ಜನವರಿ 16ರಂದು ಬರುತ್ತಿದೆ ಅತ್ಯಂತ ಕಡಿಮೆ ಬೆಲೆಯ ಹೊಸ ಸ್ಮಾರ್ಟ್‌ಫೋನ್!
ಭಾರತೀಯ ಮೊಬೈಲ್ ಮಾರುಕಟ್ಟೆಗೆ Tecno ಕಂಪನಿಯ ಹೊಸ ಬಜೆಟ್ ಸ್ಮಾರ್ಟ್‌ಫೋನ್ Tecno Spark Go 3 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. Tecno ಕಂಪೆನಿಯು ಅಧಿಕೃತವಾಗಿ ಘೋಷಿಸಿರುವಂತೆ, ಈ Tecno Spark Go 3 ಫೋನ್ ಜನವರಿ 16ರಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ಲಾಂಚ್ ಆಗಲಿದೆ. ಇದೇ ಸಂದರ್ಭದಲ್ಲಿ, ಈ ಹೊಸ ಹ್ಯಾಂಡ್‌ಸೆಟ್‌ಗಾಗಿ ಅಮೆಜಾನ್‌ನಲ್ಲಿ ವಿಶೇಷ ಮೈಕ್ರೋಸೈಟ್ ಕೂಡ ಲೈವ್ ಆಗಿದ್ದು, ಇದರ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಮೊದಲ ಮಾಹಿತಿ ನೀಡಲಾಗಿದೆ.
Tecno Spark Go 3: ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳು
ಹೊಸ Tecno Spark Go 3 ಫೋನ್ ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ Tecno Spark Go 2 ಮಾದರಿಯ ಮುಂದುವರಿದ ಆವೃತ್ತಿಯಾಗಿದೆ. ಈ ಹೊಸ ಮಾದರಿಯ Tecno Spark Go 3 ಫೋನ್ 6.67 ಇಂಚಿನ HD+ ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ನೊಂದಿಗೆ ಸ್ಮೂತ್ ವೀಕ್ಷಣಾ ಅನುಭವ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ದಿನನಿತ್ಯದ ಬಳಕೆಗೆ ಸೂಕ್ತವಾಗುವಂತೆ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಈ ಫೋನ್ ಕಾರ್ಯಕ್ಷಮತೆಗಾಗಿ Unisoc T7250 ಪ್ರೊಸೆಸರ್ ಹೊಂದಿರಲಿದೆ.

ವಿನ್ಯಾಸದ ವಿಚಾರಕ್ಕೆ ಬಂದರೆ, Tecno Spark Go 3 ಫೋನಿನ ಹಿಂಭಾಗದಲ್ಲಿ ಪಿಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಒಳಗೆ ಒಂದೇ ರಿಯರ್ ಕ್ಯಾಮೆರಾ ಹಾಗೂ ಇನ್‌ಫ್ರಾರೆಡ್ ಸೆನ್ಸರ್ ನೀಡಲಾಗಿದೆ. ಫೋನ್ ಮೇಲ್ಭಾಗದಲ್ಲಿ ಸ್ಪೀಕರ್ ಗ್ರಿಲ್ ಇದ್ದು, ಫ್ಲಾಟ್ ಮೆಟಲ್ ಫ್ರೇಮ್ ಇದಕ್ಕೆ ಪ್ರೀಮಿಯಂ ಲುಕ್ ನೀಡುತ್ತದೆ. ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳನ್ನು ಅಳವಡಿಸಲಾಗಿದೆ. ಹಿಂಭಾಗದ ಕೆಳಭಾಗದಲ್ಲಿ ಟೆಕ್ನೋ ಲೋಗೋ ಸ್ಪಷ್ಟವಾಗಿ ಕಾಣಿಸುತ್ತದೆ. ಒಟ್ಟಾರೆಯಾಗಿ, ಇದು ಬಜೆಟ್ ಬೆಲೆಯಲ್ಲಿ ಆಕರ್ಷಿಸುವಂತೆ ಕಾಣುತ್ತಿದೆ.
