Home
ಮೊಬೈಲ್

9,999 ರೂ.ಗೆ ಭಾರತದ ಅತ್ಯಂತ ಸ್ಲಿಮ್ 5G ಫೋನ್ ಬಿಡುಗಡೆ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ TECNO ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ TECNO SPARK GO 5G ಅನ್ನು ಇಂದು (14 ಆಗಸ್ಟ್) ಭರ್ಜರಿಯಾಗಿ ಬಿಡುಗಡೆಗೊಳಿಸಿದೆ. ಬೃಹತ್ 6000mAh ಬ್ಯಾಟರಿಯನ್ನು ಹೊಂದಿದ್ದರೂ, ಈ ಸ್ಮಾರ್ಟ್‌ಫೋನ್ ಕೇವಲ 7.99mm ನೊಂದಿಗೆ ತನ್ನ ವಿಭಾಗದಲ್ಲಿ ಭಾರತದ ಅತ್ಯಂತ ತೆಳುವಾದ ಮತ್ತು ಹಗುರವಾದ 5G ಸ್ಮಾರ್ಟ್‌ಫೋನ್ ಆಗಿದ್ದು, ಭಾರತದ ಯುವ ಪೀಳಿಗೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಫೋನ್ ಅನ್ನು ವಿನ್ಯಾಸ ಮಾಡಲಾಗಿದೆ ಎಂದು ಕಂಪೆನಿಯು ತಿಳಿಸಿದೆ. ಹಾಗಾದರೆ, ಈ ಹೊಸ ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

TECNO SPARK GO 5G: ಪ್ರಮುಖ ವೈಶಿಷ್ಟ್ಯಗಳು
ಹೊಸ TECNO SPARK GO 5G ಫೋನ್ ದೊಡ್ಡ 6.74 ಇಂಚಿನ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ, ಇದು ವೀಡಿಯೊ ವೀಕ್ಷಣೆ ಮತ್ತು ಗೇಮಿಂಗ್ ಅನುಭವವನ್ನು ಉತ್ತಮಗೊಳಿಸುತ್ತದೆ. ಈ ಫೋನ್ IP64 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರು ನಿರೋಧಕವಾಗಿದೆ, ಇದು ಮಳೆಗಾಲದ ಪ್ರಯಾಣ ಅಥವಾ ವಾರಾಂತ್ಯದ ಸಾಹಸಗಳಿಗೂ ಸೂಕ್ತವಾಗಿದೆ. ಈ ಹೊಸ ಫೋನನ್ನು ಕೇವಲ ವೇಗದ ಬಗ್ಗೆ ಮಾತ್ರವಲ್ಲ, ಅದರ ವಿನ್ಯಾಸ ಮತ್ತು ಬಾಳಿಕೆಗೂ ಹೆಚ್ಚಿನ ಗಮನ ನೀಡಲಾಗಿದೆ ಎಂದು TECNO ಕಂಪೆನಿ ಹೇಳಿಕೊಂಡಿದೆ.

ಕಾರ್ಯಕ್ಷಮತೆಗಾಗ, ಈ ಫೋನ್MediaTek Dimensity 6400 ಚಿಪ್‌ಸೆಟ್‌ನಿಂದ ನಡೆಸಲ್ಪಡುತ್ತದೆ. ಇದು ಫೋನ್‌ನ ವೇಗದ ಮತ್ತು ನಯವಾದ ಕಾರ್ಯಕ್ಷಮತೆಗೆ ನೆರವಾಗುತ್ತದೆ. ಈ ಫೋನ್ 8GB RAM (4GB + 4GB ವರ್ಚುವಲ್) ಮತ್ತು 128GB ಸಂಗ್ರಹಣೆಯೊಂದಿಗೆ ಬರುತ್ತದೆ, ಇದು ಹೆಚ್ಚಿನ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಈ ಫೋನ್ Android 15 ಆಧಾರಿತ HiOS 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸುಗಮ ಮತ್ತು ಆಧುನಿಕ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ.

9,999 ರೂ.ಗೆ ಭಾರತದ ಅತ್ಯಂತ ಸ್ಲಿಮ್ 5G ಫೋನ್ ಬಿಡುಗಡೆ!

TECNO SPARK GO 5G ಭಾರತದ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ವಿಶೇಷವಾದ AI ಸಹಾಯಕ ವೈಶಿಷ್ಟ್ಯವನ್ನು ಒಳಗೊಂಡಿದೆ. ಈ ವೈಶಿಷ್ಟ್ಯವು ಹುಡುಕಾಟ, ಬರವಣಿಗೆ ಮತ್ತು ಅನುವಾದದಂತಹ ದೈನಂದಿನ ಕಾರ್ಯಗಳನ್ನು ಸುಲಭಗೊಳಿಸುತ್ತದೆ, ಇದು ಭಾರತೀಯ ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಿದೆ. ಫೋನ್‌ನ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ ಸಾಮರ್ಥ್ಯ. 6000mAh ಬ್ಯಾಟರಿ ಇದ್ದರೂ, ಇದು ಕೇವಲ 7.99mm ನಷ್ಟು ತೆಳ್ಳಗಿದೆ ಮತ್ತು ಇದರ ವರ್ಗದಲ್ಲೇ ಅತ್ಯಂತ ಹಗುರವಾದ 5G ಸ್ಮಾರ್ಟ್‌ಫೋನ್ ಎಂದು ಕಂಪನಿ ಹೇಳಿದೆ.

