Home
ಮೊಬೈಲ್

ಇತಿಹಾಸದಲ್ಲಿ ಐಫೋನ್ 17 ಏರ್ ಅತ್ಯಂತ ತೆಳುವಾದ ಆಪಲ್ ಫೋನ್ ಆಗಿರಲಿದೆ!

ಟೆಕ್ ದೈತ್ಯ ಸಂಸ್ಥೆ ಆಪಲ್ ತನ್ನ ಮುಂದಿನ ಐಫೋನ್ 17 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ. ಈ ಐಫೋನ್ 17 ಸರಣಿಯಲ್ಲಿ ಐಫೋನ್ 17, ಐಫೋನ್ 17 ಏರ್ (ಅಥವಾ ಐಫೋನ್ 17 ಸ್ಲಿಮ್), ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೂ ಆಪಲ್‌ನ ಹೊಸ ಐಫೋನ್ 17 ಸರಣಿಯಲ್ಲಿ ಬರಲಿರುವ ಐಫೋನ್ 17 ಏರ್ ಕುರಿತಂತೆ ಬಗ್ಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಉಂಟಾಗಿದೆ. ಇದಕ್ಕೆ ಕಾರಣ ಆಪಲ್‌ನ ಇತಿಹಾಸದಲ್ಲಿ ಐಫೋನ್ 17 ಏರ್ ಅತ್ಯಂತ ತೆಳುವಾದ ಫೋನ್ ಆಗಿ ಪರಿಚಯವಾಗುವ ನಿರೀಕ್ಷೆಯಿದೆ.

ಹೌದು, ಜನಪ್ರಿಯ ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಅವರ ವರದಿಗಳ ಪ್ರಕಾರ, ಐಫೋನ್ 17 ಏರ್ ಅನ್ನು ಪೋರ್ಟ್‌ಗಳಿಲ್ಲದೆ ಬಿಡುಗಡೆ ಮಾಡುವ ಬಗ್ಗೆ ಆಪಲ್ ಚಿಂತಿಸುತ್ತಿದೆ. ಇದು ಆಪಲ್‌ನ ಮೊದಲ ಸಂಪೂರ್ಣ ಪೋರ್ಟ್-ಮುಕ್ತ ಐಫೋನ್ ಆಗಿರಬಹುದು ಎಂದು ತಿಳಿಸಿದ್ದಾರೆ. ತೆಳುವಾದ ವಿನ್ಯಾಸದಿಂದಾಗಿ ಐಫೋನ್ 17 ಏರ್‌ನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆಯಾಗಬಹುದು, ಆದರೆ ಆಪಲ್ ಈ ಸಮಸ್ಯೆಯನ್ನು ಪರಿಹರಿಸಲು ಡಿಸ್‌ಪ್ಲೇ, ಸಿಲಿಕಾನ್ ಘಟಕಗಳು ಮತ್ತು ಸಾಫ್ಟ್‌ವೇರ್ ಅನ್ನು ಮರುವಿನ್ಯಾಸಗೊಳಿಸಲು ಎಂಜಿನಿಯರ್‌ಗಳಿಗೆ ಸೂಚಿಸಿದೆ ಎಂದು ಹೇಳಿದ್ದಾರೆ. ಈ ಮೂಲಕ ಮುಂಬರುವ ಐಫೋನ್ 17 ಏರ್ ಸ್ಮಾರ್ಟ್‌ಫೋನಿನಲ್ಲಿ ಯಾವುದೇ ಪೋರ್ಟ್‌ಗಳು ಇರುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿದ್ದಾರೆ.

