Home
ಮೊಬೈಲ್

ಇಂದೇ ಲಾಂಚ್ ಆಗಲಿದೆ POCO F6 ಸ್ಮಾರ್ಟ್‌ಫೋನ್; ಏನಿರಲಿದೆ ನಿರೀಕ್ಷಿತ ಬೆಲೆ, ಫೀಚರ್ಸ್ ಮಾಹಿತಿ

ಭಾರತೀಯ ಮಾರುಕಟ್ಟೆಯಲ್ಲಿ ಪೊಕೊ (Poco) ಸಂಸ್ಥೆಯು ತನ್ನದೇ ಆದ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್‌ಗಳಿಗೆ ಈಗಂತೂ ಭರ್ಜರಿ ಬೇಡಿಕೆ ಇದೆ. ಸಾಕಷ್ಟು ಗ್ರಾಹಕರು ಈ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ಕಾದು ಕುಳಿತಿರುತ್ತಾರೆ. ಅದರಂತೆ ಈಗ ಪೊಕೊ ನಿರೀಕ್ಷಿತ ಸ್ಮಾರ್ಟ್‌ಫೋನ್‌ ಒಂದನ್ನು ಇದೀಗ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಲಿದೆ.

ಪೊಕೊ (Poco) ಸಂಸ್ಥೆಯು ಮೇ 23ರಂದು Poco F6 ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. Poco F6 ಉಡಾವಣೆಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಸೈಟ್ ಕೂಡ ಮೀಸಲಿಡಲಾಗಿದ್ದು, ಈ ಸೈಟ್ ಮೋಬೈಲ್‌ನ ಫೀಚರ್ಸ್‌ಗಳನ್ನು ಬಹಿರಂಗಪಡಿಸಲಿದೆ. ಹಾಗೂ ಅದೇ ದಿನ ಈ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.

ಇಂದೇ ಲಾಂಚ್ ಆಗಲಿದೆ POCO F6; ಏನಿರಲಿದೆ ನಿರೀಕ್ಷಿತ ಬೆಲೆ

ಪೊಕೊ ಎಫ್6 ಬಹಿರಂಗಪಡಿಸಿದ ಮಾಹಿತಿ:

ಪೊಕೊ F6 ಸ್ಮಾರ್ಟ್‌ಫೋನ್ ಭಾರತದಲ್ಲಿ ಮೇ 23 ರಂದು ಸಂಜೆ 4:30 ಗಂಟೆಗೆ ಬಿಡುಗಡೆಯಾಗಲಿದೆ. ಈ ಮೊಬೈಲ್ ಕ್ಯಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 (Qualcomm Snapdragon 8s Gen 3) ಪ್ರೊಸೆಸರ್‌ ತಂತ್ರಜ್ಞಾನದೊಂದಿಗೆ ಸಿದ್ದಗೊಂಡಿದೆ.

ಈ ಸ್ಮಾರ್ಟ್‌ಫೋನ್‌ 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ, ಇದರ ಜೊತೆಗೆ ಈ ಮೊಬೈಲ್ ಇದು ಕಪ್ಪು ಮತ್ತು ಟೈಟಾನಿಯಂ ಎರಡು ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದು ಸಂಸ್ಥೆ ದೃಢೀಕರಿಸಿದೆ.

ಇದೀಗ ಬರಲಿರುವ ಪೊಕೊ (Poco) ಮೊಬೈಲ್ 120Hz ರಿಫ್ರೆಶ್ ರೇಟ್ ಮತ್ತು 2400nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. 1.5k ಅಮೋಲ್ಡ್‌ (AMOLED) ಡಿಸ್‌ಪ್ಲೇ ಹಾಗೂ 90W ಚಾರ್ಜರ್ ಜೊತೆಗೆ 5000mAh ಬ್ಯಾಟರಿಯ ಸಾಮರ್ಥ್ಯ ಹೊಂದಿರಲಿದೆ.

