ಟೆಕ್ನೋಗೆ ಸರಿ ಸಾಟಿಯೇ ಇಲ್ಲ.. ಶೀಘ್ರದಲ್ಲೇ ಬರಲಿದೆ ಹೊಸ ಫೋನ್: ಫೀಚರ್ಸ್ ಲೀಕ್!
ಟೆಕ್ನೋ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಟೆಕ್ ವಲಯದಲ್ಲಿ ಉತ್ತಮ ಬೇಡಿಕೆಯಿದೆ. ತನ್ನ ಬಜೆಟ್ ಬೆಲೆಯ ಫೋನ್‌ಗಳಿಂದ ಮೊಬೈಲ್ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಟೆಕ್ನೋ ಸ್ಪಾರ್ಕ್ 20 ಸರಣಿ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಇದೀಗ ಮಾರುಕಟ್ಟೆಯಲ್ಲಿ ಹೊಸದಾಗಿ Spark 20 ಸರಣಿಯ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದವಾಗಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ Tecno Spark 20 Pro 5G ಮೊಬೈಲ್ ಬಿಡುಗಡೆ ಆಗುವ ಸಾಧ್ಯತೆಯಿದ್ದು, ಆನ್‌ಲೈನ್‌ನಲ್ಲಿ ಫೀಚರ್ಸ್ ಅನ್ನು ಬಹಿರಂಗಗೊಳಿಸಲಾಗಿದೆ. ಈ ಫೋನ್ ಯಾವಾಗ ಲಾಂಚ್ ಆಗಲಿದೆ? ನಿರೀಕ್ಷಿತ ಫೀಚರ್ಸ್‌ಗಳೇನು? ತಿಳಿಯೋಣ ಬನ್ನಿ.
ಹೌದು, ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿಯಾದ ಟೆಕ್ನೋ ಕಡಿಮೆ ದರಕ್ಕೆ ಗರಿಷ್ಠ ಫೀಚರ್ ನೀಡುವುದರಲ್ಲಿ ಹೆಸರುವಾಸಿಯಾಗಿದೆ. ಅದರಂತೆ, ತನ್ನ ಟೆಕ್ನೋ ಸ್ಪಾರ್ಕ್ 20 ಪ್ರೊ 5G (Tecno Spark 20 Pro 5G) ಸ್ಮಾರ್ಟ್‌ಫೋನ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಈ ಫೋನ್ ಸೌದಿ ಅರೇಬಿಯಾದಲ್ಲಿ ಅನಾವರಣಗೊಂಡಿದೆ. ಇದೀಗ, ಭಾರತದಲ್ಲೂ ಸದ್ದು ಮಾಡಲು ಸಿದ್ಧವಾಗಿದೆ. ಈ ಮಧ್ಯೆ, ಫೋನ್‌ನ ಫೀಚರ್ಸ್‌ಗಳು ಬಿಡುಗಡೆಗೆ ಮುಂಚೆಯೇ ಲೀಕ್ ಆಗಿದೆ.

