16 mp ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ ನಿಮಗೆ ಗೊತ್ತೇ?

By Shwetha
|

ಈಗ ಸೆಲ್‌ಫೋನ್‌ಗಳು ಮಾರುಕಟ್ಟೆಯನ್ನಾಳುತ್ತಿರುವ ಧೀಮಂತ ಮಾಧ್ಯಮಗಳಾಗಿದ್ದು ಉತ್ತಮ ಶ್ರೇಣಿಗಳು ಹಾಗೂ ವಿಶೇಷತೆಗಳೊಂದಿಗೆ ಬೇರೆ ತಾಂತ್ರಿಕ ಉಪಕರಣಗಳೊಂದಿಗೆ ಪೈಪೋಟಿಗೆ ಬಿದ್ದಿವೆ ಎಂದೇ ಹೇಳಬಹುದು. ಉದಾಹರಣೆಗೆ ಇತ್ತೀಚೆಗೆ ಬರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ದೃಶ್ಯ ತಾಂತ್ರಿಕತೆಗಳಿದ್ದು ಇವುಗಳು ದುಬಾರಿ ವೆಚ್ಚದ ಟಿವಿಗಳು ನೀಡುವುದಕ್ಕಿಂತಲೂ ಹೆಚ್ಚು ಗುಣಮಟ್ಟದ ದೃಶ್ಯವನ್ನು ಗ್ರಾಹಕರಿಗೆ ಒದಗಿಸುತ್ತದೆ.

ಆಡಿಯೋ, ವೀಡಿಯೋ, ಫೋಟೋ ಹೀಗೆ ಎಲ್ಲಾ ವಿಷಯಗಳಲ್ಲೂ ಸ್ಮಾರ್ಟ್‌ಪೋನ್ ಗಮನ ಸೆಳೆಯುತ್ತದೆ ಮತ್ತು ಗ್ರಾಹಕರು ಅದನ್ನು ಖರೀದಿಸುವಂತೆ ಮಾಡುತ್ತದೆ. ಅದೇ ರೀತಿ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಕೂಡ ತನ್ನ ನಿರ್ಮಾಣದಲ್ಲಿ ಹಲವಾರು ವಿಭಿನ್ನ ಅಂಶಗಳನ್ನು ಹೊರತರುವ ಮೂಲಕ ಗ್ರಾಹಕರಿಗೆ ಅವರು ಮೆಚ್ಚುವ ವಿಶೇಷತೆಯುಳ್ಳ ಪೋನ್ ಅನ್ನು ನೀಡಲು ಕಂಪೆನಿ ಪೂರ್ಣಪ್ರಮಾಣದಲ್ಲಿ ಶ್ರಮವಹಿಸುತ್ತಿದೆ.

ಇತ್ತೀಚಿನ ವರದಿಯ ಪ್ರಕಾರ ಟಾಪ್ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಡಿವೈಸ್‌ನಲ್ಲಿ ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದ್ದು ತನ್ನ ಕಾರ್ಯದಲ್ಲಿ ಯಶಸ್ಸನ್ನು ಗಳಿಸಿದೆ. ಕ್ಯಾನನ್ ಹಾಗೂ ನಿಕಾನ್‌ನಂತಹ ಕಾಂಪ್ಯಾಕ್ಟ್ ಕ್ಯಾಮೆರಾ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ಗಳಿಗೆ ಅಳವಡಿಸಿವೆ.

ಈ ಫೋನ್‌ನಲ್ಲಿರುವ ಕ್ಯಾಮೆರಾ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಪರಿಣಾತ್ಮಕವಾಗಿ ಬಳಕೆದಾರರ ಕೈಯಲ್ಲಿ ರಾರಾಜಿಸಲಿದೆ. ಇದರಲ್ಲಿ ಇಮೇಜ್‌ಗಳನ್ನು ಸುಲಭವಾಗಿ ಬಳಕೆದಾರರು ಹಂಚಿಕೊಳ್ಳಬಹುದಾಗಿದೆ.

