Home
ಮೊಬೈಲ್

ನಾಳೆ Tecno Spark Go 1 ಸೇಲ್; ಕೇವಲ 7,299 ರೂ.! ಡಿಸ್ಕೌಂಟ್ ಎಷ್ಟು?

ಟೆಕ್ನೋ ಕಂಪನಿಯು ಇತ್ತೀಚೆಗೆ ನೂತನ ಟೆಕ್ನೋ ಸ್ಪಾರ್ಕ್ ಗೋ 1 (Tecno Spark Go 1) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ ಬೆಲೆ 8 ಸಾವಿರ ರೂಪಾಯಿಗಿಂತ ಕಡಿಮೆ ಇದೆ. ಅಂದಹಾಗೆ, ನಾಳೆ (ಸೆಪ್ಟೆಂಬರ್ 3) ಈ ಫೋನ್ ತನ್ನ ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಪ್ರಮುಖವಾಗಿ ಇದು, ಅಗ್ಗದ ಬೆಲೆಯ ವಿಭಾಗದಲ್ಲಿ 120Hz ರಿಫ್ರೆಶ್ ದರ ಹೊಂದಿರುವ ಮೊದಲ ಫೋನ್ ಆಗಿದೆ. ಬನ್ನಿ, ಈ ಫೋನಿನ ಬೆಲೆ, ಡಿಸ್ಕೌಂಟ್ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಟೆಕ್ನೋ ಸ್ಪಾರ್ಕ್ ಗೋ 1 ಫೋನ್‌ ಈಗಾಗಲೇ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಇದು 6.67 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. 4GB RAM, 64GB ಸ್ಟೋರೇಜ್ ಮತ್ತು 4GB ಮೆಮೊರಿ ಫ್ಯೂಷನ್ ಒಳಗೊಂಡಿದೆ. ಇದು ಯುನಿಸೊಕ್ ಟಿ615 ಪ್ರೊಸೆಸರ್, 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ನಾಳೆ Tecno Spark Go 1 ಸೇಲ್; ಕೇವಲ 7,299 ರೂ.! ಡಿಸ್ಕೌಂಟ್ ಎಷ್ಟು?

ಟೆಕ್ನೋ ಸ್ಪಾರ್ಕ್ ಗೋ 1 ಫೋನಿನ ಬೆಲೆ

ಕಂಪನಿಯು ಟೆಕ್ನೋ ಸ್ಪಾರ್ಕ್ ಗೋ 1 ಫೋನ್ ಕೇವಲ 4GB RAM ಮತ್ತು 64GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೆಲೆ 7,299 ರೂ. ಆಗಿದೆ. ನೀವು ಸ್ಟಾರ್ಟ್ರೈಲ್ ಬ್ಲಾಕ್, ಗ್ಲಿಟರಿ ವೈಟ್ ಮತ್ತು ಲೈಮ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ ನಾಳೆ (ಸೆ.3) ಮಧ್ಯಾಹ್ನ 12 ಗಂಟೆಗೆ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಮಾರಾಟವಾಗಲಿದೆ. ಸೆಪ್ಟೆಂಬರ್ 6 ರಿಂದ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವನ್ನು ಪ್ರಾರಂಭಿಸಲಿದೆ.

ಡಿಸ್ಲ್ಪೇ: ಟೆಕ್ನೋ ಸ್ಪಾರ್ಕ್ ಗೋ 1 ಫೋನ್ 6.67 ಇಂಚಿನ ಪಂಚ್-ಹೋಲ್ ಡಿಸ್ಲ್ಪೇಯನ್ನು ಹೊಂದಿದೆ. ಇದು ಡೈನಾಮಿಕ್ ಪೋರ್ಟ್ ಡಿಸ್ಪ್ಲೇ ಆಗಿದ್ದು, ನೋಟಿಫಿಕೇಶನ್ ಬಂದಾಗ ಪಂಚ್ ಹೋಲ್ ನೋಚ್ ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಇದು HD+ ರೆಸಲ್ಯೂಶನ್, 120Hz ರಿಫ್ರೆಶ್ ದರವನ್ನು ಪಡೆದಿದೆ.

ಪ್ರೊಸೆಸರ್: ಈ ಹೊಸ ಟೆಕ್ನೋ ಮೊಬೈಲ್‌ ಯುನಿಸೊಕ್ T615 (Unisoc T615) ಚಿಪ್‌ಸೆಟ್ ಅನ್ನು ಹೊಂದಿದೆ. ಇದು 12 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾದ ಪ್ರೊಸೆಸರ್ ಆಗಿದ್ದು, 1.8Ghz ಗಡಿಯಾರದ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೊಬೈಲ್ Android GO ನೊಂದಿಗೆ ಬಂದಿದೆ.

ಸ್ಟೋರೇಜ್: ಟೆಕ್ನೋ ಸ್ಪಾರ್ಕ್ ಗೋ 1ಯು 4GB RAM ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು ಕೇವಲ ಒಂದು ರೂಪಾಂತರವನ್ನು ಮಾತ್ರ ಪರಿಚಯಿಸಿದೆ. ಈ ಫೋನ್ 4GB ಫಿಸಿಕಲ್ RAM ಜೊತೆಗೆ 4GB ವರ್ಚುವಲ್ RAM ಅನ್ನು ಹೊಂದಿದೆ. ಈ ಎರಡನ್ನೂ ಮೆಮೊರಿ ಫ್ಯೂಷನ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ 8GB RAMನ ಶಕ್ತಿಯನ್ನು ನೀಡುತ್ತದೆ. ಈ ಹೊಸ ಟೆಕ್ನೋ ಫೋನ್ LPDDR4x RAM ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ: ಟೆಕ್ನೋ ಸ್ಪಾರ್ಕ್ ಗೋ 1 ಫೋನ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು ಎಐ (AI) ಲೆನ್ಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಟೆಕ್ನೋ ಸ್ಪಾರ್ಕ್ ಗೋ 1 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು 15W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಟೈಪ್ ಸಿ-ಪೋರ್ಟ್ ಮೂಲಕ ಫೋನ್ ಅನ್ನು ಚಾರ್ಜ್ ಮಾಡಬಹುದು. ಈ ಬ್ಯಾಟರಿ ಇತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು: ಟೆಕ್ನೋ ಸ್ಪಾರ್ಕ್ ಗೋ 1 ಫೋನ್ ನೀರು ಮತ್ತು ಧೂಳು ನಿರೋಧಕ IP54 ರೇಟಿಂಗ್‌ ಪಡೆದಿದೆ. ಇದು, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, DTS ಡ್ಯುಯಲ್ ಸ್ಪೀಕರ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Tecno Spark Go 1 Goes on First Sale in India Tomorrow: Know Discount Price, Offer details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+