Home
ಮೊಬೈಲ್

ಸದ್ದಿಲ್ಲದೇ Tecno Spark Go 1 ಫೋನ್ ಲಾಂಚ್; ಅಗ್ಗದ ಬೆಲೆ.. ರಾಶಿ ಫೀಚರ್ಸ್!

ಟೆಕ್ನೋ (Tecno) ತನ್ನ ಗ್ರಾಹಕರಿಗಾಗಿ ಸ್ಪಾರ್ಕ್ ಸರಣಿಯಲ್ಲಿ ಹೊಸ ಫೋನನ್ನು ಪರಿಚಯಿಸಿದೆ. ಈ ಫೋನ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟೆಕ್ನೋ ಸ್ಪಾರ್ಕ್ ಗೋ 1 (Tecno Spark Go 1) ಎಂಬ ಹೆಸರಿನೊಂದಿಗೆ ಬಿಡುಗಡೆ ಮಾಡಲಾಗಿದೆ. ಟೆಕ್ನೋದ ಈ ಹೊಸ ಫೋನ್ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಫೋನನ್ನು ಹೆಚ್ಚಿನ ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಬಹು ಕಾನ್ಫಿಗರೇಶನ್‌ಗಳಲ್ಲಿ ತರಲಾಗಿದೆ. ಬನ್ನಿ, ಈ ಹೊಸ ಟೆಕ್ನೋ ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಹೌದು, ಟೆಕ್ನೋ ತನ್ನ ಸ್ಪಾರ್ಕ್ ಸರಣಿಯಲ್ಲಿ ಹೊಸ ಟೆಕ್ನೋ ಸ್ಪಾರ್ಕ್ ಗೋ 1 (Tecno Spark Go 1) ಫೋನನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 6.67 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು Unisoc T615 ಚಿಪ್ಸೆಟ್, 4GB RAM ಮತ್ತು 4GB ವರ್ಚುವಲ್ RAM ಹಾಗೂ 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಬ್ಯಾಟರಿ ಮತ್ತು IP54 ರೇಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸದ್ದಿಲ್ಲದೇ Tecno Spark Go 1 ಲಾಂಚ್; ಅಗ್ಗದ ಬೆಲೆ.. ರಾಶಿ ಫೀಚರ್ಸ್

ಟೆಕ್ನೋ ಸ್ಪಾರ್ಕ್ ಗೋ 1 ಫೋನಿನ ಬೆಲೆ

ಪ್ರಸ್ತುತ, ಕಂಪನಿಯು ಟೆಕ್ನೋ ಸ್ಪಾರ್ಕ್ ಗೋ 1 ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಫೋನ್‌ ಕಪ್ಪು ಮತ್ತು ಬಿಳಿ ಸೇರಿದಂತೆ ಎರಡು ಬಣ್ಣಗಳ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ವೈಶಿಷ್ಟ್ಯಗಳನ್ನು ನೋಡಿದರೆ ಈ ಫೋನನ್ನು ಅಗ್ಗದ ಬೆಲೆಗೆ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. ಕಂಪನಿಯು ಶೀಘ್ರದಲ್ಲೇ ಬೆಲೆಯನ್ನು ಬಹಿರಂಗಪಡಿಸಲಿದೆ.

ಟೆಕ್ನೋ ಸ್ಪಾರ್ಕ್ ಗೋ 1 ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ಟೆಕ್ನೋ ಸ್ಪಾರ್ಕ್ ಗೋ 1 ಫೋನ್ 6.67 ಇಂಚಿನ IPS LCD ಡಿಸ್ಪ್ಲೇ ಹೊಂದಿದೆ. ಪಂಚ್-ಹೋಲ್ ಕಟೌಟ್ ವಿನ್ಯಾಸವು ಇದರ ಮೇಲೆ ಲಭ್ಯವಿದೆ. ಈ ಡಿಸ್ಲ್ಪೇಯು HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ನೀಡುತ್ತದೆ. ಇದು ಮಾತ್ರವಲ್ಲದೆ, ಸಾಧನವು ಡೈನಾಮಿಕ್ ಪೋರ್ಟ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ನೋಟಿಫಿಕೇಶನ್, ಚಾರ್ಜಿಂಗ್ ಸ್ಥಿತಿ ಮತ್ತು ಇತರ ಪ್ರಮುಖ ಮಾಹಿತಿಯನ್ನು ನೋಡಬಹುದು.

