Home
ಮೊಬೈಲ್

ಶಿಯೋಮಿ ಪೋಕೋ ಪೋನ್ ಆಡ್ ನೋಡಿದ್ರೆ ಒನ್‌ಪ್ಲಸ್ 6 ಬೇಡ ಅಂತೀರಾ.!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಕಂಪನಿ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡುವ ಮೂಲಕ ಭಾರತೀಯ ಪ್ರಿಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಂಬರ್ 1 ಪಟ್ಟವನ್ನು ಅಲಂಕರಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಯಾವುದೇ ಫೋನ್ ಒನ್‌ಪ್ಲಸ್ 6ಗೆ ಸೆಡ್ಡು ಹೊಡೆಯುವಂತೆ ಕಾಣುತ್ತಿಲ್ಲ. ಆದರೆ ಸದ್ಯ ಮಾರುಕಟ್ಟೆಗೆ ಶಿಯೋಮಿ ಬೊಂಬಾಟ್ ಫೋನ್‌ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಶಿಯೋಮಿ ಪೋಕೋ ಪೋನ್ ಆಡ್ ನೋಡಿದ್ರೆ ಒನ್‌ಪ್ಲಸ್ 6 ಬೇಡ ಅಂತೀರಾ.!

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಗೇಮರ್‌ಗಳ ಬಳಕೆಗಾಗಿಯೇ ಹೊಸದಾಗಿ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಲು ಮುಂದಾಗಿರುವ ಶಿಯೋಮಿ, ಇದಕ್ಕಾಗಿಯತೇ ಪೋಕೋ ಬ್ರಾಂಡ್ ಹುಟ್ಟಿಹಾಕಿದೆ. ಸದ್ಯ ಆಗಸ್ಟ್ 22 ರಂದು ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಿದೆ. ಈಗಾಗಲೇ ಈ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಲೀಕ್ ಆಗಿದ್ದು, ಮಾರುಕಟ್ಟೆಯಲ್ಲಿ ಇದರ ಆಡ್‌ಗಳು ಇನ್ನು ಹೆಚ್ಚಿನ ಸದ್ದು ಮಾಡುತ್ತಿವೆ.

ಮಾಸ್ಟರ್‌ ಆಫ್ ಸ್ಟೀಡ್:

ಮಾರುಕಟ್ಟೆಯಲ್ಲಿ ಬಿಡಗಡೆಗೂ ಮುಂಚೆ ಒನ್‌ಪ್ಲಸ್ 6 ಜಾಹಿರಾತಿನಲ್ಲಿ 'ದಿ ಸ್ಪೀಡ್ ಯೂ ನೀಡ್' ಎನ್ನುವ ಟ್ಯಾಗ್ ಲೈನಿನಲ್ಲಿ ಆಡ್‌ಗಳನ್ನು ನೀಡುತಿತ್ತು. ಈಗ ಮಾರುಕಟ್ಟೆಗೆ ಬರಲಿರುವ ಪೋಕೋ ಪೋನ್ 'ಮಾಸ್ಟರ್ ಆಫ್ ಸ್ಟೀಡ್' ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಮುಂದಾಗಿದೆ.

ಒನ್‌ಪ್ಲಸ್‌ 6 ಗೆ ಸೆಡ್ಡು:

ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಪೋಕೋ ಫೋನ್ ಅನ್ನು ಲಾಂಚ್ ಮಾಡಲಾಗುತ್ತಿದೆ. ಇದಲ್ಲದೇ ವಿನ್ಯಾಸದಲ್ಲಿಯೂ ಈ ಸ್ಮಾರ್ಟ್‌ಫೋನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ. ವಿನ್ಯಾಸದ ಫೋಟೋವನ್ನು ಹಾಕಲಾಗಿದೆ.

ಗೇಮರ್‌ಗಳಿಗಾಗಿಯೇ:

ಪೋಕೋಫೋನ್ ಅನ್ನು ಗೇಮರ್‌ಗಳಿಗಾಗಿಯೇ ಬಿಡುಗಡೆ ಮಾಡಲಾಗಿದ್ದು, ಇದಕ್ಕಾಗಿಯೇ ವೇಗದ ಪ್ರೋಸೆಸರ್ ನೊಂದಿಗೆ RAM ಅನ್ನು ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿಕೊಳ್ಳಲಿದೆ.

ಪ್ರೋಸೆಸರ್:

ಪೋಕೊ ಫೋನ್ F1 ಗೇಮರ್ ಗಳಿಗಾಗಿಯೇ ಲಾಂಚ್ ಮಾಡುತ್ತಿರುವ ಫೋನ್‌ ಆಗಿರುವುದರಿಂದಾಗಿ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಪ್ರೊಸೆಸರ್ ಆಗಿರುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 SOC ಪ್ರೊಸೆಸರ್ ಅಳವಡಿಸಿದೆ. ಇದರೊಂದಿಗೆ 6 GB RAM ಮತ್ತು 64 GB / 128 GB ಇಂಟರ್ನಲ್ ಮೆಮೊರಿಯೊಂದಿಗೆ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.

ಮೊದಲ ಫೋನ್ ಪೋಕೊ ಫೋನ್ F1:

ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಭಾರಿಗೆ ಗೇಮಿಂಗ್ ಸ್ಮಾರ್ಟ್‌ಫೋನ್‌ ವೊಂದನ್ನು ಸಾಕಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಶಿಯೋಮಿ ಪೋನ್ F1 ಅನ್ನು ಲಾಂಚ್ ಮಾಡಲು ಮುಂದಾಗಿದೆ.

ದೊಡ್ಡ ಡಿಸ್‌ಪ್ಲೇ:

ಪೋಕೊ ಫೋನ್ F1 ಕುರಿತಂತೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದೆ. ಆದರೆ ಈ ಸ್ಮಾರ್ಟ್‌ಫೋನ್ ನಿರ್ಮಾಣದ ಬಗ್ಗೆ ಮಾತ್ರವೇ ಮಾಹಿತಿ ನೀಡಿರುವ ಶಿಯೋಮಿ, ವಿಶೇಷತೆಗಳ ಕುರಿತು ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ಆದರೆ ಮೂಲಗಳು ನೀಡಿರುವ ಮಾಹಿತಿ ಅನ್ವಯ 18:9 ಅನುಪಾತದ 6.3 ಇಂಚಿನ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಕ್ಯಾಮೆರಾ:

ಪೋಕೊ ಫೋನ್ F1 ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಕ್ಯಾಮೆರಾಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು 20MP ಕ್ಯಾಮೆರಾ ನೀಡಲಾಗಿದೆ. ಕ್ಯಾಮರಾ ತಂತ್ರಜ್ಞಾನವೆ ಹೆಚ್ಚು ವಿಶೇಷ ಎಂದು ಶಿಯೋಮಿ ಮೂಲಗಳು ತಿಳಿಸಿವೆ. ಇದಕ್ಕಾಗಿಯೇ ಹೆಚ್ಚುವರಿ ಸೆನ್ಸಾರ್ ಅನ್ನು ಇದರಲ್ಲಿ ಅಳವಡಿಸಿದೆ.

Best Mobiles in India

English summary
That's the sound of speed POCO F1, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+