ಇಷ್ಟೇ ಅಲ್ಲದೆ, ಐಫೋನ್ 17 ಏರ್‌ನಲ್ಲಿ ಇನ್ನಷ್ಟು ವೈಶಿಷ್ಟ್ಯಗಳು ಬಹಿರಂಗವಾಗಿವೆ. ಐಫೋನ್ 17 ಏರ್ ಫೋನಿನಲ್ಲಿ ಕ್ಯಾಮೆರಾ ಕಂಟ್ರೋಲ್ ಬಟನ್, ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ಆಕ್ಷನ್ ಬಟನ್ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಕ್ಯಾಮೆರಾ ಕಂಟ್ರೋಲ್ ಬಟನ್ ಬಳಕೆದಾರರಿಗೆ ಕ್ಯಾಮೆರಾ ಸೆಟ್ಟಿಂಗ್‌ಗಳಿಗೆ ತ್ವರಿತ ಪ್ರವೇಶ ನೀಡುತ್ತದೆ ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊಗಳನ್ನು ಶೂಟ್ ಮಾಡಲು ಸುಲಭಗೊಳಿಸುತ್ತದೆ. ಆಕ್ಷನ್ ಬಟನ್ ಅಪ್ಲಿಕೇಶನ್‌ಗಳನ್ನು ತೆರೆಯಲು, ಸೈಲೆಂಟ್ ಮೋಡ್ ಅನ್ನು ಸಕ್ರಿಯಗೊಳಿಸಲು ಅಥವಾ ಶಾರ್ಟ್‌ಕಟ್‌ಗಳನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡುತ್ತದೆ. ಜೊತೆಗೆ, ಐಫೋನ್ 17 ಏರ್‌ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿದುಬಂದಿದೆ.

ಇತಿಹಾಸದಲ್ಲಿ ಐಫೋನ್ 17 ಏರ್ ಅತ್ಯಂತ ತೆಳುವಾದ ಆಪಲ್ ಫೋನ್ ಆಗಿರಲಿದೆ!

ಇನ್ನು ಯುರೋಪಿಯನ್ ಯೂನಿಯನ್ (EU) ನಿಯಮಗಳ ಪ್ರಕಾರ, ಯೂರೋಪ್‌ನಲ್ಲಿ ಮಾರಾಟವಾಗುವ ಐಫೋನ್ 17 ಏರ್ ಸಾಧನವು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಹೊಂದಿರಬಹುದು. ಯುರೋಪಿಯನ್ ಯೂನಿಯನ್ ನಿಯಮದ ಅಡಿಯಲ್ಲಿ, ಎಲ್ಲಾ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಅಳವಡಿಸಲು ಕಡ್ಡಾಯವಾಗಿದೆ.

ಐಫೋನ್ 17 ಏರ್‌ನ ವೈಶಿಷ್ಟ್ಯಗಳು ಈ ರೀತಿಯಾಗಿರಬಹುದು:
* ಐಫೋನ್ 17 ಏರ್, ಕ್ಯಾಮೆರಾ ಬಂಪ್ ಸೇರಿ 9.5 ಎಂಎಂ ದಪ್ಪದೊಂದಿಗೆ ಆಪಲ್‌ನ ಅತ್ಯಂತ ತೆಳುವಾದ ಫೋನ್ ಆಗಿರುತ್ತದೆ.
* 120Hz ಪ್ರೊಮೋಷನ್ ರಿಫ್ರೆಶ್ ದರ ಮತ್ತು ಡೈನಾಮಿಕ್ ಐಲ್ಯಾಂಡ್‌ನ್ನು ಒಳಗೊಂಡ 6.6-ಇಂಚಿನ OLED ಡಿಸ್ಪ್ಲೇ.
* 24-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 48-ಮೆಗಾಪಿಕ್ಸೆಲ್ ಸಿಂಗಲ್ ರಿಯರ್ ಕ್ಯಾಮೆರಾ.
* ಟೈಟಾನಿಯಂ ಫ್ರೇಮ್.
* ಆಪಲ್‌ನ ಮೊದಲ 5G ಮೋಡೆಮ್ ಮತ್ತು ವೈ-ಫೈ ಚಿಪ್.
* ಐಫೋನ್ 17 ಏರ್ ಬೆಲೆ $1,299 ರಿಂದ $1,500 (ಸುಮಾರು ರೂ. 1,09,000 ರಿಂದ 1,26,000) ವರೆಗೆ ಇರಬಹುದು.
* 8GB RAM ಮತ್ತು ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳಿಗೆ ಬೆಂಬಲವಿರುವ A18 ಅಥವಾ A19 ಚಿಪ್.

ಆಪಲ್ ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ಹೊಸ 'ಅಲ್ಟ್ರಾ' ಮಾದರಿಯೊಂದಿಗೆ ಬದಲಾಯಿಸುವ ಸಾಧ್ಯತೆ ಕೂಡ ಇದೆ.

Take a Poll

Best Mobiles in India

English summary
The iPhone 17 Air is expected to launch as Apple's slimmest phone ever and is anticipated to take the place of the Plus model. Bloomberg's Mark Gurman has shared additional insights about this upcoming sleek device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+