ಪ್ರೊಸೆಸರ್: ಕಂಪನಿಯು ಟೆಕ್ನೋ ಸ್ಪಾರ್ಕ್ ಗೋ 1 ಸ್ಮಾರ್ಟ್‌ಫೋನ್‌ನಲ್ಲಿ ಯುನಿಸೊಕ್ ಟಿ615 ಚಿಪ್‌ಸೆಟ್ ಅನ್ನು ನೀಡಿದೆ. ಅಗ್ಗದ ಬಜೆಟ್‌ನಲ್ಲಿ ಇದು ಉತ್ತಮವೆಂದು ಹೇಳಲಾಗುತ್ತಿದೆ. ಇದರೊಂದಿಗೆ ಮಲ್ಟಿ ಟಾಸ್ಕಿಂಗ್ ಸೇರಿದಂತೆ ಗೇಮಿಂಗ್ ಅನ್ನು ಸಹ ಪಡೆಯಬಹುದು.

ಸ್ಟೋರೇಜ್: ಈ ಮೊಬೈಲ್‌ನಲ್ಲಿ ಕಂಪನಿಯು, 4GB RAM + 4GB ವರ್ಚುವಲ್ RAM ಮತ್ತು 128GB ವರೆಗಿನ ಇಂಟರ್ನಲ್ ಸ್ಟೋರೇಜ್ ಸೌಲಭ್ಯವನ್ನು ಒದಗಿಸಿದೆ. ನೀವು, ಕಡಿಮೆ ಬೆಲೆಯಲ್ಲಿ 8GB RAM ಅನ್ನು ಬಳಸುವ ಅವಕಾಶವನ್ನು ಪಡೆಯಬಹುದು. ಇದರೊಂದಿಗೆ, ಫೋಟೋಗಳು ಮತ್ತು ವಿಡಿಯೋಗಳು ಸೇರಿದಂತೆ ಫೈಲ್‌ಗಳನ್ನು ಸಂಗ್ರಹಿಸಲು ಮತ್ತು ಅಪ್ಲಿಕೇಶನ್‌ಗಳಿಗೆ ಉತ್ತಮ ಪ್ರಮಾಣದ ಮೆಮೊರಿಯನ್ನು ಒದಗಿಸಲಾಗಿದೆ.

ಕ್ಯಾಮೆರಾ: ಟೆಕ್ನೋ ಸ್ಪಾರ್ಕ್ ಗೋ 1 ಫೋನ್‌ ಹಿಂಭಾಗದ ಪ್ಯಾನೆಲ್‌ನಲ್ಲಿ 1 LED ಫ್ಲ್ಯಾಷ್‌ನೊಂದಿಗೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಈ ಹೊಸ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 15W ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ. ಟೈಪ್ ಸಿ-ಪೋರ್ಟ್ ಮೂಲಕ ಬಳಕೆದಾರರು ಫೋನ್ ಅನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.

ಇತರೆ ಫೀಚರ್ಸ್: ಟೆಕ್ನೋ ಸ್ಪಾರ್ಕ್ ಗೋ 1 ಸ್ಮಾರ್ಟ್‌ಫೋನ್‌ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ನೀರು ಮತ್ತು ಧೂಳು ನಿರೋಧಕ IP54 ರೇಟಿಂಗ್‌ನಂತಹ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸುಗಮ ಕಾರ್ಯಕ್ಷಮತೆಯೊಂದಿಗೆ ಫೋನನ್ನು 4 ವರ್ಷಗಳವರೆಗೆ ಬಳಸಬಹುದು ಎಂದು ಕಂಪನಿ ಹೇಳಿದೆ.

Best Mobiles in India

English summary
Tecno Spark Go 1 smartphone launched globally: know Price, Specs and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+