ಹೊಸ ಸೆಲ್ಪಿ ಏಕ್ಸ್‌ಪರ್ಟ್ ಒಪ್ಪೋ F3 ಸ್ಮಾರ್ಟ್‌ಫೋನ್: ಹೇಗಿದೆ..? ಇಲ್ಲಿದೇ ಸಂಪೂರ್ಣ ವಿವರ..!!!

Written By:

ಚೀನಾ ಮೂಲದ ಒಪ್ಪೋ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಅದರಲ್ಲೂ ಸೆಲ್ಫಿ ಏಕ್ಸ್‌ಪರ್ಟ್ ಸರಣಿಯ ಫೋನ್‌ಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿವೆ. ಇದೇ ಸರಣಿಗೆ ಮತ್ತೊಂದು ಹೊಸ ಸೇರ್ಪಡೆ ಒಪ್ಪೋ F3 ಸ್ಮಾರ್ಟ್‌ಫೋನ್. ರೂ.19,990 ಗಳಿಗೆ ಮಾರಾಟವಾಗಲಿರುವ ಈ ಫೋನ್‌ ಹೇಗಿದೆ ಎಂಬುದನ್ನು ತಿಳಿಯುವ.

ಹೊಸ ಸೆಲ್ಪಿ ಏಕ್ಸ್‌ಪರ್ಟ್ ಒಪ್ಪೋ F3 ಸ್ಮಾರ್ಟ್‌ಫೋನ್: ಹೇಗಿದೆ..?

ಒಪ್ಪೋ F3 ಸ್ಮಾರ್ಟ್‌ಫೋನ್ ಸಹ ಡ್ಯುಯಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಸ್ಟೈಲಿಶ್ ಆಲ್ಯೂಮಿನಿಯಂ ಮತ್ತು ಗ್ಲಾಸ್ ಬಾಡಿಯನ್ನು ಹೊಂದಿದೆ. ಹಿಂಭಾಗದಲ್ಲಿಯೂ ಅತ್ಯುತ್ತಮ ಕ್ಯಾಮೆರಾ ಇದ್ದು, ಸೆಲ್ಪಿ ಪ್ರಿಯರಿಗೆ ಇದು ಹೇಳಿ ಮಾಡಿಸಿದಂತೆ ಇದರಲ್ಲಿರುವ ಸೆಲ್ಫಿ ಕ್ಯಾಮೆರಾ ಈ ಫೋನಿನ ಪ್ರಮುಖ ಆಕರ್ಷಣೆಯಾಗಿದೆ.

ಈ ಒಪ್ಪೋ F3 ಸ್ಮಾರ್ಟ್‌ಫೋನಿನಲ್ಲಿ 16 MP + 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಅದರಲ್ಲಿ ಒಂದು ಕ್ಯಾಮೆರಾ ರೆಗ್ಯೂಲರ್ ಸೆಲ್ಪಿ ತೆಗೆಯಲು ಮತ್ತೊಂದು ಕ್ಯಾಮೆರಾ ಗ್ರೂಪ್ ಸೆಲ್ಪಿ ತೆಗೆಯಲು ಬಳಕೆಯಾಗಲಿದ್ದು, ನಾರ್ಮಲ್ ಕ್ಯಾಮೆರಾಗಳಿಗಿಂತ ಇದು ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಫಿ ತೆಗೆಯಲೆಂದೇ ಇರುವ ಸ್ಮಾರ್ಟ್‌ಫೋನ್ ಒಪ್ಪೋ F3:

ಸೆಲ್ಫಿ ತೆಗೆಯಲೆಂದೇ ಇರುವ ಸ್ಮಾರ್ಟ್‌ಫೋನ್ ಒಪ್ಪೋ F3:

ಸದ್ಯ ಸ್ಮಾರ್ಟ್‌ಫೋನ್‌ಗಳು ಸೆಲ್ಫಿ ತೆಗೆಯಲೆಂದು ಬಳಕೆಯಾಗುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಒಪ್ಪೋ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದ್ದು, ಅಲ್ಲದೇ ಮೊದಲ ಬಾರಿಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ತನ್ನ ಪೋನ್‌ಗಳಲ್ಲಿ ನೀಡಿದೆ. ಅದಕ್ಕಾಗಿಯೇ ಒಪ್ಪೋ F3 ಪೋನಿನಲ್ಲಿ 16 MP + 8MP ಗಳನ್ನು ಸೆಲ್ಫಿ ತೆಗೆಯಲೆಂದು ನೀಡಿದೆ. ಇದು ಲೋ ಲೈಟ್ ಸಮಯದಲ್ಲಿಯೂ ಉತ್ತಮ ಸೆಲ್ಪಿಗಳನ್ನು ತೆಗೆಯಲು ಶಕ್ತವಾಗಿದೆ. ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಸಹ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ.

