Home
ಮೊಬೈಲ್

ಇದೇ ಏ.11 ರಂದು ಬರುತ್ತಿದೆ 'iQOO Z10X' ಫೋನ್: 15 ಸಾವಿರಕ್ಕಿಂತ ಕಡಿಮೆ ಬೆಲೆ!

ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ 'iQOO Z10' ಸ್ಮಾರ್ಟ್‌ಫೋನ್ ಜೊತೆಗೆ ಕಡಿಮೆ ಬಜೆಟ್ ಬೆಲೆಯ 'iQOO Z10X' ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಗೊಳ್ಳುತ್ತಿದೆ.! ಹೌದು, ಇದೇ ಏಪ್ರಿಲ್ 11 ರಂದು 'iQOO Z10' ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸುದ್ದಿ ಹೊರಬಿದ್ದಿತ್ತು. ಇದೀಗ ಏಪ್ರಿಲ್ 11 ರಂದು ಈ ಹೊಸ iQOO Z10X ಫೋನ್ 15,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ದೇಶದ ಪ್ರಮುಖ ಇ-ಕಾಮರ್ಸ್ ತಾಣ ಅಮೆಜಾನ್ ಈ ಕುರಿತಾಗಿ ಲೈವ್ ಮೈಕ್ರೋಸೈಟ್ ತೆರೆದಿದ್ದು, ಈ ಮೈಕ್ರೋಸೈಟ್ನಲ್ಲಿಹೊಸ iQOO Z10X ಫೋನ್ 15,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿರುತ್ತದೆ ಎಂದು ತಿಳಿಸಿದೆ ಮತ್ತು ಚಿಪ್‌ಸೆಟ್ ಮತ್ತು ಬ್ಯಾಟರಿ ವಿವರಗಳನ್ನೂ ಸಹ ಹಂಚಿಕೊಳ್ಳಲಾಗಿದೆ. ಹಾಗಾದರೆ, ಮುಂಬರುವ 'iQOO Z10X' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ

ಅಮೆಜಾನ್ ಲೈವ್ ಮೈಕ್ರೋಸೈಟ್‌ನಲ್ಲಿ ನೀಲಿ ಬಣ್ಣದ iQOO Z10X ಸ್ಮಾರ್ಟ್‌ಫೋನನ್ನು ತೋರಿಸಲಾಗಿದೆ. ಇದರ ಹಿಂಭಾಗದಲ್ಲಿ ಎಡಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್‌ ಇದೆ, ಇದರಲ್ಲಿ ಎರಡು ಕ್ಯಾಮೆರಾ ಸೆನ್ಸರ್‌ಗಳು, ರಿಂಗ್ ಲೈಟ್ ಮತ್ತು LED ಫ್ಲ್ಯಾಶ್ ಯೂನಿಟ್ ಸೇರಿವೆ. ಹ್ಯಾಂಡ್‌ಸೆಟ್‌ನ ಕೆಳಭಾಗದಲ್ಲಿ ಸ್ಪೀಕರ್ ಗ್ರಿಲ್, USB ಟೈಪ್-C ಪೋರ್ಟ್, ಸಿಮ್ ಸ್ಲಾಟ್ ಮತ್ತು ಮೈಕ್ ಇದೆ.ಪ್ರೊಸೆಸರ್ ವಿಭಾಗದಲ್ಲಿ, iQOO Z10X ಫೋನ್ 8GB + 256GB RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್ ಜೊತೆಗೆ 4nm ಮೀಡಿಯಾಟೆಕ್ ಡೈಮೆನ್ಸಿಟಿ 7300 SoC ನಿಂದ ಚಾಲಿತವಾಗಲಿದೆ ಎಂದು ಮೈಕ್ರೋಸೈಟ್ ದೃಢಪಡಿಸುತ್ತದೆ. ಇದು 7,28,000 ಕ್ಕಿಂತ ಹೆಚ್ಚು AnTuTu ಸ್ಕೋರ್ ಹೊಂದಿದ್ದು, ಈ ವಿಭಾಗದಲ್ಲಿ ಅತ್ಯಂತ ವೇಗದ ಪ್ರೊಸೆಸರ್ ಎಂದು ಹೇಳಲಾಗಿದೆ. ಇನ್ನು ಈ iQOO Z10X ಸ್ಮಾರ್ಟ್‌ಫೋನ್ 6,500mAh ಬ್ಯಾಟರಿಯನ್ನು ಹೊಂದಿರುವುದನ್ನು ದೃಢಪಡಿಸಲಾಗಿದೆ.

