ಟೆಕ್ನೋ ಪೋವಾ ಸ್ಲಿಮ್ 5G ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಟೆಕ್ನೋ ಪೋವಾ ಸ್ಲಿಮ್ 5G: ಪ್ರಮುಖ ವೈಶಿಷ್ಟ್ಯಗಳು
ನೂತನ ಟೆಕ್ನೋ ಪೋವಾ ಸ್ಲಿಮ್ 5G ಫೋನ್ 144Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ 1.5K AMOLED ಡಿಸ್ಪ್ಲೇ ಹೊಂದಿದೆ. ಇದು ಬಳಕೆದಾರರಿಗೆ ಅತ್ಯಂತ ಸ್ಮೂತ್ ಸ್ಕ್ರಾಲಿಂಗ್ ಮತ್ತು ಉತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಗರಿಷ್ಠ 4,500 ನಿಟ್ಸ್ ಪ್ರಖರತೆಯನ್ನು ಹೊಂದಿರುವ ಕಾರಣ, ನೇರ ಸೂರ್ಯನ ಬೆಳಕಿನಲ್ಲೂ ಡಿಸ್ಪ್ಲೇ ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ, ಡಿಸ್ಪ್ಲೇಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ನೀಡಲಾಗಿದ್ದು, ಇದು ಗೀರುಗಳಿಂದ ರಕ್ಷಣೆ ನೀಡುತ್ತದೆ. ಫೋನ್‌ನ ಹಿಂಭಾಗದಲ್ಲಿ ಡೈನಾಮಿಕ್ ಮೂಡ್ ಲೈಟ್ ವಿನ್ಯಾಸವಿದೆ, ಇದು ಕ್ಯಾಮೆರಾ ಮಾಡ್ಯೂಲ್ ಸುತ್ತ ಕಸ್ಟಮೈಸ್ ಮಾಡಬಹುದಾದ ಎಲ್ಇಡಿ ದೀಪಗಳನ್ನು ಒಳಗೊಂಡಿದೆ. ಇದು ಫೋನ್‌ಗೆ ಒಂದು ವಿಶಿಷ್ಟ ಮತ್ತು ಪ್ರೀಮಿಯಂ ನೋಟ ನೀಡುತ್ತದೆ.

ಸ್ಲಿಮ್ & ಸ್ಟೈಲಿಷ್: ಹೊಸ Pova Slim 5G ಫೋನ್ ಆಕರ್ಷಕ ಬೆಲೆಯಲ್ಲಿ ಲಾಂಚ್!

ಶಕ್ತಿಶಾಲಿ ಹಾರ್ಡ್‌ವೇರ್ ಮತ್ತು ಕ್ಯಾಮೆರಾ
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ, ಇದು ದೈನಂದಿನ ಕಾರ್ಯಗಳು ಮತ್ತು ಗೇಮಿಂಗ್‌ಗೆ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಕ್ಯಾಮೆರಾ ವಿಭಾಗದಲ್ಲಿ, ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡ ಡ್ಯುಯಲ್ ಹಿಂಬದಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. 8GB RAM ಮತ್ತು 128GB ಸಂಗ್ರಹಣೆಯೊಂದಿಗೆ ಲಭ್ಯವಿರುವ ಈ ಫೋನ್ ಉತ್ತಮ ಕಾರ್ಯಕ್ಷಮತೆ ಮತ್ತು ಸಂಗ್ರಹಣೆಯನ್ನು ನೀಡುತ್ತದೆ. ಮತ್ತು ಆಂಡ್ರಾಯ್ಡ್ 15 ಆಧಾರಿತ HiOS 15 ಮೇಲೆ ಕಾರ್ಯನಿರ್ವಹಿಸುತ್ತದೆ.

