ಇಂದಿನಿಂದ Tecno Spark Go 3 ಸೇಲ್: 8,999 ರೂ. ಬೆಲೆಯ ಹೊಸ ಫೋನ್!
ಭಾರತದಲ್ಲಿ Tecno ಕಂಪೆನಿಯು ಕಳೆದ ವಾರವಷ್ಟೇ ಪರಿಚಯಿಸಿದ್ದ ಬಜೆಟ್ ಬೆಲೆಯ Tecno Spark Go 3 ಫೋನಿನ ಮಾರಾಟವು ಇಂದಿನಿಂದ(ಜನವರಿ 23) ಆರಂಭವಾಗಿದೆ. 120Hz ವರೆಗೆ ರಿಫ್ರೆಶ್ ರೇಟ್, 5,000mAh ಬ್ಯಾಟರಿ ಮತ್ತು Android 15 ಆಧಾರಿತ ಆಪರೇಟಿಂಗ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಂಡಿರುವ ಈ ಫೋನ್ ಏಕೈಕ 4GB RAM ಮತ್ತು 64GB ಸ್ಟೋರೇಜ್‌ನ ಒಂದೇ ಒಂದು ರೂಪಾಂತರದಲ್ಲಿ ಖರೀದಿಗೆ ಲಭ್ಯವಿದ್ದು, ₹8,999 ರೂ. ಬೆಲೆಯ ಈ ಫೋನ್ ಅನ್ನು ಅಮೆಜಾನ್ ಮತ್ತು ದೇಶಾದ್ಯಂತದ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು ಎಂದು ಕಂಪೆನಿಯು ತಿಳಿಸಿದೆ.
Tecno Spark Go 3: ಪ್ರಮುಖ ವೈಶಿಷ್ಟ್ಯಗಳು
Tecno Spark Go 3 ಪೋನ್ 6.74-ಇಂಚಿನ HD+ (720x1,600 ಪಿಕ್ಸೆಲ್‌ಗಳು) IPS ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತದೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಹೊಂದಿರುವ ಈ ಫೋನ್, 1.2m ವರೆಗೆ ಡ್ರಾಪ್ ರೆಸಿಸ್ಟೆನ್ಸ್ ಅನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಕಾರ್ಯಕ್ಷಮತೆಗಾಗಿ, ಇದು 4nm ಆಕ್ಟಾ ಕೋರ್ ಯುನಿಸಾಕ್ T7250 ಚಿಪ್‌ಸೆಟ್, 4GB LPDDR4x RAM ಮತ್ತು 64GB ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದ್ದು, ಎಲ್ಲಾ ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ಒಳಗೊಂಡಿದೆ.
ಕ್ಯಾಮೆರಾ ವಿಭಾಗದಲ್ಲಿ Tecno Spark Go 3 ಫೋನ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು, ಡ್ಯುಯಲ್ LED ಫ್ಲ್ಯಾಶ್ ಸಪೋರ್ಟ್ ಇದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗೆ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ.ಇದು 2K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಫೋನ್ AIGC ಪೋರ್ಟ್ರೇಟ್, AI CAM, ಪೋರ್ಟ್ರೇಟ್, ಸೂಪರ್ ನೈಟ್, ಬ್ಯೂಟಿ, ಡ್ಯುಯಲ್ ವಿಡಿಯೋ, ವ್ಲಾಗ್, ಟೈಮ್-ಲ್ಯಾಪ್ಸ್, ಪನೋರಮಾ ಮತ್ತು ಪ್ರೊ ಕ್ಯಾಮೆರಾ ಮೋಡ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ವಿಭಾಗದಲ್ಲಿ, Tecno Spark Go 3 ಫೋನ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು 15W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, 4G LTE, 3G, Wi-Fi, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಈ ಫೋನ್ ನಾಲ್ಕು ವರ್ಷಗಳ "ಲ್ಯಾಗ್-ಫ್ರೀ ಕಾರ್ಯಕ್ಷಮತೆ"ಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.ಇನ್ನು ಫೋನ್ 167.79x77.97x8.19mm ಆಯಾಮಗಳನ್ನು ಹೊಂದಿದೆ ಮತ್ತು ಸುಮಾರು 182.6g ತೂಗುತ್ತದೆ.
ಈ ಫೋನಿನ ಪ್ರಮುಖ ವಿಶೇಷತೆಯಾಗಿ ,1.5 ಕಿಲೋಮೀಟರ್ ವ್ಯಾಪ್ತಿಯಲ್ಲಿ Tecno ಫೋನ್ ಬಳಕೆದಾರರ ನಡುವೆ ಕಾರ್ಯನಿರ್ವಹಿಸುವ ಆಫ್‌ಲೈನ್ ಕಾಲಿಂಗ್ ಫೀಚರ್ ಪ್ರಮುಖ ಹೈಲೈಟ್ ಆಗಿದೆ. ಮತ್ತು Titanium Grey, Ink Black, Galaxy Blue ಮತ್ತು Aurora Purple ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಒಟ್ಟಾರೆಯಾಗಿ, Tecno Spark Go 3 ಫೋನ್ ಕಡಿಮೆ ಬಜೆಟ್‌ನಲ್ಲಿ ದೊಡ್ಡ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, ಉತ್ತಮ ಬ್ಯಾಟರಿ ಬ್ಯಾಕ್‌ಅಪ್ ಮತ್ತು ಹೊಸ Android ಅನುಭವವನ್ನು ನೀಡುವ ಸ್ಮಾರ್ಟ್‌ಫೋನ್ ಆಗಿದೆ. ಬಜೆಟ್ ಸೆಗ್ಮೆಂಟ್‌ನಲ್ಲಿ ಹೊಸ ಮೊಬೈಲ್ ಖರೀದಿಸಲು ಯೋಚಿಸುತ್ತಿರುವ ಭಾರತೀಯ ಬಳಕೆದಾರರಿಗೆ ಇದು ಗಮನಿಸಬಹುದಾದ ಆಯ್ಕೆ ಎಂಬುದು ನಮ್ಮ ಅಭಿಪ್ರಾಯ. ಆದರೆ, ಈ ಸ್ಮಾರ್ಟ್‌ಫೋನಿನ ಫೀಚರ್ಸ್ ಉತ್ತಮವಾಗಿವೆಯಾದರೂ 5G ಸಂಪರ್ಕವಿಲ್ಲ ಎಂಬುದನ್ನು ಗಮನಿಸಿ.


Click it and Unblock the Notifications