5.5 ಇಂಚಿನ HD ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5 ಸುರಕ್ಷೆ:

5.5 ಇಂಚಿನ HD ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5 ಸುರಕ್ಷೆ:

ಒಪ್ಪೋ F3 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದ್ದು, 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದ್ದು, ಜೊತೆ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯೂ ಇದೆ. ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತಿದೆ. ಇದರಲ್ಲಿ ಐ ಪ್ರೋಟೆಕ್ಷನ್ ಅಳವಡಿಸಲಾಗಿದೆ. ಇದು ನಿಮ್ಮ ಕಣ್ಣಿಗೆ ರಕ್ಷಣೆಗಾಗಿ ನೀಡಲಾಗಿದೆ.

ಒಪ್ಪೋ F3 ವಿನ್ಯಾಸ: ಪ್ರೀಮಿಯಮ್ ಲುಕ್

ಒಪ್ಪೋ F3 ವಿನ್ಯಾಸ: ಪ್ರೀಮಿಯಮ್ ಲುಕ್

ಒಪ್ಪೋ F3 ಸ್ಮಾರ್ಟ್‌ಫೋನ್‌ ಪ್ರೀಮಿಯಮ್ ಲುಕ್ ಹೊಂದಿದ್ದು, ನೋಡುವ ಮೊದಲ ನೋಟಕ್ಕೆ ಸೆಳೆಯುವಂತಿದೆ. ಕಡಿಮೆ ತೂಕವನ್ನು ಹೊಂದಿದ್ದು, ಕೈ ಹಿಡಿಯಲು ಉತ್ತಮ ಅನುಭವನ್ನು ನೀಡಲಿದೆ. ಮೆಟಲ್ ಬಾಡಿ ಡಿಸೈನ್ ಇದರದ್ದಾಗಿದೆ. ಗೋಲ್ಡನ್ ಬಣ್ಣದಲ್ಲಿ ಆಕರ್ಷಕವಾಗಿ ಕಾಣಲಿದೆ. ಕೈಯಲ್ಲಿ ಹಿಡಿದರೆ ಜಾರಿ ಹೋಗುವ ಭಯವಿಲ್ಲ.

ಅತ್ಯುತ್ತಮ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಅತ್ಯುತ್ತಮ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಒಪ್ಪೋ F3 ಸ್ಮಾರ್ಟ್‌ಫೋನ್‌ನಲ್ಲಿ ಮುಂಭಾಗದ ಹೌಮ್ ಬಟನ್ ನಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಇದು ವೇಗವಾಗಿ ಫೋನ್ ಲಾಕ್ ತೆರೆಯಲು ಸಹಾಯಕಾರಿಯಾಗಿದೆ. ಅಲ್ಲದೇ ಇದು ಆಪ್ ಮತ್ತು ಫೈಲ್‌ಗಳನ್ನು ಹೆಚ್ಚಿನದಾಗಿ ಭಧ್ರವಾಗಿಡಲು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹಾಯಕಾರಿಯಾಗಲಿದೆ.

