Tecno: ಹೊಸ ಫೋನ್ ಬಿಡುಗಡೆ.. 64MP ಕ್ಯಾಮೆರಾ, ಬಿಗ್ ಬ್ಯಾಟರಿ.. ಕಡಿಮೆ ಬೆಲೆ!
ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಸದ್ದಿಲ್ಲದೆ, ಕಡಿಮೆ ಬೆಲೆಯಲ್ಲಿ ಹೊಸ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಟೆಕ್ನೋ ತನ್ನ ಸ್ಪಾರ್ಕ್ 30 ಸರಣಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ವಿಸ್ತರಿಸಿದೆ. ಇದರ ಅಡಿಯಲ್ಲಿ, ನೂತನ ಟೆಕ್ನೋ ಸ್ಪಾರ್ಕ್ 30 4G(Tecno Spark 30 4G) ಅನ್ನು ಬಿಡುಗಡೆ ಮಾಡಲಾಗಿದೆ. ಕಡಿಮೆ ಬಜೆಟ್‌ನಲ್ಲಿ ಫೋನ್ ಖರೀದಿಸಲು ಬಯಸುವವರಿಗೆ ಈ ಫೋನ್ ಉತ್ತಮ ಆಯ್ಕೆಯಾಗಲಿದೆ. ಬನ್ನಿ, ಈ ಹೊಸ ಟೆಕ್ನೋ ಸ್ಪಾರ್ಕ್ 30 ಫೊನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಟೆಕ್ನೋ ಸ್ಪಾರ್ಕ್ 30 4G ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ. ಇದು 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹೆಲಿಯೊ G91 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಟೆಕ್ನೋ ಸ್ಪಾರ್ಕ್ 30 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಬ್ಯಾಟರಿ, 256GB ಸ್ಟೋರೇಜ್ ಮತ್ತು 16GB RAM ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಈ ಫೋನನ್ನು ಬಿಡುಗಡೆ ಮಾಡಲಾಗಿದೆ.

ಟೆಕ್ನೋ ಸ್ಪಾರ್ಕ್ 30 4G ಫೋನಿನ ಬೆಲೆ ಮತ್ತು ಲಭ್ಯತೆ
ಟೆಕ್ನೋ ಸ್ಪಾರ್ಕ್ 30 4G ಸ್ಮಾರ್ಟ್‌ಫೋನ್ ಅನ್ನು ತಾಂಜಾನಿಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಟೆಕ್ನೋ ಟಾಂಜಾನಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಫೋನ್ ಪಟ್ಟಿಮಾಡಲಾಗಿದೆ. ಆದರೆ, ನೂತನ ಫೋಫನಿನ ಬೆಲೆ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಬಣ್ಣಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಈ ಫೋನ್ ಆರ್ಬಿಟ್ ವೈಟ್ ಮತ್ತು ಆರ್ಬಿಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಕಡಿಮೆ ಬಜೆಟ್‌ನಲ್ಲಿ ಗ್ರಾಹಕರಿಗೆ ಮಾರಾಟಕ್ಕೆ ಲಭ್ಯವಾಗಲಿದೆ. ಭಾರತದಲ್ಲಿಯೂ ಈ ಫೋನ್ ಲಾಂಚ್ ಆಗಬಹುದು.
ಟೆಕ್ನೋ ಸ್ಪಾರ್ಕ್ 30 4G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಟೆಕ್ನೋ ಸ್ಪಾರ್ಕ್ 30 4G ಫೋನ್ 6.78 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್, ಪಂಚ್ ಹೋಲ್ ಕಟೌಟ್ ಹೊಂದಿದೆ.
ಪ್ರೊಸೆಸರ್: ಟೆಕ್ನೋ ಸ್ಪಾರ್ಕ್ 30 4G ಅನ್ನು ಕಂಪನಿಯು ಮೀಡಿಯಾ ಟೆಕ್ ಹೆಲಿಯೊ G91 (MediaTek Helio G91) ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಫೋನ್ ಸಾಮಾನ್ಯ ಬಳಕೆಗೆ ಮತ್ತು ಗೇಮಿಂಗ್‌ಗೆ ಸೂಕ್ತವಾಗಿದೆ. ಟೆಕ್ನೋ ಸ್ಪಾರ್ಕ್ 30 ಸ್ಮಾರ್ಟ್‌ಫೋನ್ ಅನ್ನು ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಪರಿಚಯಿಸಲಾಗಿದೆ.
ಸ್ಟೋರೇಜ್: ಟೆಕ್ನೋ ಸ್ಪಾರ್ಕ್ 30 4G ಸ್ಮಾರ್ಟ್‌ಫೋನ್ 8GB RAM, 256GB ಸ್ಟೋರೇಜ್, 8GB ವಿಸ್ತೃತ RAM ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಬಳಕೆದಾರರಿಗೆ 16GB RAM ಶಕ್ತಿಯನ್ನು ನೀಡುತ್ತದೆ.
ಕ್ಯಾಮೆರಾ: ನೂತನ ಟೆಕ್ನೋ ಸ್ಪಾರ್ಕ್ 30 4G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 6 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಸೆಕೆಂಡರಿ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 14 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.
ಬ್ಯಾಟರಿ: ಟೆಕ್ನೋ ಸ್ಪಾರ್ಕ್ 30 4G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 18 ವ್ಯಾಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು: ಟೆಕ್ನೋ ಸ್ಪಾರ್ಕ್ 30 4G ಮೊಬೈಲ್ ಡ್ಯುಯಲ್ ಸಿಮ್, 4G, ಡ್ಯುಯಲ್ ಸ್ಪೀಕರ್, ಡಾಲ್ಬಿ ಅಟ್ಮಾಸ್, IP64 ನೀರು ಮತ್ತು ಧೂಳು ನಿರೋಧಕ ರೇಟಿಂಗ್, ಯುಎಸ್‌ಬಿ ಟೈಪ್-ಸಿ ಪೋರ್ಟ್, NFC ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








