ತ್ವರಿತ ಸಂದೇಶಿಸುವಿಕೆ ಸ್ಕೈಪ್‌ನ ಆರಂಭ ಹೀಗಿರಲಿ

By Shwetha
|

ಸ್ಕೈಪ್, ಜನಪ್ರಿಯವಾದ ಅಂತರ್ಜಾಲ ಕರೆ ಮಾಡುವಿಕೆ ಅಪ್ಲಿಕೇಶನ್ 2003 ರಲ್ಲಿ ಅಸ್ತಿತ್ವವನ್ನು ಪಡೆದುಕೊಂಡಿತು. ಇದೊಂದು ಉಚಿತ ಸೇವೆಯಾಗಿದ್ದು ಜಗತ್ತಿನಾದ್ಯಂತ ಇನ್ನೊಬ್ಬರೊಂದಿಗೆ ಹೆಚ್ಚು ಹತ್ತಿರವಾಗಿರುವ ಅತ್ಯಂತ ಸುಲಭದ ಮತ್ತು ಸರಳ ವಿಧಾನ ಇದಾಗಿದೆ.

ನೀವು ಅಂತರಾಷ್ಟ್ರೀವಾಗಿ ಪ್ರಯಾಣ ಮಾಡುತ್ತಿದ್ದೀರಿ ಹಾಗೂ ಮತ್ತೊಬ್ಬರಿಗೆ ಕರೆ ಮಾಡುವ ಸಂದರ್ಭದಲ್ಲಿ ದುಡ್ಡನ್ನು ಉಳಿಸಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ, ಸ್ಕೈಪ್ ಒಂದು ಉತ್ತಮ ಆಯ್ಕೆಯಾಗಿದೆ. ನಿಮಗಿದನ್ನು ಕಂಪ್ಯೂಟರ್, ಟ್ಯಾಬ್ಲೆಟ್ಸ್, ಫೋನ್ಸ್, ಮನೆಯ ಫೋನ್‌ಗಳು, ಟಿವಿ, ಎಕ್ಸ್‌ ಬೋಕ್ಸ್‌ನಂತಹ ಡಿವೈಸ್ ಮೂಲಕ ಕೂಡ ಪ್ರವೇಶಿಸಬಹುದಾಗಿದೆ.

ನಿಮಗೆ ಸ್ಕೈಪ್ ಖಾತೆಯನ್ನು ತೆರೆಯಬೇಕೆಂಬ ಉದ್ದೇಶ ಇದ್ದಲ್ಲಿ ಮತ್ತು ಅದು ಹೇಗೆಂಬುದು ತಿಳಿಯದಿದ್ದಲ್ಲಿ ಇಲ್ಲಿದೆ ಇದನ್ನು ಪ್ರವೇಶಿಸುವ ಸುಲಭ ವಿಧಾನಗಳು

#1

#1

ಇತರ ಅಪ್ಲಿಕೇಶನ್‌ಗಳಂತೆ ಇದನ್ನು ಪ್ರವೇಶಿಸುವುದು ಅತ್ಯಂತ ಸುಲಭವಾಗಿದೆ. ಖಾತೆ ತೆರೆಯಲು, ಸ್ಕೈಪ್ ಮುಖ್ಯಪುಟಕ್ಕೆ ಹೋಗಿ ಮತ್ತು ನಮ್ಮನ್ನು ಸೇರಿ (ಜಾಯಿನ್ ಅಸ್) ಅನ್ನು ಕ್ಲಿಕ್ ಮಾಡಿ. ಇದು ಮೇಲ್ಭಾಗದ ಬಲಭಾಗದಲ್ಲಿದೆ.

#2

#2

ನಿಮ್ಮ ಖಾತೆಗೆ ಇದನ್ನು ಹೊಂದಿಸಿದ ನಂತರ, ಮೊಬೈಲ್ ಅಥವಾ ಲ್ಯಾಂಡ್ ಲೈನ್ ಅನ್ನು ಬಳಸಿ ಕರೆ ಮಾಡಬಹುದಾದ ಸ್ಕೈಪ್ ಕ್ರೆಡಿಟ್ ಅನ್ನು ಖರೀದಿಸಲು ಇಚ್ಛಿಸುತ್ತೀರಾ ಎಂದು ನಿಮ್ಮನ್ನು ಕೇಳಬಹುದು. ನಿಮಗೆ ಇದನ್ನು ಬೇಡವಾದಲ್ಲಿ ಇದನ್ನು ತ್ಯಜಿಸಿ.

