Home
ಮೊಬೈಲ್

ಹೊಸ ಮಾದರಿಯ ಫೋನ್‌ ಬಿಟ್ಟ ವಿವೊ, ವಾಟರ್‌ ಡ್ರಾಪ್‌ ಅಂದ್ರೆ ಗೊತ್ತಾ..?

By Srinidhi
How Vivo V11 Pro in-display fingerprint sensor works - KANNADA

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯ ಮಾಡುವುದರಲ್ಲಿ ಮುಂದಾಗಿರುವ ಚೀನಾ ಮೂಲದ ವಿವೋ ಕಂಪನಿ, ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ವಿವೊ V11 ಪ್ರೋ ಸ್ಮಾರ್ಟ್‌ಫೋನ್ ಹೊಸದಾಗಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಠಿಸಲಿದೆ.

ಹೊಸ ಮಾದರಿಯ ಫೋನ್‌ ಬಿಟ್ಟ ವಿವೊ, ವಾಟರ್‌ ಡ್ರಾಪ್‌ ಅಂದ್ರೆ ಗೊತ್ತಾ..?

ಚೀನಾ ಮೂಲದ ವಿವೊ ಲಾಂಚ್ ಮಾಡಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿವೊ V11 ಪ್ರೋ ಮಾರುಕಟ್ಟೆಯಲ್ಲಿ ರೂ. 25,990ಕ್ಕೆ ದೊರೆಯಲಿದೆ. ದೊಡ್ಡ ಮಾದರಿಯ ಬದಲಾವಣೆಯನ್ನು ತರಲಿದೆ ಎನ್ನಲಾಗಿದೆ. ಎಲ್ಲಾ ಇ ಕಾರ್ಮಸ್ ಸ್ಟೋರ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಈ ಹಿನ್ನಲೆಯಲ್ಲಿ ವಿವೊ V11 ಪ್ರೋ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಮುಂದಿದೆ.

ಲಾಂಚಿಂಗ್ ಆಫರ್:

ಲಾಂಚಿಂಗ್ ಆಫರ್:

ವಿವೊ V11 ಪ್ರೋ ಸ್ಮಾರ್ಟ್‌ಫೋನ್ ಖರೀದಿ ಮಾಡುವ HDFC ಕಾರ್ಡ್ ಬಳಕೆದಾರರಿಗೆ ರೂ.2,000 ಕ್ಯಾಶ್‌ಬ್ಯಾಕ್ ದೊರೆಯಲಿದೆ. ಇದೇ ಸಂದರ್ಭದಲ್ಲಿ ಪೇಟಿಎಂ ಮಾಲ್ ರೂ.2000 ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇದಲ್ಲದೇ ರಿಲಯನ್ಸ್ ಜಿಯೋದಿಂದ ರೂ.4050 ವರೆಗೂ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ವಿಶೇಷತೆಗಳು:

ವಿಶೇಷತೆಗಳು:

ವಿವೊ V11 ಪ್ರೋ ಸ್ಮಾರ್ಟ್‌ಫೋನಿನಲ್ಲಿ 6.3 ಇಂಚಿನ AMOLED ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ ಇದು FHD+ ಗುಣಮಟ್ಟವನ್ನು ಹೊಂದಿದೆ. ಇದಲ್ಲದೇ ವಾಟರ್‌ಡ್ರಾಪ್ ನೋಚ್ ಡಿಸ್‌ಪ್ಲೇ ವಿನ್ಯಾಸವನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದರಲ್ಲಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ವಿವೊ V11 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಫನ್‌ಟಚ್ OS 4.5 ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಆಂಡ್ರಾಯ್ಡ್ 8.1 ಓರಿಯೋ ಅನ್ನು ಕಾಣಬಹುದಾಗಿದೆ. ಅಲ್ಲದೇ ವಿವೊ V11 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ವಿವೊ V11 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 4GB RAM ಅನ್ನು ಇದರಲ್ಲಿ ನೀಡಲಾಗಿದೆ. ಅಲ್ಲದೇ 64GB ಇಂಟರ್ನಲ್ ಮೆಮೊರಿಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ವಿವೊ V11 ಪ್ರೋ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 25 MP ಸೆಲ್ಫಿ ಕ್ಯಾಮೆರಾ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. 12MP + 5MP ಲೆನ್ಸ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲಿ ಸ್ಲೋ ಮೋಷನ್ ವೀಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಅಕ್ಕದೇ 3400mAh ಬ್ಯಾಟರಿಯನ್ನು ನೀಡಲಾಗಿದೆ. ಅಲ್ಲದೇ ಫಾಸ್ಟ್ ಚಾರ್ಜಿಂಗ್ ಅನ್ನು ನೋಡಬಹುದಾಗಿದೆ.

Best Mobiles in India

English summary
The new smartphone Vivo V11 Pro, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+