ವರದಿಗಳ ಪ್ರಕಾರ ಹೇಳುವುದಾದರೆ, ಭಾರತದಲ್ಲಿ ಬಿಡುಗಡೆ ಮಾಡಲಿರುವ ಮಾದರಿಯನ್ನು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಪರಿಚಯಿಸಲಾಗುವುದು. ಇದಲ್ಲದೆ, ಈ ಫೋನ್ 16GB RAM ಪಡೆಯುತ್ತದೆ. ಇದು 8GB ಫಿಸಿಕಲ್ RAM ಮತ್ತು 8GB ವರ್ಚುವಲ್ RAM ಅನ್ನು ಹೊಂದಿದೆ. ಜೊತೆಗೆ, ಇದು 128GB ಮತ್ತು 256GB ವರೆಗೆ ಸ್ಟೋರೇಜ್ ಆಯ್ಕೆಗಳನ್ನು ಸಹ ಹೊಂದಿರುವ ನಿರೀಕ್ಷೆಯಿದೆ.
ಇದರ ಹೊರತಾಗಿ, ಭಾರತೀಯ ಮಾದರಿಯ ಬಗ್ಗೆ ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆದಾಗ್ಯೂ, ಈ ಸ್ಮಾರ್ಟ್‌ಫೋನ್‌ನ ಇನ್ನಿತರ ಫೀಚರ್ಸ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಮೊಬೈಲ್‌ಗಳಂತೆಯೇ ಇರುತ್ತವೆ ಎಂದು ನಿರೀಕ್ಷಿಸಲಾಗಿದೆ.
Tecno Spark 20 Pro 5Gನ ವಿಶೇಷತೆಗಳು
Tecnoನ ಈ ಫೋನ್ 6.78 ಇಂಚಿನ FHD LCD ಡಿಸ್ಪ್ಲೇಯನ್ನು ಹೊಂದಿದೆ. ಇದರ ರಿಫ್ರೆಶ್ ದರ 120Hz ಮತ್ತು ರೆಸಲ್ಯೂಶನ್ 1080x2460 ಪಿಕ್ಸೆಲ್‌ಗಳು. ಕಾರ್ಯಕ್ಷಮತೆಗಾಗಿ, ಈ ಫೋನ್‌ನಲ್ಲಿ MediaTek ಡೈಮೆನ್ಸಿಟಿ 6080 5G ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದು 8GB RAM ವರೆಗೆ ಬರುತ್ತದೆ. OS ಬಗ್ಗೆ ಹೇಳುವುದಾದರೆ, ಇದು Android 14 ಆಧಾರಿತ HIOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್ ಹೇಗಿರಲಿದೆ?
ಟೆಕ್ನೋ ಸ್ಪಾರ್ಕ್ 20 ಪ್ರೊ 5G ಫೋನ್ ತನ್ನ ಕ್ಯಾಮೆರಾ ಸೆಟಪ್‌ನಿಂದಲೇ ಭಾರೀ ಸದ್ದು ಮಾಡುತ್ತಿದೆ. ಈ ಫೋನ್‌ನ ಹಿಂಭಾಗವು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು (f/1.8 ಅಪರ್ಚರ್) ಹೊಂದಿದೆ. 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಜೊತೆಗೆ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಪಡೆದಿದೆ.
5,000mAh ಬ್ಯಾಟರಿ, 33W ವೇಗದ ಚಾರ್ಜಿಂಗ್
ಈ ಮೊಬೈಲ್‌ನ ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳಿವುದಾದರೆ, ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ Dolby Atmos ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಬಣ್ಣ ಆಯ್ಕೆಗಳ ಬಗ್ಗೆ ನೋಡುವುದಾದರೆ, ಇದು ಮೂರು ಬಣ್ಣಗಳಲ್ಲಿ ಕಂಡುಬಂದಿದೆ. ಅದರಂತೆ, ಗ್ಲಾಸಿ ವೈಟ್ (ಬಿಳಿ), ನಿಯಾನ್ ಗ್ರೀನ್ (ಹಸಿರು) ಮತ್ತು ಬ್ಲ್ಯಾಕ್ (ಕಪ್ಪು) ಬಣ್ಣಗಳಲ್ಲಿ ಲಭ್ಯವಿರಲಿದೆ.

Tecno Spark 20 Pro 5G ಫೀಚರ್ಸ್‌ಗಳು
ಈ ಮೊಬೈಲ್ ಅನ್ನು ಜೂನ್‌ನಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ. ಈ ಮೊಬೈಲ್‌ನ ವಿಶೇಷತೆಗಳನ್ನು ನೀವು ಈ ಕೆಳಗಿನಂತೆ
- ಡಿಸ್ಲ್ಪೇ: Tecno Spark 20 Pro 5G ಸ್ಮಾರ್ಟ್‌ಫೋನ್ 6.78 ಇಂಚಿನ FHD+ ಡಿಸ್ಪ್ಲೇ ಹೊಂದಿದೆ.
- ರಿಫ್ರೆಶ್ ರೇಟ್: ಇದು 120Hz ರಿಫ್ರೆಶ್ ರೇಟ್ ಮತ್ತು ಪಂಚ್-ಹೋಲ್ ಕಟೌಟ್ ವಿನ್ಯಾಸವನ್ನು ಹೊಂದಿದೆ.
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 6080 5ಜಿ ಪ್ರೊಸೆಸರ್ ಅನ್ನು ಈ ಮೊಬೈಲ್‌ನಲ್ಲಿ ಅಳವಡಿಸಲಾಗಿದೆ.
- OS: ಈ ಫೋನ್ Android 14 ಆಧಾರಿತ Technoನ HiOS 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
- ಸ್ಟೋರೇಜ್: ಈ ಫೋನ್ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ 8GB ವರ್ಚುವಲ್ RAM ಅನ್ನು ಪ್ಯಾಕ್ ಮಾಡುತ್ತದೆ.
- ಕ್ಯಾಮೆರಾ: ಈ ಮೊಬೈಲ್ 108MP ಅಲ್ಟ್ರಾ-ಸೆನ್ಸಿಂಗ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. (3x ನಷ್ಟವಿಲ್ಲದ ಇನ್-ಸೆನ್ಸರ್ ಜೂಮ್ ಮತ್ತು 10x ಡಿಜಿಟಲ್ ಜೂಮ್ ಹೊಂದಿದೆ). ಇದರೊಂದಿಗೆ ಮತ್ತೊಂದು 2MP ಮ್ಯಾಕ್ರೋ ಸಂವೇದಕವಿದೆ. ಸೆಲ್ಫಿಗಾಗಿ 8MP ಫ್ರಂಟ್ ಕ್ಯಾಮೆರಾ ಇದೆ.
- ಬ್ಯಾಟರಿ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 33W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.


Click it and Unblock the Notifications