ಈ ಸ್ಮಾರ್ಟ್‌ಫೋನ್ ಮ್ಯಾಜಿಕ್ ಎರೇಸರ್ ಪ್ರೊ ಮತ್ತು ಇಮೇಜ್ ವಿಸ್ತರಣೆಯಂತಹ ಎಐ (AI) ಚಾಲಿತ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು LPDDR5X RAM ಮತ್ತು UFS 4.0 ಸ್ಟೋರೇಜ್‌ನೊಂದಿಗೆ ಲಾಂಚ್ ಆಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಪೊಕೊ ಐಸ್‌ಲುಕ್ (Icelook) ಸಿಸ್ಟಮ್, Xiaomi Hyper OS, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು DSDA (ಡ್ಯುಯಲ್ ಸಿಮ್ ಡ್ಯುಯಲ್ ಆಕ್ಟಿವ್) ಬೆಂಬಲ ಸೇರಿದಂತೆ ಅನೇಕ ಅಂಶಗಳನ್ನು ಸಂಸ್ಥೆ ಬಿಡುಗಡೆಗು ಮುನ್ನವೇ ದೃಢೀಕರಿಸಿಸುವ ಮೂಲಕ ಕಂಪನಿ ಈ ಮೇಲಿನ ಅಂಶಗಳನ್ನು ಈಗಾಗಲೆ ಗ್ರಾಹಕರಿಗಾಗಿ ಬಿಡುಗಡೆಗೊಳಿಸಿದೆ.

ಪೊಕೊ F6 ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್ ಮತ್ತು ಬೆಲೆ:

ಪೊಕೊ ಎಫ್6 ಸ್ಮಾರ್ಟ್‌ಫೋನ್ 6.67-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಬಹುದು ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿರುವುದಿಲ್ಲ. ಬೆಲೆಗೆ ಸಂಬಂಧಿಸಿದಂತೆ ನೋಡುವುದಾದರೆ ಪೊಕೊ F6 ಸ್ಮಾರ್ಟ್‌ಫೋನ್ ಭಾರತದಲ್ಲಿ ಸುಮಾರು ₹40,000 ರೂ. ಗಳಿಗೆ ದೊರಕುವ ನಿರೀಕ್ಷೆಯಿದೆ ಎಂದು ಊಹಿಸಲಾಗಿದೆ.

ಹಾಗೆಯೇ ಪೊಕೊ F6 ಮೊಬೈಲ್‌ ರೆಡ್ಮಿ ಟರ್ಬೋ 3 ನ ರೀ-ಬ್ರ್ಯಾಂಡ್‌ ಆಗಿರಲಿದೆ ಎಂದು ಕೆಲವು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಅದರಂತೆ F6 ಫೋನ್‌ನಲ್ಲಿ ನಿರೀಕ್ಷಿಸಲಾದ ಮಾಹಿತಿ ಪ್ರಕಾರ ಅದೇ ಚಿಪ್‌ಸೆಟ್ ಅನ್ನು ಹೊಂದಿರಲಿದೆ ಮತ್ತು 12 GB RAM ಮತ್ತು 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದು ಬಂದಿದೆ.

ಪೊಕೊ F6 ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ನಲ್ಲಿ ಹೇಳಿರುವ ಬೆಲೆ ಹಾಗೂ ವಿವರಗಳು ಸೋರಿಕೆಯ ಆಧಾರದಲ್ಲಿ ನೀಡಿರುವ ಮಾಹಿತಿಗಳಾಗಿವೆ, ಈ ಸ್ಮಾರ್ಟ್‌ಫೋನ್‌ನ ನಿಖರವಾದ ಬೆಲೆ ಸೇರಿದಂತೆ ಇನ್ನುಳಿದ ಫೀಚರ್ಸ್‌ಗಳ ಕುರಿತು ಮಾಹಿತಿ ಇಂದು ಸಂಜೆ 4:30 ಕ್ಕೆ ಮೊಬೈಲ್ ಬಿಡುಗಡೆಯಾದ ಬಳಿಕವಷ್ಟೆ ಸ್ಪಷ್ಟತೆ ಸಿಗಲಿದೆ.

Best Mobiles in India

English summary
The Poco F6 smartphone will be launched in India on May 23 at 4:30 PM. This mobile is equipped with Qualcomm Snapdragon 8s Gen 3 processor technology.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+