ಗ್ಯಾಲಕ್ಸಿ S4 ಝೂಮ್‌ನಲ್ಲಿ ಸುಧಾರಿತ ನಿಯಂತ್ರಣಗಳು ಹಾಗೂ ಪುರ್ವಾ ನಿಯೋಜಿತ ಮೋಡ್‌ಗಳಿದ್ದು ಅವುಗಳು ಬಳಸಲು ಸುಲಭವಾಗಿದೆ. ಇದರಂತೆ ಗ್ಯಾಲಕ್ಸಿ S5 ಕೂಡ ಅತ್ಯಧುನಿಕ ಕ್ಯಾಮೆರಾ ತಂತ್ರಜ್ಞಾನಗಳಿಂದ ಸಮ್ಮಿಲಿತಗೊಂಡಿದೆ. ನಿಮ್ಮ ಮುಂಬರುವ ಫೋನ್ ಖರೀದಿಯಲ್ಲಿ ಸುಂದರವಾಗಿರುವ ಅತ್ಯಾಧುನಿಕ ತಂತ್ರಜ್ಞಾನವಿರುವ ಕ್ಯಾಮೆರಾ ಇರಬೇಕೆಂಬುದು ನಿಮ್ಮ ಯೋಜನೆಯಾಗಿದ್ದರೆ ಇಲ್ಲಿ ನಾವು ನೀಡಿರುವ ಬೆಸ್ಟ್ ಫೋನ್‌ಗಳ ಪಟ್ಟಿಯನ್ನು ಗಮನಿಸಿ ನಂತರ ಖರೀದಿಯಲ್ಲಿ ತೊಡಗಿರಿ.

#1

#1

ಮಾರುಕಟ್ಟೆ ಕಿಂಗ್ ಎಂದೇ ಪ್ರಸಿದ್ಧವಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S5 ತನ್ನ ಕ್ಯಾಮೆರಾ ಮತ್ತು ಇತರ ವೈಶಿಷ್ಟ್ಯಗಳಲ್ಲಿ ಬಹಳಷ್ಟು ತಂತ್ರಗಾರಿಕೆಯನ್ನು ರೂಪಿಸಿದೆ. 13MP to 16MP ರೆಸಲ್ಯೂಶನ್ ಇದರಲ್ಲಿದ್ದು ನೈಜ - ಎಚ್‌ಡಿಆರ್ ಗುಣಮಟ್ಟ ಇದರಲ್ಲಿದೆ. ಫೋಟೋ ಎಡಿಟ್ ಮಾಡುವ ತಂತ್ರಜ್ಞಾನ ಮಾರ್ಪಾಡುಗಳೊಂದಿಗೆ ಸಮೃದ್ಧಗೊಂಡಿದೆ. 5.1 ಇಂಚಿನ ಸೂಪರ್ AMOLED ಡಿಸ್‌ಪ್ಲೇ, ಎಕ್ಸೋನಸ್ 5420 ಓಕ್ಟಾ-ಕೋರ್ CPU, 2ಜಿಬಿ ರ್‌ಯಾಮ್, ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್, 16 ಜಿಬಿ ಆನ್ ಬೋರ್ಟ್ ಸಂಗ್ರಹಣೆ, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ವೈಫೈ, 3 ಜಿ ಸಂಪರ್ಕ ಇದರ ವೈಶಿಷ್ಟ್ಯವಾಗಿದೆ.

#2

#2

ಜಿಯೋನಿ ಎಲೈಫ್ E7 ಅನ್ನು ರೂ. 25,000 ದಲ್ಲಿ ಖರೀದಿಸಬಹುದಾಗಿದೆ. ಜಿಯೋನಿ ಎಲೈಫ್ ಕ್ಯಾಮೆರಾ ಸಾಮರ್ಥ್ಯದಲ್ಲಿ ಬಲಯುತವಾಗಿದೆ. ಇತರ ಕ್ಯಾಮೆರಾ ಮತ್ತು ಶೂಟ್ ಕ್ಯಾಮೆರಾಗಿಂತ ಜಿಯೋನಿಯಲ್ಲಿ 16MP ಯೊಂದಿಗೆ 1.34 ಪಿಕ್ಸೆಲ್ ಇದ್ದು ಉತ್ತಮ ಕ್ಯಾಮೆರಾ ಹ್ಯಾಂಡ್‌ಸೆಟ್ ಇದಾಗಿದೆ. ಹ್ಯಾಂಡ್‌ಸೆಟ್ ಎದುರು ಭಾಗದಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದ್ದು ಫೋನ್‌ಗೆ ವಿಶೇಷತೆಯನ್ನು ತಂದುಕೊಟ್ಟಿದೆ. 5.5 ಇಂಚಿನ ಪುರ್ಣ ಎಚ್‌ಡಿ ಡಿಸ್‌ಪ್ಲೇ ಇದರಲ್ಲಿದ್ದು 16ಜಿಬಿ/32ಜಿಬಿ ಆಂತರಿಕ ಮೆಮೊರಿ, ಆಂಡ್ರಾಯ್ಡ್ 4.2 ಜೆಲ್ಲಿ ಬೀನ್, 2 ಜಿಬಿ ರ್‌ಯಾಮ್, ವೈಫೈ, AGPS ಮತ್ತು 3G ವೈಶಿಷ್ಟ್ಯಗಳು ಗಮನಸೆಳೆಯುತ್ತವೆ.

