Tecno: ಕೈಗೆಟುಕುವ ಬೆಲೆಯಲ್ಲಿ 108MP ಕ್ಯಾಮೆರಾ, 33W ಚಾರ್ಜಿಂಗ್, 256GB ಮೆಮೊರಿ.. ಯಾವ ಫೋನ್?
ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ನೀವು ಉತ್ತಮ ಕಾರ್ಯಕ್ಷಮತೆ ಮತ್ತು ದೊಡ್ಡ ಸೆನ್ಸಾರ್ ಕ್ಯಾಮೆರಾ ಹೊಂದಿರುವ ಮಧ್ಯಮ ಶ್ರೇಣಿಯ ಫೋನ್ ಹುಡುಕುತ್ತಿದ್ದರೆ, ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ! ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಟೆಕ್ನೋ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಟೆಕ್ನೋ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 108MP ಕ್ಯಾಮೆರಾ ಸಂವೇದಕವನ್ನು ನಿರೀಕ್ಷಿಸಬಹುದು. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5000mAh ಬ್ಯಾಟರಿಯೊಂದಿಗೆ ಹೊಂದಿದೆ. ಹಾಗಿದ್ರೆ, ಈ ಹೊಸ ಫೋನ್ ಯಾವುದು? ಬಿಡುಗಡೆ ಯಾವಾಗ? ಬೆಲೆ ಎಷ್ಟು? ಎನ್ನುವುದನ್ನು ತಿಳಿಯೋಣ ಬನ್ನಿ.
ಜುಲೈ ತಿಂಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ತುಂಬಾ ಬ್ಯುಸಿಯಾಗಲಿದೆ. ಈ ತಿಂಗಳು, Samsung, Honor, OnePlus, Vivo, Oppo ಸೇರಿದಂತೆ ಹಲವು ಟೆಕ್ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. ಈ ಪಟ್ಟಿಗೆ ಟೆಕ್ನೋ ಕೂಡ ಸೇರಿದೆ. ತನ್ನ ಗ್ರಾಹಕರಿಗಾಗಿ ಹೊಸ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಅನ್ನು ಟೆಕ್ನೋ ಪರಿಚಯಿಸಲಿದೆ. Tecno Spark 20 Pro 5G ಯಲ್ಲಿ ಕಂಪನಿಯು 108 ಮೆಗಾಪಿಕ್ಸೆಲ್‌ಗಳ ಪ್ರಬಲ ಕ್ಯಾಮೆರಾ ಸೆಟಪ್ ಅನ್ನು ಒದಗಿಸಬಹುದು.

ಟೆಕ್ನೋ ಕಂಪನಿಯು ಟೆಕ್ನೋ ಸ್ಪಾರ್ಕ್ 20 ಪ್ರೊ 5G ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಮೊಬೈಲ್ ಬಿಡುಗಡೆಗಾಗಿ, ಕಂಪನಿಯು ಇ-ಕಾಮರ್ಸ್ ವೆಬ್‌ಸೈಟ್ Amazon ನಲ್ಲಿ ಮೀಸಲಾದ ಮೈಕ್ರೋಸೈಟ್ ಅನ್ನು ಲೈವ್ ಮಾಡಿದೆ. ಇದರಿಂದ ನೀವು ಮುಂಬರುವ ಫೋನ್ ಅನ್ನು Amazon ನಿಂದ ಖರೀದಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ. ಕಂಪನಿಯು ಈಗ ಈ ಸ್ಮಾರ್ಟ್‌ಫೋನ್‌ನ ಟೀಸರ್ ಅನ್ನು ಹಂಚಿಕೊಂಡಿದೆ. ಟೀಸರ್ ಕೇವಲ ಫೋನ್‌ನ 108MP ಹಿಂಬದಿಯ ಕ್ಯಾಮೆರಾವನ್ನು ತೋರಿಸುತ್ತದೆ.
ಈ ಫೋನ್‌ನ ಬೆಲೆ ಎಷ್ಟಿರಲಿದೆ?
ಪ್ರಸ್ತುತ, Tecno Spark 20 Pro 5G ಬಿಡುಗಡೆಯ ದಿನಾಂಕದ ಬಗ್ಗೆ ಟೆಕ್ನೋ ಕಂಪನಿ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಕಂಪನಿಯು ಈ ಮೊಬೈಲ್ ಅನ್ನು 15 ಸಾವಿರದಿಂದ 20 ಸಾವಿರ ರೂ.ನಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಈ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ನಾವು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ. ಮುಂದೆ ಓದಿ.

