ಮೊಬೈಲ್ ಇತಿಹಾಸದ ಈ 5 ವಿಶೇಷ ಮಾಹಿತಿ ಆಶ್ಚರ್ಯ ಮೂಡಿಸದೇ ಇರವು!!
ಮೊಟ್ಟಮೊದಲ ಬಾರಿಗೆ ಕೈಯಲ್ಲಿ ಹಿಡಿದು ಮಾತನಾಡುವ ಮೊಬೈಲ್ ಅನ್ನು ಅಭಿವೃದ್ದಿಗೊಳಿಸಿದ್ದು ಮೊಟೊರೊಲಾ ಕಂಪನಿ. ಅಲ್ಲದೇ ಮೊಟ್ಟ ಮೊದಲ ಕರೆಯನ್ನು ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಕಾಲ್ ಮಾಡಿದ್ದು ಸಹ ಮೊಟೊರೊಲಾ ಸಂಶೋಧಕ!!
ಮೊಟ್ಟಮೊದಲ ಬಾರಿಗೆ ಕೈಯಲ್ಲಿ ಹಿಡಿದು ಮಾತನಾಡುವ ಮೊಬೈಲ್ ಅನ್ನು ಅಭಿವೃದ್ದಿಗೊಳಿಸಿದ್ದು ಮೊಟೊರೊಲಾ ಕಂಪನಿ. ಅಲ್ಲದೇ ಮೊಟ್ಟ ಮೊದಲ ಕರೆಯನ್ನು ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಕಾಲ್ ಮಾಡಿದ್ದು ಸಹ ಮೊಟೊರೊಲಾ ಸಂಶೋಧಕ ಮತ್ತು ಕಾರ್ಯನಿರ್ವಾಹಕರಾದ 'ಮಾರ್ಟಿನ್ ಕೂಪರ್'. ಇದು ಮೊಟ್ಟ ಮೊದಲ ಮೊಬೈಲ್ ಕರೆ.

ಹೌದು, ಇಂದು ಮೊಬೈಲ್ ಸ್ಮಾರ್ಟ್‌ಫೋನ್ ಉಪಯೋಗಿಸುವವರಿಗೆ ಇಂತಹ ಮಾಹಿತಿಗಳು ಹಲವು ತಿಳಿದಿಲ್ಲ. ಮೊಬೈಲ್ ಎನ್ನುವುದು ಪ್ರತಿಯೊಬ್ಬರ ಜೀವನದ ಒಂದು ಅವಿಭಾಜ್ಯ ಭಾಗವಾಗಿಹೋದರು ಮೊಬೈಲ್ ಬಗೆಗೆ ಇರುವ ಕುತೋಹಲಕಾರಿ ಅಂಶಗಳು ಜನರನ್ನು ತಲುಪಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಬಗ್ಗೆ ಇರುವ ಕುತೂಹಲಕಾರಿ ವಿಷಯಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

1) ಜಗತ್ತಿನ ಮೊದಲ ಮೊಬೈಲ್ ಫೋನ್.
ಜಗತ್ತಿನ ಮೊತ್ತಮೊದಲ ಬಾರಿಗೆ ವಾಣಿಜ್ಯಾತ್ಮಕವಾಗಿ ಮೊಬೈಲ್ ಫೋನುಗಳು ಮಾರಾಟವಾಗಿದ್ದು 1983ರಲ್ಲಿ. ಮೊಟೊರೊಲಾ DynaTAC 8000X ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಯಿತು. ಅಂದು ಬಿಡುಗಡೆಯಾದ ಫೋನ್ ಬೆಲೆ $3,955 . ಆದರೆ ಇಂದು ಸ್ಮಾರ್ಟ್ಫೋನ್ಗಳು 250 ರೂಪಾಯಿಗಳಿಗೂ ಸಿಗುತ್ತವೆ.