ತ್ರಿಪಲ್ ಸಿಮ್ ಸ್ಲಾಟ್: ಎರಡು ಸಿಮ್ ಜೊತೆಗೆ ಎಸ್‌ಡಿ ಕಾರ್ಡ್‌

ತ್ರಿಪಲ್ ಸಿಮ್ ಸ್ಲಾಟ್: ಎರಡು ಸಿಮ್ ಜೊತೆಗೆ ಎಸ್‌ಡಿ ಕಾರ್ಡ್‌

ಒಪ್ಪೋ F3 ಸ್ಮಾರ್ಟ್‌ಫೋನ್‌ನಲ್ಲಿ ತ್ರಿಪಲ್ ಸಿಮ್ ಸ್ಲಾಟ್ ನೀಡಲಾಗಿದ್ದು, ಇದರಲ್ಲಿ ಎರಡು ಸಿಮ್ ಕಾರ್ಟ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಒಟ್ಟಿಗೆ ಬಳಸಬಹುದಾಗಿದೆ. 4GB RAM ಮತ್ತು 64GB ROM ಈ ಫೋನಿನಲ್ಲಿದ್ದು, ಮೆಮೊರಿ ಕಾರ್ಟ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಒಪ್ಪೋ F3 ಸ್ಮಾರ್ಟ್‌ಫೋನ್‌ ವೇಗದ ಕಾರ್ಯಚರಣೆಯನ್ನು ಹೊಂದಿದೆ:

ಒಪ್ಪೋ F3 ಸ್ಮಾರ್ಟ್‌ಫೋನ್‌ ವೇಗದ ಕಾರ್ಯಚರಣೆಯನ್ನು ಹೊಂದಿದೆ:

ಒಪ್ಪೋ F3 ಸ್ಮಾರ್ಟ್‌ಫೋನ್‌ ನಲ್ಲಿ 4GB RAM ಅಳವಡಿಸಲಾಗಿದ್ದು, ಇದು ಒಂದೇ ಸಮಯದಲ್ಲಿ ಒಂದಕ್ಕೂ ಹೆಚ್ಚು ಆಪ್‌ಗಳನ್ನು ರನ್‌ ಮಾಡಲು ಸಹಾಯಕಾರಿಯಾಗಿದೆ. ಅಲ್ಲದೇ ಗೇಮ್ ಆಡಲು ಹಾಗೂ ಪಿಚ್ಚರ್ ಎಡಿಟ್ ಮಾಡಲು ಈ ಪೋನ್ ಹೇಳಿ ಮಾಡಿಸಿದಂತಿದೆ. ಇದಲ್ಲದೇ 1.GHz ಆಕ್ವಾ ಕೊರ್ ಮಿಡಿಯಾ ಟೆಕ್ ಚಿಪ್ ಸೆಟ್ ಅಳವಡಿಸಲಾಗಿದ್ದು, ವೇಗವಾಗಿ ಕಾರ್ಯನಿರ್ವಹಿಸಲಿದೆ.

ಆಂಡ್ರಾಯ್ಡ್ 6.0 ಜೊತೆಗೆ ಒಪ್ಪೋ ಓಸ್:

ಆಂಡ್ರಾಯ್ಡ್ 6.0 ಜೊತೆಗೆ ಒಪ್ಪೋ ಓಸ್:

ಒಪ್ಪೋ F3 ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಒಪ್ಪೋ ಕಲರ್ ಓಸ್ V3.0 ಇದರಲ್ಲಿದೆ, ಇದರೊಂದಿಗೆ ಬ್ಯೂಟಿಫೈ, ಐ ಪ್ರೋಟೆಕ್ಷನ್, ನೋ ಡಿಸ್ಟಪ್ ಮೋಡ್, ಸೇರಿದಂತೆ ಹಲವು ಆಪ್‌ಗಳನ್ನು ಒಳಗೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ಒಪ್ಪೋ F3 ಸ್ಮಾರ್ಟ್‌ಫೋನ್‌ ನಲ್ಲಿ ಉತ್ತಮ ಬ್ಯಾಟರಿ:

ಒಪ್ಪೋ F3 ಸ್ಮಾರ್ಟ್‌ಫೋನ್‌ ನಲ್ಲಿ ಉತ್ತಮ ಬ್ಯಾಟರಿ:

ಒಪ್ಪೋ F3 ಸ್ಮಾರ್ಟ್‌ಫೋನ್‌ನಲ್ಲಿ 3,200 mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಒಂದು ದಿನ ಬಾಳಿಕೆ ಬರಲಿದೆ ಎನ್ನಲಾಗಿದೆ. ಹೆಚ್ಚಿನ ಬ್ಯಾಕಪ್ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
The latest OPPO F3 features a premium design and sports a 16MP+8MP dual front-facing camera for best-in-class group selfies. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot