Home
ಮೊಬೈಲ್

Tecno Spark Go 1 ಸೇಲ್ ಶುರು: ಅಗ್ಗದ ಬೆಲೆ.. ಬಂಪರ್ ಆಫರ್!

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಒಳ್ಳೆಯ ಸುದ್ದಿ. ಅಗ್ಗದ ಬೆಲೆಯ ಫೋನನ್ನು ಬಂಪರ್‌ ಆಫರ್‌ನೊಂದಿಗೆ ಖರೀದಿಸುವ ಸುವರ್ಣಾವಕಾಶ. ಹೌದು, ಟೆಕ್ನೋ ಇತ್ತೀಚೆಗೆ ಟೆಕ್ನೋ ಸ್ಪಾರ್ಕ್ ಗೋ 1 (Tecno Spark Go 1) ಮೊಬೈಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ ಇಂದು (ಸೆಪ್ಟೆಂಬರ್ 3) ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ. ಇದರ ಬೆಲೆ 8,000 ರೂ.ಗಿಂತ ಕಡಿಮೆ ಇದೆ. ಮೊದಲ ಮಾರಾಟದ ಭಾಗವಾಗಿ ಕಂಪನಿಯು ಸಖತ್ ಆಫರ್‌ಗಳನ್ನು ನೀಡುತ್ತಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ಆಫರ್‌ಗಳನ್ನು ತಿಳಿಯೋಣ ಬನ್ನಿ.

ಅಗ್ಗದ ಬೆಲೆಯ ಟೆಕ್ನೋ ಸ್ಪಾರ್ಕ್ ಗೋ 1 ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಗ್ರಾಹಕರು ಈ ಫೋನ್‌ ಖರೀದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಫೋನ್ 6.67 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಯುನಿಸೊಕ್ ಟಿ615 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡಲಿದೆ. ಇದು 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Tecno Spark Go 1 ಸೇಲ್ ಶುರು: ಅಗ್ಗದ ಬೆಲೆ.. ಬಂಪರ್ ಆಫರ್!

ಟೆಕ್ನೋ ಸ್ಪಾರ್ಕ್ ಗೋ 1 ಫೋನಿನ ಬೆಲೆ ಮತ್ತು ಲಭ್ಯತೆ

ಟೆಕ್ನೋ ಸ್ಪಾರ್ಕ್ ಗೋ 1 ಫೋನ್‌ ಲೈಮ್ ಗ್ರೀನ್, ಗ್ಲಿಟರ್ ವೈಟ್ ಮತ್ತು ಸ್ಟಾರ್ಟ್ರೈಲ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದನ್ನು ಕೇವಲ 4GB RAM ಮತ್ತು 64GB ಸ್ಟೋರೇಜ್‌ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆ 7,299 ರೂಪಾಯಿ ಆಗಿದೆ. ನೀವು ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಖರೀದಿಸಬಹುದು. ಸೆಪ್ಟೆಂಬರ್ 6 ರಿಂದ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಪ್ರಾರಂಭಿಸಲಿದೆ.

ಟೆಕ್ನೋ ಸ್ಪಾರ್ಕ್ ಗೋ 1 ಫೋನ್ 6.67 ಇಂಚಿನ ಪಂಚ್-ಹೋಲ್ ಡಿಸ್ಲ್ಪೇಯನ್ನು ಹೊಂದಿದೆ. ಇದು ಡೈನಾಮಿಕ್ ಪೋರ್ಟ್ ಡಿಸ್ಪ್ಲೇ ಆಗಿದ್ದು, ನೋಟಿಫಿಕೇಶನ್ ಬಂದಾಗ ಪಂಚ್ ಹೋಲ್ ನೋಚ್ ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಇದು HD+ ರೆಸಲ್ಯೂಶನ್, 120Hz ರಿಫ್ರೆಶ್ ದರವನ್ನು ಪಡೆದಿದೆ. ಈ ಟೆಕ್ನೋ ಮೊಬೈಲ್‌, ಯುನಿಸೊಕ್ T615 (Unisoc T615) ಚಿಪ್‌ಸೆಟ್ ಹೊಂದಿದೆ. ಇದು Android GO ನೊಂದಿಗೆ ಬಂದಿದೆ.

ಟೆಕ್ನೋ ಸ್ಪಾರ್ಕ್ ಗೋ 1 ಮೊಬೈಲ್‌ 4GB RAM ಹೊಂದಿದೆ. ಕಂಪನಿಯು ಕೇವಲ ಒಂದು ರೂಪಾಂತರವನ್ನು ಮಾತ್ರ ಪರಿಚಯಿಸಿದೆ. ಈ ಫೋನ್ 4GB ಫಿಸಿಕಲ್ RAM ಜೊತೆಗೆ 4GB ವರ್ಚುವಲ್ RAM ಅನ್ನು ಒಳಗೊಂಡಿದೆ. ಈ ಎರಡನ್ನೂ ಮೆಮೊರಿ ಫ್ಯೂಷನ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ 8 GB RAMನ ಶಕ್ತಿಯನ್ನು ನೀಡುತ್ತದೆ. ಈ ಹೊಸ ಟೆಕ್ನೋ ಫೋನ್ LPDDR4x RAM ಅನ್ನು ಬೆಂಬಲಿಸುತ್ತದೆ.

Tecno Spark Go 1 ಸೇಲ್ ಶುರು: ಅಗ್ಗದ ಬೆಲೆ.. ಬಂಪರ್ ಆಫರ್!

13MP ಮುಖ್ಯ ಕ್ಯಾಮೆರಾ.. 5,000mAh ಬ್ಯಾಟರಿ

ಟೆಕ್ನೋ ಸ್ಪಾರ್ಕ್ ಗೋ 1 ಫೋನ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಎಐ (AI) ಲೆನ್ಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು 15W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಟೈಪ್ ಸಿ-ಪೋರ್ಟ್ ಮೂಲಕ ಫೋನನ್ನು ಚಾರ್ಜ್ ಮಾಡಬಹುದು.

ಇತರೆ ವೈಶಿಷ್ಟ್ಯಗಳಲ್ಲಿ ಈ ಹೊಸ ಫೋನ್ ನೀರು ಮತ್ತು ಧೂಳು ನಿರೋಧಕ IP54 ರೇಟಿಂಗ್‌ ಪಡೆದಿದೆ. ಇದು, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, DTS ಡ್ಯುಯಲ್ ಸ್ಪೀಕರ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Tecno Spark Go 1 Goes on First Sale in India Today: Check availability, offers, specs and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+