ಇಷ್ಟೇ ಅಲ್ಲದೆ, ಈ ಸ್ಮಾರ್ಟ್‌ಫೋನ್ ವಿಶೇಷವಾಗಿ ಅದರ 5G ಸಾಮರ್ಥ್ಯಗಳಿಗಾಗಿ ಗಮನ ಸೆಳೆಯುತ್ತದೆ ಎಂದು ಕಂಪೆನಿ ಗುರುತಿಸಿದೆ. ಹೆಚ್ಚಿನ ಪ್ರವೇಶ ಮಟ್ಟದ 5G ಫೋನ್‌ಗಳಿಗಿಂತ ಉತ್ತಮ ಸಂಪರ್ಕ ಮತ್ತು ವೇಗವನ್ನು ಒದಗಿಸಲು ಇದು 5G ಕ್ಯಾರಿಯರ್ ಒಟ್ಟುಗೂಡಿಸುವಿಕೆ ಮತ್ತು 4x4 MIMO ತಂತ್ರಜ್ಞಾನವನ್ನು ಬಳಸುತ್ತದೆ. ಇದರ ಜೊತೆಗೆ, ಈ ಫೋನ್‌ನಲ್ಲಿ ಹೊಸ ವೈಶಿಷ್ಟ್ಯ "ನೋ ನೆಟ್‌ವರ್ಕ್ ಕಮ್ಯುನಿಕೇಷನ್" ಮೋಡ್ ಇದೆ, ಇದು ಬಳಕೆದಾರರಿಗೆ ಸಂಪೂರ್ಣವಾಗಿ ನೆಟ್‌ವರ್ಕ್ ಕಡಿತಗೊಳಿಸುವ ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ.

9,999 ರೂ.ಗೆ ಭಾರತದ ಅತ್ಯಂತ ಸ್ಲಿಮ್ 5G ಫೋನ್ ಬಿಡುಗಡೆ!
Ai image

TECNO SPARK GO 5: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ TECNO SPARK GO 5G ಫೋನ್ ಏಕೈಕ 4GB RAM ಮತ್ತು 128GB ಸಂಗ್ರಹಣೆಯ ಮಾದರಿಯಲ್ಲಿ ₹9,999 ರೂ.ಗೆ ಪರಿಚಯಗೊಂಡಿದೆ. ಈ ಫೋನ್ ಆಗಸ್ಟ್ 21, 2025 ರಿಂದ ಭಾರತದಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಾಗಲಿದ್ದು, ಗ್ರಾಹಕರು ಈ ಸಾಧನವನ್ನು ಸ್ಕೈ ಬ್ಲೂ, ಇಂಕ್ ಬ್ಲ್ಯಾಕ್, ಟರ್ಕ್ವಾಯಿಸ್ ಹಸಿರು ಮತ್ತು ಬಿಕಾನೆರ್ ರೆಡ್ ಎಂಬ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಖರೀದಿಸಬಹುದು.

TECNO SPARK GO 5G ಸಾಧನವನ್ನು ಭಾರತದ ಯುವ ಪೀಳಿಗೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ ಇದು ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ವೃತ್ತಿಪರರವರೆಗೂ ಎಲ್ಲರಿಗೂ ಸೂಕ್ತವಾಗಿದೆ. ಇದು ವೇಗದ ಮತ್ತು ವಿಶ್ವಾಸಾರ್ಹವಾದ 5G ಅನುಭವವನ್ನು ನೀಡುತ್ತದೆ ಎಂದು TECNO ಕಂಪೆನಿ ಹೇಳಿದೆ. ಹಾಗೆಯೇ, TECNO ಮೊಬೈಲ್ ಇಂಡಿಯಾದ CEO ಅರಿಜೀತ್ ತಲಾಪಾತ್ರ ಅವರು, ಈ ಸಾಧನವು ಯುವ ಭಾರತೀಯರಿಗೆ ಭವಿಷ್ಯಕ್ಕೆ ಸಿದ್ಧವಾಗಿರುವ ವೈಶಿಷ್ಟ್ಯಗಳನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತದೆ ಎಂದು ತಿಳಿಸಿದ್ದಾರೆ.

Best Mobiles in India

English summary
TECNO has launched the TECNO Spark Go 5G featuring a massive 6000mAh battery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+