Home
ಮೊಬೈಲ್

ನಥಿಂಗ್ ಫೋನ್ 3: ಬಿಡುಗಡೆಗೂ ಮುನ್ನವೇ ಎಲ್ಲಾ ಫೀಚರ್ಸ್ ಮಾಹಿತಿ ಸೋರಿಕೆ!

ಮೊಬೈಲ್ ಮಾರುಕಟ್ಟೆಯಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ 'ನಥಿಂಗ್ ಫೋನ್ 3' ಸಾಧನವು ಜುಲೈ 1 ರಂದು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ, ಈ ಬಿಡುಗಡೆಗೂ ಮುನ್ನವೇ, ಮುಂಬರುವ ಈ ಸ್ಮಾರ್ಟ್‌ಫೋನ್‌ನ ವಿವರವಾದ ವೈಶಿಷ್ಟ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೋರಿಕೆಯಾಗಿವೆ. ಜನಪ್ರಿಯ ಟಿಪ್‌ಸ್ಟರ್‌ ಮಾಹಿತಿ ಪ್ರಕಾರ, ನಥಿಂಗ್ ಫೋನ್ 3 ಹಲವು ಪ್ರಭಾವಶಾಲಿ ಅಪ್‌ಗ್ರೇಡ್‌ಗಳೊಂದಿಗೆ ಬರಲಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

X (ಹಿಂದೆ ಟ್ವಿಟರ್) ನಲ್ಲಿನ ಪೋಸ್ಟ್‌ನಲ್ಲಿ, ಟಿಪ್‌ಸ್ಟರ್ @gadget_bits ಅವರು ನಥಿಂಗ್ ಫೋನ್ 3 ರ ವಿವರವಾದ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದಾರೆ. ಇವರು, ಮುಂಬರುವ ನಥಿಂಗ್ ಫೋನ್ 3 6.7-ಇಂಚಿನ LTPO OLED ಪರದೆಯನ್ನು ಹೊಂದಿರಲಿದ್ದು, ಇದು 1.5K ರೆಸಲ್ಯೂಶನ್ ನೀಡಲಿದೆ. ಹಾಗೂ ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಅನ್ನು ಒಳಗೊಂಡಿರು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಪಡೆಯಲಿದೆ ಎಂದು ಹೇಳಿದ್ದಾರೆ

ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇರುವ ಬಗ್ಗೆ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ನಥಿಂಗ್ ಫೋನ್ 3 ಸಾಧನವು 5,150mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ಈ ಟಿಪ್‌ಸ್ಟರ್ ಮಾಹಿತಿ ನೀಡಿದ್ದಾರೆ. ಇದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ, ಇದು ವೇಗವಾಗಿ ಬ್ಯಾಟರಿಯನ್ನು ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ವೈರ್‌ಲೆಸ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳೂ ಇರಲಿವೆ. ಜೊತೆಗೆ NFC ಮತ್ತು ಇ-ಸಿಮ್ ಸಾಮರ್ಥ್ಯಗಳೂ ಸಹ ಇರಲಿವೆ ಎಂದು ತಿಳಿಸಿದ್ದಾರೆ.

ನಥಿಂಗ್ ಫೋನ್ 3 ಪ್ರೊಸೆಸರ್ ವಿವರಗಳನ್ನು ಕಂಪನಿಯು ಈಗಾಗಲೇ ಅಧಿಕೃತವಾಗಿ ದೃಢಪಡಿಸಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿರುತ್ತದೆ. ಇದು ನಥಿಂಗ್ ಫೋನ್ 2 ಗೆ ಹೋಲಿಸಿದರೆ CPU ಕಾರ್ಯಕ್ಷಮತೆಯಲ್ಲಿ ಶೇಕಡಾ 36 ರಷ್ಟು, GPU ಕಾರ್ಯಕ್ಷಮತೆಯಲ್ಲಿ ಶೇಕಡಾ 88 ರಷ್ಟು ಮತ್ತು NPU (ನ್ಯೂರಲ್ ಪ್ರೊಸೆಸಿಂಗ್ ಯುನಿಟ್) ಕಾರ್ಯಕ್ಷಮತೆಯಲ್ಲಿ ಶೇಕಡಾ 60 ರಷ್ಟು ಸುಧಾರಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. . ಸಾಫ್ಟ್‌ವೇರ್ ವಿಷಯದಲ್ಲಿ, ಇದು ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.5 ನೊಂದಿಗೆ ಬರಲಿದೆ.

ನಥಿಂಗ್ ಫೋನ್ 3: ಬಿಡುಗಡೆಗೂ ಮುನ್ನವೇ ಎಲ್ಲಾ ಫೀಚರ್ಸ್ ಮಾಹಿತಿ ಸೋರಿಕೆ!

ಗಮನಾರ್ಹವಾಗಿ, ನಥಿಂಗ್ ಫೋನ್ 3 ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಸಹ ಪಡೆಯಲಿದೆ. ನಥಿಂಗ್ ಇಂಡಿಯಾ ಅಧ್ಯಕ್ಷ ಅಕಿಸ್ ಇವಾಂಜೆಲಿಡಿಸ್ ಅವರ ಪ್ರಕಾರ, ನಥಿಂಗ್ ಫೋನ್ 3 ಐದು ವರ್ಷಗಳವರೆಗೆ ಆಂಡ್ರಾಯ್ಡ್ OS ನವೀಕರಣಗಳು ಮತ್ತು ಏಳು ವರ್ಷಗಳ ಭದ್ರತಾ ಪ್ಯಾಚ್‌ಗಳೊಂದಿಗೆ ಬೆಂಬಲಿತವಾಗಬಹುದು. ಇದು ಹಿಂದಿನ ಮಾದರಿಯಲ್ಲಿ ನೀಡಲಾದ ಮೂರು ವರ್ಷಗಳ OS ಮತ್ತು ನಾಲ್ಕು ವರ್ಷಗಳ ಭದ್ರತಾ ಬೆಂಬಲಕ್ಕೆ ಹೋಲಿಸಿದರೆ ಗಣನೀಯ ಸುಧಾರಣೆಯಾಗಿದೆ. ಈ ದೀರ್ಘಾವಧಿಯ ಬೆಂಬಲವು ಬಳಕೆದಾರರಿಗೆ ಸುರಕ್ಷತೆ ಮತ್ತು ನವೀಕರಣಗಳ ಬಗ್ಗೆ ಭರವಸೆ ನೀಡುತ್ತದೆ.

ಇದೇ ಜುಲೈ 1 ರಂದು ಥಿಂಗ್ ಫೋನ್ 3 ಅಧಿಕೃತ ಬಿಡುಗಡೆಯಾದಾಗ ಈ ಎಲ್ಲಾ ವೈಶಿಷ್ಟ್ಯಗಳು ಖಚಿತವಾಗಲಿವೆ. ನಥಿಂಗ್ ಫೋನ್ 3 ಪ್ರೀಮಿಯಂ ವಿಭಾಗದಲ್ಲಿ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಹಾಗಾದರೆ, ನಥಿಂಗ್ ಫೋನ್ 3 ಕುರಿತು ನಿಮ್ಮ ನಿರೀಕ್ಷೆಗಳು ಯಾವುವು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Nothing Phone 3 is expected to feature a 5,150mAh battery, supporting wired fast charging at 100W, along with wireless and reverse wireless charging options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+