#3

#3

ಸ್ಯಾಮ್‌ಸಂಗ್ ಗ್ಯಾಲಕ್ಸಿ S4 ಝೂಮ್ ಬಲ್ಕಿ ಮತ್ತು ಪಾಯಿಂಟ್ ಶೂಟ್ ಕ್ಯಾಮೆರಾದಿಂದ ಗಮನ ಸೆಳೆಯುತ್ತವೆ. ಸ್ಯಾಮ್‌ಸಂಗ್ ಹಲವಾರು ಹೊಸ ಕ್ಯಾಮೆರಾ ವೈಶಿಷ್ಟ್ಯಗಳನ್ನು ಇದರಲ್ಲಿ ಸೇರಿಸಿದ್ದು ಆಪ್ಟಿಕಲ್ ಝೂಮ್ ಇದರಲ್ಲಿದ್ದು ಇದನ್ನು ಮಾರುಕಟ್ಟೆಯಲ್ಲಿ ಒಂದು ಉತ್ತಮ ಕ್ಯಾಮೆರಾ ಪೋನ್ ಎಂಬ ಹೆಗ್ಗಳಿಕೆಗೆ ಕಾರಣವಾಗುವಂತೆ ಮಾಡಿದೆ. ಇದರಲ್ಲಿ S4 ಝೂಮ್ ಇದ್ದು, 4.3 ಇಂಚಿನ qHD ಸೂಪರ್ AMOLED ಡಿಸ್‌ಪ್ಲೇಯನ್ನು ಸೇರಿಸಲಾಗಿದೆ. 1.5GHz ಡ್ಯುಯೆಲ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 1.5ಜಿಬಿ ರ್‌ಯಾಮ್ 8ಜಿಬಿ ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ ಸ್ಲಾಟ್, 16MP ರಿಯರ್ ಫೇಸಿಂಗ್ ಕ್ಯಾಮೆರಾ, 1.9MP ಫ್ರಂಟ್ ಕ್ಯಾಮೆರಾ ಇದರ ಆಕರ್ಷಣೆಯಾಗಿದೆ.

#4

#4

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ Knight A350 ಪ್ರೀಮಿಯಂ ಹೆಚ್ಚು ಗುಣಮಟ್ಟದ ಸ್ಮಾರ್ಟ್‌ಫೋನ್ ಆಗಿದ್ದು 16MP ರಿಯರ್ ಕ್ಯಾಮೆರಾ ಇಮೇಜ್ ಸೆನ್ಸಾರ್, ನ್ಯೂ ಜನರೇಶನ್ M8 ಲೆನ್ಸ್‌ನಿಂದ ಗಮನಸೆಳೆಯುವಂತಿದೆ. ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿ ಬೀನ್, 2-GHz ಓಕ್ಟಾ - ಕೋರ್ MT6592T ಪ್ರೊಸೆಸರ್, 2 ಜಿಬಿ ರ್‌ಯಾಮ್, 32 ಜಿಬಿ ಆನ್ ಬೊರ್ಟ್ ಸಂಗ್ರಹಣೆ ಇದರ ವಿಶೇಷತೆಯಾಗಿದೆ.

#5

#5

ಸೋನಿ ಎಕ್ಸ್‌ಪೀರಿಯಾ Z1 ಕಾಂಪ್ಯಾಕ್ಟ್ ನಿಜವಾಗಿ 16MP ಶೂಟರ್ ಅಲ್ಲದಿದ್ದರೂ 20.7 MP ರಿಯರ್‌ ಕ್ಯಾಮೆರಾದ ಶಕ್ತಿ ಇದಕ್ಕಿದೆ. 4.3 ಇಂಚಿನ 720 ಪಿ ಎಚ್‌ಡಿ ಡಿಸ್‌ಪ್ಲೇ ಇದರಲ್ಲಿದ್ದು, ಕ್ವಾಡ್ - ಕೋರ್ ಕ್ವಾಲ್‌ಕಾಂ ಸ್ನೇಪ್‌ಡ್ರಾಗನ್ 800 CPU,2 ಜಿಬಿ ರ್‌ಯಾಮ್, 16GB ರ್‌ಯಾಮ್, ವೈಫೈ, 3G ಗಮನ ಸೆಳೆಯುವಂತಿದೆ. 2MP ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದ್ದು ಆಂಡ್ರಾಯ್ಡ್ ಆವೃತ್ತಿಯಲ್ಲಿ ಇದು ರನ್ ಆಗುತ್ತದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X