Home
ಮೊಬೈಲ್

ಇಂದು Tecno Spark 20 Pro 5G ಸೇಲ್ ಶುರು: ಇದರ ಬೆಲೆ ಮತ್ತು ಆಫರ್‌ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಟೆಕ್ನೋ ಕಂಪನಿಯು ಇತ್ತೀಚೆಗೆ ತನ್ನ ಬಹುನಿರೀಕ್ಷಿತ ಟೆಕ್ನೋ ಸ್ಪಾರ್ಕ್ 20 ಪ್ರೊ 5G (Tecno Spark 20 Pro 5G) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕೈಗೆಟುಕುವ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್‌ ಇಂದಿನಿಂದ (ಜುಲೈ 11) Amazon ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಹಾಗೂ ಆಫ್‌ಲೈನ್‌ ತಾಣಗಳ ಮೂಲಕ ಮಾರಾಟ ಪ್ರಾರಂಭಿಸಲಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್, 108MP ಮುಖ್ಯ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಬ್ಯಾಕಪ್ ಸೇರಿದಂತೆ ಅನೇಕ ವಿಶೇಷತೆಗಳನ್ನು ಹೊಂದಿದೆ.

Tecno Spark 20 Pro 5G ಬೆಲೆ ಮತ್ತು ಲಭ್ಯತೆ

ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಫೋನ್‌ ಎರಡು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 15,999 ರೂ. ಇದೆ. 8GB RAM ಮತ್ತು 256GB ಸ್ಟೋರೇಜ್ ಮಾದರಿಯು 16,999 ರೂ. ಬೆಲೆಯಲ್ಲಿ ಮಾರಾಟವಾಗಲಿದೆ. Tecno Spark 20 Pro ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ನೀವು ಸ್ಟಾರ್ಟ್ರೈಲ್ ಕಪ್ಪು ಮತ್ತು ಗ್ಲಾಸಿ ವೈಟ್‌ ಬಣ್ಣದಲ್ಲಿ ಈ ಫೋನ್‌ ಖರೀದಿಸಬಹುದು.

ಇಂದು Tecno Spark 20 Pro ಸೇಲ್: ಬೆಲೆ, ಆಫರ್‌ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಟೆಕ್ನೋ ಕಂಪನಿಯು ಈ ಫೋನ್‌ನ ಮೇಲೆ ಆಕರ್ಷಕ ಲಾಂಚ್‌ ಆಫರ್‌ಗಳನ್ನು ಸಹ ನೀಡುತ್ತಿದೆ. ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು UPI ಪಾವತಿಗಳನ್ನು ಬಳಸಿಕೊಂಡು ಈ ಮೊಬೈಲ್ ಖರೀದಿಸುವ ಗ್ರಾಹಕರು 2,000 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇಎಂಐ ಸೌಲಭ್ಯವೂ ಇದೆ. ಡಿಸ್ಕೌಂಟ್‌ನೊಂದಿಗೆ 13,999 ರೂ. ಬೆಲೆಯಲ್ಲಿ ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Tecno Spark 20 Pro 5G ವಿಶೇಷತೆಗಳೇನು?

ಡಿಸ್‌ಪ್ಲೇ: ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಜೊತೆಗೆ, 120Hz ರಿಫ್ರೆಶ್ ರೇಟ್‌ ಪಡೆದಿದೆ. 91% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದನ್ನು IP53 ರೇಟಿಂಗ್‌ನೊಂದಿಗೆ ತಯಾರಿಸಲಾಗಿದ್ದು, ಇದು ಧೂಳು ಮತ್ತು ಸ್ಪ್ಲಾಶ್‌ಗಳಿಗೆ ನಿರೋಧಕವಾಗಿದೆ.

ಪ್ರೊಸೆಸರ್‌: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಜೊತೆಗೆ, Mali-G57 MC2 GPU ನಿಂದ ರನ್‌ ಆಗಲಿದೆ. Tecno Spark 20 Pro 5G ಉತ್ತಮ ಕಾರ್ಯಕ್ಷಮತೆ ಮತ್ತು ಗೇಮಿಂಗ್‌ಗಾಗಿ ತಯಾರಾಗಿದೆ. ಈ ಸ್ಮಾರ್ಟ್‌ಫೋನ್ 8GB RAM + 128GB ಹಾಗೂ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಇಂದು Tecno Spark 20 Pro ಸೇಲ್: ಬೆಲೆ, ಆಫರ್‌ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಕ್ಯಾಮೆರಾ: ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಫೋನ್ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಯಲ್ಲಿ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ಆಕ್ಸಿಲರಿ ಲೆನ್ಸ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ಪಡೆದಿದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ ಹೊಂದಿದೆ. ಜೊತೆಗೆ, 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ಇದು ಫೋನ್ ದಿನವಿಡೀ ಚಾಲಿತವಾಗಿರುವುದನ್ನು ದೃಢಪಡಿಸುತ್ತದೆ. ಮತ್ತು ಅಗತ್ಯವಿದ್ದಾಗ ತ್ವರಿತವಾಗಿ ಚಾರ್ಜ್ ಆಗುತ್ತದೆ.

ಕನೆಕ್ಟಿವಿಟಿ ಆಯ್ಕೆಗಳು: ಟೆಕ್ನೋ ಸ್ಪಾರ್ಕ್‌ 20 ಪ್ರೊ 5G ಫೋನ್‌ ಡ್ಯುಯಲ್ ಸಿಮ್ ಬೆಂಬಲ ಪಡೆದಿದೆ. 5G, 4G VoLTE, ವೈಫೈ 5, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ ಮತ್ತು ಮತ್ತು FM ರೇಡಿಯೊ ಒಳಗೊಂಡಿದೆ. ಇದು 168.5 x 76.2 x 8.3 ಮಿಮೀ ಅಳತೆ ಮತ್ತು 201 ಗ್ರಾಂ ತೂಕವನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಒಳಗೊಂಡಿದೆ.

Best Mobiles in India

English summary
Tecno Spark 20 Pro to Go on Sale Today in India via Amazon: Check Price, Specs, Offers and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+