ಇದೇ ಏ.11 ರಂದು ಬರುತ್ತಿದೆ 'iQOO Z10X' ಫೋನ್: 15 ಸಾವಿರಕ್ಕಿಂತ ಕಡಿಮೆ ಬೆಲೆ!

ಮುಂಬರುವ ಈ 'iQOO Z10X' ಸ್ಮಾರ್ಟ್‌ಫೋನ್ ಕುರಿತು ಸದ್ಯಕ್ಕೆ ಇಷ್ಟು ಮಾಹಿತಿಗಳು ಬಹಿರಂಗವಾಗಿವೆ. ಆದರೆ ಬಿಡುಗಡೆಗೆ ಮುಂಚಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಇನ್ನು ಇತ್ತ 'iQOO Z10X ಗಿಂತಲೂ ಶಕ್ತಿಶಾಲಿಯಾಗಿ ಪ್ರೊ ಮಾದರಿಯಾಗಿ ಬಿಡುಗಡೆಯಾಗುತ್ತಿರುವ iQOO Z10 ಸ್ಮಾರ್ಟ್‌ಫೋನ್ 22,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತದೆ ಎಂದು ತಿಳಿದುಬಂದಿದೆ. ಪ್ರೊ ಮಾದರಿಯ iQOO Z10 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7s Gen 3 SoC ಪ್ರೊಸೆಸರ್, 90W ಫ್ಲ್ಯಾಶ್‌ಚಾರ್ಜ್ ಬೆಂಬಲದ 7,300mAh ಬ್ಯಾಟರಿ ಮತ್ತು 5,000nits ಗರಿಷ್ಠ ಹೊಳಪು ಮಟ್ಟವನ್ನು ಹೊಂದಿರುವ ಕ್ವಾಡ್-ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಗ್ಲೇಸಿಯರ್ ಸಿಲ್ವರ್ ಮತ್ತು ಸ್ಟೆಲ್ಲರ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರಲಿದ್ದು, 7.89mm ನಷ್ಟು ತೆಳುವಾಗಿರಲಿದೆ. ಇನ್ನು ಇತರೆ ಕೆಲವು ವರದಿಗಳು ಈ ಸಾಧನದ ಇತರ ವಿಶೇಷಣಗಳನ್ನು ಸಹ ಪಟ್ಟಿ ಮಾಡಿವೆ.

ಇದೇ ಏ.11 ರಂದು ಬರುತ್ತಿದೆ 'iQOO Z10X' ಫೋನ್: 15 ಸಾವಿರಕ್ಕಿಂತ ಕಡಿಮೆ ಬೆಲೆ!

ಈ ಶಕ್ತಿಶಾಲಿ iQOO Z10 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಹೊಂದಿರುವ 6.67-ಇಂಚಿನ ಕ್ವಾಡ್-ಕರ್ವ್ಡ್ FHD+ AMOLED ಡಿಸ್ಪ್ಲೇ ಅನ್ನು ಒಳಗೊಂಡಿದೆ ಎನನ್ಲಾಗಿದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ, ಹಾಗೂ ಇದು 8GB ಅಥವಾ 12GB RAM ಮತ್ತು 128GB ಅಥವಾ 256GB ಶೇಖರಣಾ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಹಲವಾರು ವರದಿಗಳು ಹೇಳಿವೆ. ಕ್ಯಾಮೆರಾ ವಿಭಾಗದಲ್ಲಿ, ಈ iQOO Z10 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 50MP ಸೋನಿ IMX882 ಪ್ರಾಥಮಿಕ ಸಂವೇದಕ ಮತ್ತು 2MP ಡೆಪ್ತ್ ಸಂವೇದಕವನ್ನು ಹೊಂದಿರಬಹುದು, ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ, ಈ ಸ್ಮಾರ್ಟ್‌ಫೋನ್ 32MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.

Best Mobiles in India

English summary
The iQOO Z10X is set to launch in India on April 11, alongside the iQOO Z10. Details about its design and key features have been unveiled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+