ಸಾಫ್ಟ್‌ವೇರ್ ಮತ್ತು ಬ್ಯಾಟರಿ ವೈಶಿಷ್ಟ್ಯಗಳು
ಈ ಟೆಕ್ನೋ ಪೋವಾ ಸ್ಲಿಮ್ 5G ಫೋನ್ ಕಂಪನಿಯ ಎಲ್ಲಾ AI ಅಸಿಸ್ಟೆಂಟ್ ಫೀಚರ್‌ಗಳನ್ನು ಹೊಂದಿದ್ದು, ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ. AI ಕಾಲ್ ಅಸಿಸ್ಟೆಂಟ್, AI ರೈಟಿಂಗ್, ಚಿತ್ರ ಸಂಪಾದನೆ ಮತ್ತು ಗೌಪ್ಯತೆ ಬ್ಲರ್ ಮಾಡುವಂತಹ ಹಲವು ಉಪಯುಕ್ತ ವೈಶಿಷ್ಟ್ಯಗಳು ಇದರಲ್ಲಿವೆ. ಈ ಫೋನ್‌ಗೆ ಇನ್ಫ್ರಾರೆಡ್ ರಿಮೋಟ್ ಕಂಟ್ರೋಲ್, ಡಾಲ್ಬಿ ಅಟ್ಮಾಸ್ ಸ್ಪೀಕರ್ ಮತ್ತು KM9 TUV ರೈನ್‌ಲ್ಯಾಂಡ್ ಪ್ರಮಾಣಪತ್ರವೂ ಇದೆ. ಬ್ಯಾಟರಿ ಬಗ್ಗೆ ಹೇಳುವುದಾದರೆ, 5,160mAh ಸಾಮರ್ಥ್ಯದ ಬ್ಯಾಟರಿಯು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕೇವಲ 25 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ ಮತ್ತು ಪೂರ್ತಿ ಚಾರ್ಜ್ ಆಗಲು 55 ನಿಮಿಷಗಳು ಬೇಕಾಗುತ್ತದೆ ಎಂದು ಎಂದು ಕಂಪನಿ ಹೇಳಿಕೊಂಡಿದೆ.

ಸ್ಲಿಮ್ & ಸ್ಟೈಲಿಷ್: ಹೊಸ Pova Slim 5G ಫೋನ್ ಆಕರ್ಷಕ ಬೆಲೆಯಲ್ಲಿ ಲಾಂಚ್!

ಟೆಕ್ನೋ ಪೋವಾ ಸ್ಲಿಮ್ 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಟೆಕ್ನೋ ಪೋವಾ ಸ್ಲಿಮ್ 5G ಫೋನ್ ಬೆಲೆ ರೂ. 8GB + 128GB ಆಯ್ಕೆಗೆ 19,999 ನಿಗದಿಪಡಿಸಲಾಗಿದೆ. ಈ ಹ್ಯಾಂಡ್‌ಸೆಟ್ ಕೂಲ್ ಬ್ಲಾಕ್, ಸ್ಕೈ ಬ್ಲೂ ಮತ್ತು ಸ್ಲಿಮ್ ವೈಟ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಇದರ ಮಾರಾಟವು ಸೆಪ್ಟೆಂಬರ್ 8 ರಿಂದ ಫ್ಲಿಪ್‌ಕಾರ್ಟ್ ಮತ್ತು ದೇಶದ ಆಫ್‌ಲೈನ್ ಮಳಿಗೆಗಳಲ್ಲಿ ಪ್ರಾರಂಭವಾಗಲಿದೆ. ಇನ್ನು ಈ ಫೋನ್ 5.95ಮಿ.ಮೀ ದಪ್ಪ ಮತ್ತು ಕೇವಲ 156 ಗ್ರಾಂ ತೂಕ ಇರುವ ಕಾರಣ ಇದನ್ನು ಹಿಡಿದುಕೊಳ್ಳಲು ಸುಲಭ ಮತ್ತು ಆರಾಮದಾಯಕವಾಗಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ರಿವ್ಯೂ ಲೇಖನಗಳಲ್ಲಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೋಡೋಣ.

Best Mobiles in India

English summary
Tecno has launched the Pova Slim 5G in India, a lightweight smartphone weighing just 156 grams, combining sleek design with powerful performance and modern features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+