Tecno: ಹೊಸ 5G ಫೋನ್ ಲಾಂಚ್: ಕೇವಲ 8,999 ರೂ.! ಸೇಲ್ ಯಾವಾಗ?
ಟೆಕ್ನೋ ತನ್ನ ಬಹುನಿರೀಕ್ಷಿತ ಟೆಕ್ನೋ ಸ್ಪಾರ್ಕ್ 30C 5G (Tecno Spark 30C 5G) ಅನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಅಗ್ಗದ ಬೆಲೆಯಲ್ಲಿ ಈ ಫೋನನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ಸ್ಪಾರ್ಕ್ ಸರಣಿಯ ಅಡಿಯಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಕಂಪನಿಯ ಈ ಹೊಸ ಮೊಬೈಲ್ 9 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗಲಿದೆ. ಇದು ಕಡಿಮೆ ಬೆಲೆ ಹೊಂದಿದ್ದರೂ, ಹಲವು ವಿಶೇಷತೆಗಳನ್ನು ಹೊಂದಿದೆ. ಬನ್ನಿ ಈ ಫೋನಿನ ಬೆಲೆ, ಲಭ್ಯತೆ ಮತ್ತು ಫೀಚರ್ಸ್‌ಗಳನ್ನು ನೋಡೋಣ.
ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಅನ್ನು ಕೇವಲ ಒಂದೇ ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 6.67 ಇಂಚಿನ ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದಲ್ಲದೆ, 8GB RAM, 48 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ, 5000mAh ಬ್ಯಾಟರಿ, IP54 ರೇಟಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಟೆಕ್ನೋ ಸ್ಪಾರ್ಕ್ 30C 5G ಫೋನಿನ ವಿನ್ಯಾಸ
ಟೆಕ್ನೋ ಸ್ಪಾರ್ಕ್ 30C 5G ಫೋನ್ ಪಂಚ್ ಹೋಲ್ ನಾಚ್ (ಮುಂಭಾಗದ ಫಲಕ) ವಿನ್ಯಾಸವನ್ನು ಹೊಂದಿದೆ. ಇದರ ಡಿಸ್ಪ್ಲೇಯನ್ನು ಸಮತಟ್ಟಾಗಿ ಇರಿಸಲಾಗಿದೆ. ಜೊತೆಗೆ, ತೆಳುವಾದ ಬೆಜೆಲ್‌ಗಳನ್ನು ಕಾಣಬಹುದು. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ರಿಂಗ್ ಎಲ್ಇಡಿ ಲೈಟ್ ಇದೆ. ಈ ಮೊಬೈಲ್ ಅಜುರೆ ಸ್ಕೈ, ಮಿಡ್‌ನೈಟ್ ಶಾಡೋ ಮತ್ತು ಅರೋರಾ ಕ್ಲೌಡ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.
ಟೆಕ್ನೋ ಸ್ಪಾರ್ಕ್ 30C 5G ಬೆಲೆ ಮತ್ತು ಲಭ್ಯತೆ
4GB + 64GB ಸ್ಟೋರೇಜ್ ಬೆಲೆ = 9,999 ರೂ.
4GB + 128GB ಸ್ಟೋರೇಜ್ ಬೆಲೆ = 10,499 ರೂ.
ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಅನ್ನು 4GB RAM + 4GB ವರ್ಚುವಲ್ RAM ಜೊತೆಗೆ 128GB ಸ್ಟೋರೇಜ್‌ನೊಂದಿಗೆ ಬಿಡುಗಡೆ ಮಾಡಿದೆ. 1,000 ಬ್ಯಾಂಕ್ ಆಫರ್‌ನೊಂದಿಗೆ ಈ ಮೊಬೈಲ್ ಅನ್ನು ಕೇವಲ 8,999 ರೂ.ಗೆ ಖರೀದಿಸಬಹುದು. ಕಂಪನಿಯ ವೆಬ್‌ಸೈಟ್, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು ಇತರೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಫೋನ್ ಮೂಲಕ ಮಾರಾಟವಾಗಲಿದೆ.
ಈ ಸುದ್ದಿ ಓದಿದ್ದೀರಾ?: ಅತೀ ಕಡಿಮೆ ಬೆಲೆಗೆ Infinix Hot 50i ಬಿಡುಗಡೆ: 256GB ಸ್ಟೋರೇಜ್.. ಬಿಗ್ ಬ್ಯಾಟರಿ!
ಟೆಕ್ನೋ ಸ್ಪಾರ್ಕ್ 30C 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹೊಸ ಅಗ್ಗದ ಫೋನ್ 6.67 ಇಂಚಿನ ಹೆಚ್‌ಡಿ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 720 x1600 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಟೆಕ್ನೋ ಸ್ಪಾರ್ಕ್ 30C 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್ ಅನ್ನು ಹೊಂದಿದೆ. ಇದನ್ನು 6 ನ್ಯಾನೊಮೀಟರ್‌ಗಳಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ವರೆಗೆ ಪ್ಯಾಕ್ ಮಾಡುತ್ತದೆ. ಇದನ್ನು ಮೆಮೊರಿ ಫ್ಯೂಷನ್ ತಂತ್ರಜ್ಞಾನದ ಮೂಲಕ ವಿತರಿಸಲಾಗುತ್ತದೆ. ಇದು 128GB ವರೆಗೆ ಸ್ಟೋರೇಜ್ ಅನ್ನು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಕಂಪನಿಯು ಈ ಫೋನನ್ನು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಈ ಫೋನ್ 48 ಮೆಗಾಪಿಕ್ಸೆಲ್ ಸೋನಿ (IMX582) ಎಐ ಚಾಲಿತ ಕ್ಯಾಮೆರಾವನ್ನು ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಜೊತೆಗೆ, ಎಐ ತಂತ್ರಜ್ಞಾನದೊಂದಿಗೆ ಮತ್ತೊಂದು ಲೆನ್ಸ್ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಟೆಕ್ನೋ ಸ್ಪಾರ್ಕ್ 30C 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇದು 5G ಬ್ಯಾಂಡ್‌ಗಳು ಮತ್ತು NRCA ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ, ಡ್ಯುಯಲ್ ಸಿಮ್ 5G, 4G, ವೈ ಫೈ, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಡ್ಯುಯಲ್ ಸ್ಪೀಕರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