ಈ ಬಾರಿ ಬಾಳಿಕೆ ಮತ್ತು ಸುರಕ್ಷತೆಯ ದೃಷ್ಟಿಯಿಂದಲೂ ಈ ಫೋನ್ ಗಮನ ಸೆಳೆಯುತ್ತದೆ. Tecno Spark Go 3 ಗೆ 1.2 ಮೀಟರ್ ಡ್ರಾಪ್ ರೆಸಿಸ್ಟನ್ಸ್ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಜೊತೆಗೆ ಧೂಳು ಮತ್ತು ನೀರಿನ ಸಿಂಪಳದಿಂದ ರಕ್ಷಣೆಗಾಗಿ IP64 ರೇಟಿಂಗ್ ಕೂಡ ಇದೆ. ವಿಶೇಷವಾಗಿ, ಟೆಕ್ನೋ ಕಂಪನಿಯ ಆಫ್‌ಲೈನ್ ಕಾಲಿಂಗ್ ಫೀಚರ್ ಈ ಫೋನ್‌ನಲ್ಲಿ ಲಭ್ಯವಿದ್ದು, ನೆಟ್‌ವರ್ಕ್ ಇಲ್ಲದಿದ್ದರೂ 1.5 ಕಿಲೋಮೀಟರ್ ವ್ಯಾಪ್ತಿಯೊಳಗೆ ಇರುವ ಇತರ ಟೆಕ್ನೋ ಫೋನ್ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಕಂಪೆನಿ ತಿಳಿಸಿದೆ.
ಕಾರ್ಯಕ್ಷಮತೆಯ ವಿಚಾರದಲ್ಲಿTecno Spark Go 2 ಫೋನ್ ನಾಲ್ಕು ವರ್ಷಗಳವರೆಗೆ "ಲಾಗ್-ಫ್ರೀ ಪರ್ಫಾರ್ಮೆನ್ಸ್" ನೀಡುವುದಾಗಿ ಟೆಕ್ನೋ ಭರವಸೆ ನೀಡಿದೆ. ಇದಲ್ಲದೆ, ಬಳಕೆದಾರರ ಅನುಕೂಲಕ್ಕಾಗಿ Ella ವಾಯ್ಸ್ ಅಸಿಸ್ಟೆಂಟ್ ಕೂಡ ಫೋನ್‌ನಲ್ಲೇ ಲಭ್ಯವಾಗಲಿದೆ ಎಂದು ತಿಳಿಸಿದೆ. ಬಣ್ಣಗಳ ಆಯ್ಕೆಗಳಲ್ಲಿ, ಇನ್ನು ಜನವರಿ 16ರಂದು ಪರಿಚಯವಾಗಲಿರುವ ಈ ಫೋನ್ ನೀಲಿ ಬಣ್ಣದ ಆಯ್ಕೆಯಲ್ಲಿ ಮೊದಲಿಗೆ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಣ್ಣದ ಆಯ್ಕೆಗಳು ಲಭ್ಯವಾಗುವ ಸಾಧ್ಯತೆ ಇದೆ. ಆದರೆ, ಬಣ್ಣಗಳು ಖಚಿತವಾಗಿಲ್ಲ.
ಗಮನಿಸುವುದಾದರೆ, ಭಾರತದಲ್ಲಿ ಈ ಹಿಂದಿನ 4G ಮಾದರಿಯ Tecno Spark Go 2 ಅನ್ನು ₹6,999 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಕಳೆದ ಈ ಮಾದರಿಯಲ್ಲಿ 4GB RAM ಮತ್ತು 64GB ಸ್ಟೋರೇಜ್, 120Hz ಡಿಸ್ಪ್ಲೇ, 13 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 15W ಚಾರ್ಜಿಂಗ್ ಬೆಂಬಲದ 5,000mAh ಬ್ಯಾಟರಿ ನೀಡಲಾಗಿತ್ತು. ಈಗ ಹೊಸ Spark Go 3, ಉತ್ತಮ ಬಾಳಿಕೆ, ಹೊಸ ಫೀಚರ್‌ಗಳು ಮತ್ತು ನವೀಕರಿಸಿದ ವಿನ್ಯಾಸದೊಂದಿಗೆ ಬಜೆಟ್ ಗ್ರಾಹಕರ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ. ಒಟ್ಟಾರೆಯಾಗಿ, ಕಡಿಮೆ ಬೆಲೆಯೊಳಗೆ ದೊಡ್ಡ ಡಿಸ್ಪ್ಲೇ, ಬಲವಾದ ಬ್ಯಾಟರಿ ಮತ್ತು ಉಪಯುಕ್ತ ಫೀಚರ್‌ಗಳನ್ನು ಬಯಸುವ ಭಾರತೀಯ ಬಳಕೆದಾರರಿಗೆ Tecno Spark Go 3 ಒಂದು ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.


Click it and Unblock the Notifications