#3

#3

ನಿಮ್ಮ ಆಡಿಯೋ ಮತ್ತು ವೀಡಿಯೋ ಸಲಕರಣೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಸ್ಪೀಕರ್‌ಗಳು ಆನ್‌ನಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ವೆಬ್‌ಕ್ಯಾಮ್ ಜೋಡಣೆಯಾದ ನಂತರ ಆಡಿಯೋ ಮತ್ತು ವೀಡಿಯೋ ಹೇಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

#4

#4

ನಿಮ್ಮ ಖಾತೆಯನ್ನು ಹೊಂದಿಸಲು, ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಬೇಕೇ ಎಂದು ನಿಮ್ಮಲ್ಲಿ ಹಲವಾರು ಬಾರಿ ಕೇಳಲಾಗುತ್ತದೆ. ಇದನ್ನು ಬದಲಾಯಿಸಲು, ಎಡ ಮೇಲ್ಬಾಗದಲ್ಲಿರುವ ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ ನಿಮ್ಮೆಲ್ಲಾ ಪ್ರೊಫೈಲ್ ಸೆಟ್ಟಿಂಗ್‌ಗಳು ಗೋಚರಿಸುತ್ತವೆ. ನಿಮ್ಮ ಫೋನ್ ಸಂಖ್ಯೆ, ಇಮೇಲ್ ವಿಳಾಸ, ದೇಶ, ರಾಜ್ಯ, ಲಿಂಗ, ಹುಟ್ಟುಹಬ್ಬ ಹೀಗೆ ಪ್ರತಿಯೊಂದನ್ನೂ ನಿಮಗೆ ಬದಲಾಯಿಸಬಹುದಾಗಿದೆ.

#5

#5

ನಿಮಗೆ ಯಾರು ಕರೆ ಮಾಡಿದರು ಯಾರು ಸಂದೇಶ ಕಳುಹಿಸಿದರು ಎಂಬುದನ್ನು ಆರಿಸಬಹುದಾಗಿದೆ. ನಿಮಗೆ ವೀಡಿಯೋಗಳನ್ನು ಕಳುಹಿಸಿದವರು, ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಯಾರು ನೋಡಬಹುದು, ನಿಮ್ಮ ಚಾಟ್ ಇತಿಹಾಸದಲ್ಲಿ ಅವರು ಎಷ್ಟು ಸಮಯದವರೆಗೆ ನಿಲ್ಲಬೇಕು ಇದೆಲ್ಲಾವನ್ನೂ ನಿಮಗೆ ಆರಿಸಬಹುದಾಗಿದೆ. ಯಾವ ಸ್ಕೈಪ್ ಸೂಚನೆಗಳನ್ನು ನೀವು ಸ್ವೀಕರಿಸಬೇಕು ಎಂಬುದನ್ನು ನೋಡಲು "ಅಧಿಸೂಚನೆಗಳು" ಅಲ್ಲಿ ನಿಮ್ಮ ನೋಟ ಹರಿಸಿ.

#6

#6

ಒಮ್ಮೆ ನೀವು ಸ್ಕೈಪ್ ಅಪ್ಲಿಕೇಶನ್‌ನಲ್ಲಿ ಇದ್ದೀರಿ ಎಂದಾದಲ್ಲಿ, ನಿಮ್ಮ ಸ್ನೇಹಿತರನ್ನು ಹುಡುಕಿ ಮತ್ತು ಅವರಿಗೆ ಶುಭಾಶಯಗಳನ್ನು ತಿಳಿಸಿ. "ಸರ್ಚ್ ಅಡ್ರೆಸ್ ಬುಕ್" ಅನ್ನು ಆರಿಸುವ ಮೂಲಕ ನಿಮ್ಮ ಸ್ಕೈಪ್ ಸಂಪರ್ಕಗಳನ್ನು ನಿಮಗೆ ಹುಡಕಾಡಬಹುದಾಗಿದೆ.

#7

#7

ತ್ವರಿತ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು, ನಿಮ್ಮ ಪಟ್ಟಿಯಲ್ಲಿರುವ ಸಂಪರ್ಕವನ್ನು ಕ್ಲಿಕ್ ಮಾಡಿ ನಿಮ್ಮ ಕರ್ಸರ್ ಇರುವ ಪಠ್ಯ ಕ್ಷೇತ್ರದಲ್ಲಿ ಟೈಪ್ ಮಾಡಿ.

Best Mobiles in India

Read more about:
English summary
This article tells about that how to start Skype account so easily and its features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X