128GB ಮತ್ತು 256GB ಸ್ಟೋರೇಜ್
ವರದಿಗಳ ಪ್ರಕಾರ ಹೇಳುವುದಾದರೆ, ಭಾರತದಲ್ಲಿ ಬಿಡುಗಡೆ ಮಾಡಲಿರುವ ಮಾದರಿಯನ್ನು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಪರಿಚಯಿಸಲಾಗುವುದು. ಇದಲ್ಲದೆ, ಈ ಫೋನ್ 16GB RAM ಪಡೆಯುತ್ತದೆ. ಇದು 8GB ಫಿಸಿಕಲ್ RAM ಮತ್ತು 8GB ವರ್ಚುವಲ್ RAM ಅನ್ನು ಹೊಂದಿದೆ. ಜೊತೆಗೆ, ಇದು 128GB ಮತ್ತು 256GB ವರೆಗೆ ಸ್ಟೋರೇಜ್ ಆಯ್ಕೆಗಳನ್ನು ಸಹ ಹೊಂದಿರುವ ನಿರೀಕ್ಷೆಯಿದೆ. ಇನ್ನುಳಿದಂತೆ, ಇತರ ವಿಶೇಷಣಗಳು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಮಾದರಿಗಳಂತೆಯೇ ಇರುತ್ತವೆ.
5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ
ಈ ಮೊಬೈಲ್‌ನ ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳಿವುದಾದರೆ, ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ Dolby Atmos ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಬಣ್ಣ ಆಯ್ಕೆಗಳ ಬಗ್ಗೆ ನೋಡುವುದಾದರೆ, ಇದು ಮೂರು ಬಣ್ಣಗಳಲ್ಲಿ ಕಂಡುಬಂದಿದೆ. ಅದರಂತೆ, ಗ್ಲಾಸಿ ವೈಟ್ (ಬಿಳಿ), ನಿಯಾನ್ ಗ್ರೀನ್ (ಹಸಿರು) ಮತ್ತು ಬ್ಲ್ಯಾಕ್ (ಕಪ್ಪು) ಬಣ್ಣಗಳಲ್ಲಿ ಲಭ್ಯವಿರಲಿದೆ.

Tecno Spark 20 Pro 5Gನ ನಿರೀಕ್ಷಿತ ವೈಶಿಷ್ಟ್ಯಗಳು
1. Tecno Spark 20 Pro 5Gಯಲ್ಲಿ ನೀವು ದೊಡ್ಡ 6.78 ಇಂಚಿನ ಡಿಸ್ಪ್ಲೇಯನ್ನು ಪಡೆಯಬಹುದು.
2. ಡಿಸ್ಲ್ಪೇ IPS LCD ಪ್ಯಾನೆಲ್ ಮತ್ತು 120Hz ನ ರಿಫ್ರೆಶ್ ದರವನ್ನು ಹೊಂದಿರಬಹುದು.
3. ಬಾಕ್ಸ್ ಹೊರಗೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ.
4. ಕಾರ್ಯಕ್ಷಮತೆಗಾಗಿ, ಕಂಪನಿಯು ಅದರಲ್ಲಿ Mediatek ಡೈಮೆನ್ಸಿಟಿ 6080 ಪ್ರೊಸೆಸರ್ ಅನ್ನು ಒದಗಿಸಬಹುದು.
5. ಈ ಸ್ಮಾರ್ಟ್‌ಫೋನ್‌ನಲ್ಲಿ, ಕಂಪನಿಯು ಗ್ರಾಹಕರಿಗೆ 8GB RAM ಮತ್ತು 256GB ವರೆಗೆ ಸ್ಟೋರೇಜ್ ಅನ್ನು ಒದಗಿಸಬಹುದು.
6. ಫೋಟೋಗ್ರಫಿಗಾಗಿ, ಈ ಸ್ಮಾರ್ಟ್‌ಫೋನ್‌ನಲ್ಲಿ 108MP ಪ್ರಾಥಮಿಕ ಕ್ಯಾಮೆರಾವನ್ನು ಅಳವಡಿಸಲಾಗಿದೆ.
7. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಒದಗಿಸಬಹುದು.
8. ಸ್ಮಾರ್ಟ್‌ಫೋನ್ ಅನ್ನು ಪವರ್ ಮಾಡಲು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5000mAh ಬ್ಯಾಟರಿಯೊಂದಿಗೆ ಒದಗಿಸಬಹುದು.
ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಸ್ವಲ್ಪ ಕಾಯಿರಿ
ಒಟ್ಟಾರೆ, ಟೆಕ್ನೋ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಟೆಕ್ ವಲಯದಲ್ಲಿ ಉತ್ತಮ ಬೇಡಿಕೆಯಿದೆ. ತನ್ನ ಬಜೆಟ್ ಬೆಲೆಯ ಫೋನ್‌ಗಳಿಂದ ಮೊಬೈಲ್ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಟೆಕ್ನೋ ಸ್ಪಾರ್ಕ್ 20 ಸರಣಿ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ, ಟೆಕ್ನೋ ಭಾರತದಲ್ಲಿ ತನ್ನ ಪೋರ್ಟ್‌ಫೋಲಿಯೊವನ್ನು ಹೆಚ್ಚಿಸಲಿದೆ. ಮಾರುಕಟ್ಟೆಯಲ್ಲಿ ಹೊಸದಾಗಿ Spark 20 ಸರಣಿಯ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದವಾಗಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಸ್ವಲ್ಪ ದಿನ ಕಾಯುವುದು ಉತ್ತಮ.


Click it and Unblock the Notifications