2) ಮೊದಲ ಮೊಬೈಲ್ ಕರೆ ಮಾಡಿದ್ದು
ಮೊದಲ ಮೊಬೈಲ್ ಕರೆ ಮಾಡಿದ್ದು ಮೋಟೊರೋಲಾ ಸಂಸ್ಥಾಪಕ ಮಾರ್ಟಿನ್ ಕೂಪರ್. ಮಾರ್ಟಿನ್ ಕೂಪರ್'ರವರು ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವೆ 6 ಮುಖ್ಯ ವಿಶಾಲ ಬೀದಿಯಲ್ಲಿ 900MHz ಮುಖ್ಯ ಕೇಂದ್ರ ಹೊಂದಿದ್ದರು. ಏಪ್ರಿಲ್ 3, 1973 ರಲ್ಲಿ ಮೊಟೊರೊಲಾ ಮೊಬೈಲ್‌ನಿಂದ ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್ ಲ್ಯಾಬ್‌ಗೆ ಕರೆ ಮಾಡಲಾಗಿತ್ತು.


3) 1.1 ಕೆಜಿ ತೂಕವಿತ್ತು
ಮೊಟ್ಟ ಮೊದಲ 'ಮೊಟೊರೊಲಾ DynaTAC' ಫೋನ್ 23cm ಉದ್ದವಿತ್ತು. ಅತ್ಯಂತ ಅಚ್ಚರಿ ವಿಷಯ ಅಂದ್ರೆಮೊಬೈಲ್ 1.1 ಕೆಜಿ ತೂಕವಿತ್ತು. 1kg ತೂಕ ಹೊಂದಿದ್ದ ಈ ಮೊಬೈಲ್ ಸಂಪೂರ್ಣ ಚಾರ್ಜ್ ಹೊಂದಲು 10 ಗಂಟೆಗಳ ಸಮಯ ಬೇಕಿತ್ತು. ಆದರೆ ಬಳಕೆ ಆಗುತ್ತಿದ್ದದ್ದು ಮಾತ್ರ ಕೇವಲ 35 ನಿಮಿಷಗಳು.

4) ನೊಕಿಯಾ ವಿಶ್ವ ಸಾಮ್ರಾಟ್
ಸ್ಮಾರ್ಟ್‌ಫೋನ್ ಬರುವುದಕ್ಕೂ ಮುಂಚೆ ನೊಕಿಯಾ ಸಂಸ್ಥೆ ವಿಶ್ವದ ಮೊಬೈಲ್ ಸಾಮ್ರಾಟನಾಗಿತ್ತು. ನೊಕಿಯಾದ ಜನಪ್ರಿಯ 1100 ಮಾಡೆಲ್'ನ ಹ್ಯಾಂಡ್'ಸೆಟ್'ಗಳು ಬರೋಬ್ಬರಿ 25 ಕೋಟಿ ಸಂಖ್ಯೆಯಲ್ಲಿ ಮಾರಾಟ ಕಂಡಿವೆ. ಇದು ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಎಲೆಕ್ಟ್ರಾನಿಕ್ ಸಾಧನವೆನಿಸಿದೆ.

5) ನೋಮೋಫೋಬಿಯಾ
ಮೊಬೈಲ್ ಫೋನ್ ಅನ್ನು ಬಿಟ್ಟಿರಲಾರದಷ್ಟು ಮಟ್ಟಿಗೆ ಅದರ ಮೇಲೆ ಜನರು ಅವಲಂಬಿತವಾಗುತ್ತಿದ್ದಾರೆ. ಈ ಮೊಬೈಲ್ ಆತಂಕವನ್ನು ವಿಜ್ಞಾನಿಗಳು ನೋಮೋಫೋಬಿಯಾ ಎಂದು ಕರೆಯುತ್ತಾರೆ. ನಮ್ಮಲ್ಲಿ ಈ ಫೋಬಿಯಾ ಇದೆಯಾ ಎಂದು ಪತ್ತೆಹಚ್ಚಲೆಂದೇ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳು ಸಹ ಇವೆ.


Click it and Unblock the Notifications








