Home
ಮೊಬೈಲ್

ಸದ್ದಿಲ್ಲದೆ ಹೊಸ Tecno ಫೋನ್ ಲಾಂಚ್; 5000mAh ಬ್ಯಾಟರಿ.. 8GB RAM.. ಬೆಲೆಯೂ ಕಡಿಮೆ!

ಟೆಕ್ನೋ ತನ್ನ ಅಭಿಮಾನಿಗಳಿಗೆ ಹೊಸ ಫೋನ್ ಪರಿಚಯಿಸಿದೆ. ಇದುವೇ ಟೆಕ್ನೋ ಸ್ಪಾರ್ಕ್ 30C 5G (Tecno Spark 30C 5G) ಸ್ಮಾರ್ಟ್‌ಫೋನ್. ಹೌದು, ಕಂಪನಿಯು ತನ್ನ ಅಗ್ಗದ ಬೆಲೆಯ ಟೆಕ್ನೋ ಸ್ಪಾರ್ಕ್ 30C 5G ಫೋನನ್ನು 2024ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಮೊಬೈಲ್‌ನ 4GB RAM ರೂಪಾಂತರವನ್ನು 9,999 ರೂ.ಗೆ ಪರಿಚಯಿಸಿತ್ತು. ಇದೀಗ, ಕಂಪನಿಯು ಈ ಅಗ್ಗದ 5G ಫೋನನ್ನು 8GB RAM ನೊಂದಿಗೆ ಬಿಡುಗಡೆ ಮಾಡಿದೆ. ಬನ್ನಿ, ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಕೇವಲ ಒಂದೇ 4GB RAM ರೂಪಾಂತರದಲ್ಲಿ ಬಿಡುಗಡೆಯಾಗಿತ್ತು. ಇದೀಗ 8GB RAM ಸಹ ಖರೀದಿಗೆ ಲಭ್ಯವಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 5000mAh ಬ್ಯಾಟರಿ, IP54 ರೇಟಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

Tecno Spark 30C 5G ಲಾಂಚ್; 8GB RAM, 5000mAh ಬ್ಯಾಟರಿ.. ಕಡಿಮೆ ಬೆಲೆ!

ಟೆಕ್ನೋ ಸ್ಪಾರ್ಕ್ 30C 5G ಬೆಲೆ ಮತ್ತು ಲಭ್ಯತೆ

8GB RAM + 128GB ಸ್ಟೋರೇಜ್ = 12,999 ರೂ.
4GB RAM + 128GB ಸ್ಟೋರೇಜ್ = 10,499 ರೂ.
4GB RAM + 64GB ಸ್ಟೋರೇಜ್ = 9,999 ರೂ.

ಟೆಕ್ನೋ ಸ್ಪಾರ್ಕ್ 30C 5G ಫೋನನ್ನು 8GB RAM ನೊಂದಿಗೆ ಪರಿಚಯಿಸಲಾಗಿದೆ. ಇದರ ಬೆಲೆ 12,999 ರೂ. ಆಗಿದೆ. ಈ ರೂಪಾಂತರವು 8GB RAM ಜೊತೆಗೆ 128GB ಸ್ಟೋರೇಜ್ ಹೊಂದಿದೆ. ಈ ಮೊದಲು ಈ ಫೋನನ್ನು 4GB RAM ನೊಂದಿಗೆ ಬಿಡುಗಡೆ ಮಾಡಲಾಗಿತ್ತು. ಫೋನಿನ 64GB ಸ್ಟೋರೇಜ್ ರೂಪಾಂತರದ ಬೆಲೆ 9,999 ರೂ. ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 10,499 ರೂ. ಆಗಿದೆ.

ಈ ಅಗ್ಗದ 5G ಫೋನ್ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌, ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ನೀವು ಅಜುರೆ ಸ್ಕೈ, ಮಿಡ್‌ನೈಟ್ ಶಾಡೋ ಮತ್ತು ಅರೋರಾ ಕ್ಲೌಡ್‌ ಬಣ್ಣಗಳ ಆಯ್ಕೆಗಳಲ್ಲಿ ಈ ಮೊಬೈಲ್ ಅನ್ನು ಖರೀದಿಸಬಹುದು.

ಟೆಕ್ನೋ ಸ್ಪಾರ್ಕ್ 30C 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಸ್ಪಾರ್ಕ್ 30C 5G ಫೋನ್ 6.67 ಇಂಚಿನ ಎಚ್‌ಡಿ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 720 x1600 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿದೆ. ಇದನ್ನು 6 ನ್ಯಾನೊಮೀಟರ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 8GB RAM ಹೊಂದಿದೆ. ಇದು 128GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

Tecno Spark 30C 5G ಲಾಂಚ್; 8GB RAM, 5000mAh ಬ್ಯಾಟರಿ.. ಕಡಿಮೆ ಬೆಲೆ!

ಕ್ಯಾಮೆರಾ ಸೆಟಪ್

ಟೆಕ್ನೋ ಸ್ಪಾರ್ಕ್ 30C 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಹಾಗೆಯೇ ಎಐ ತಂತ್ರಜ್ಞಾನದೊಂದಿಗೆ ಮತ್ತೊಂದು ಲೆನ್ಸ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಟೆಕ್ನೋ ಸ್ಪಾರ್ಕ್ 30C 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇದು 5G ಬ್ಯಾಂಡ್‌ಗಳು ಮತ್ತು NRCA ತಂತ್ರಜ್ಞಾನವನ್ನು ಸಹ ಹೊಂದಿದೆ. ಕನೆಕ್ಟಿವಿಟ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್ 5G, 4G, ವೈ ಫೈ, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಡ್ಯುಯಲ್ ಸ್ಪೀಕರ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+