Realme C65 ಸ್ಮಾರ್ಟ್‌ಫೋನ್ ಈಗ ರೆಡ್ ಕಲರ್‌ನಲ್ಲಿ ಲಭ್ಯ! ಬೆಲೆ ಜಸ್ಟ್ 12,499 ರೂ.
ರಿಯಲ್‌ಮಿ ( Realme) ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು (Smartphones) ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿವೆ. ಅವುಗಳ ತಮ್ಮ ವಿಭಿನ್ನವಾದ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿಯು ಯಶಸ್ವಿಯಾಗಿವೆ. ರಿಯಲ್‌ಮಿ ಕಂಪನಿಯು ಭಾರತದಲ್ಲಿ ಇತ್ತೀಚೆಗೆ ತನ್ನ C ಸರಣಿಯ ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್ ಆಗಿರುವ C65 5G ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್ ತಿಂಗಳಿನಲ್ಲಿ ಫೆದರ್ ಗ್ರೀನ್ ಮತ್ತು ಗ್ಲೋಯಿಂಗ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಸಂಸ್ಥೆ ಸ್ಪೀಡಿ ರೆಡ್ ಬಣ್ಣದ ರೂಪಾಂತರವನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಹಾಗಿದ್ರೆ ಬನ್ನಿ ಈ ಈ ನೂತನ ವೇರಿಯಂಟ್‌ನ ಲಭ್ಯತೆ ಹಾಗೂ ಬೆಲೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಬೆಲೆ ಮತ್ತು ಲಭ್ಯತೆ:
ಅತ್ಯಂತ ಅಗ್ಗದ ಬೆಲೆಯಲ್ಲಿ ಈ Realme C65 5G ಸ್ಪೀಡಿ ರೆಡ್ ಬಣ್ಣದ ರೂಪಾಂತರ ಸ್ಮಾರ್ಟ್‌ಫೋನ್ ಲಭ್ಯವಿದ್ದಯ ಇದರ 6GB+128GB ವೇರಿಯಂಟ್‌ನ ಬೆಲೆ 12,499 ರೂ. ಗಳಾಗಿದೆ. ಮತ್ತು ಸ್ಮಾರ್ಟ್‌ಫೋನ್ ಜೂನ್ 14ರಿಂದ ಅಂದರೆ ಇಂದಿನಿಂದ ರಿಯಲ್‌ಮಿ ಅಧಿಕೃತ ವೆಬ್‌ಸೈಟ್ ಆಗಿರುವ realme.com ನಲ್ಲಿ ಮಧ್ಯಾಹ್ನ 12 ಯಿಂದ ಲಭ್ಯವಿರಲಿದೆ. ಮಾರಾಟದ ಸಮಯದಲ್ಲಿ ಖರೀದಿದಾರರು ಬ್ಯಾಂಕ್ ಕೊಡುಗೆಗಳನ್ನು ಪಡೆಯಬಹುದಾಗಿದ್ದು, SBI, HDFC, ICICI ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವುದರಿಂದ 1000 ರೂ. ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ.
ಇನ್ನು ವೇರಿಯಂಟ್ 4GB+64GB ಮಾದರಿಯಲ್ಲಿಯೂ ಲಭ್ಯವಿದ್ದು ಇದು ಕೇವಲ 10,499 ರೂ.ಬೆಲೆಯನ್ನು ಹೊಂದಿದೆ ಇದರ ಜೊತೆಗೆ 4GB + 128GB ಮಾದರಿಯ ಬೆಲೆ 11,499 ರೂ. ಗಳಿಗೆ ಖರೀದಿಸಬಹುದಾಗಿದೆ.

RealmeC65 5G ಫೀಚರ್ಸ್:
6.67-ಇಂಚಿನ (1604 x 720 ಪಿಕ್ಸೆಲ್‌ಗಳ) HD+ ಸ್ಕ್ರೀನ್ ಜೊತೆಗೆ 50/60/90/120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್, 625 nits ಗರಿಷ್ಠ ಬ್ರೈಟ್‌ನೆಸ್ ಅನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಆರ್ಮ್ ಮಾಲಿ G57 MC2 GPU ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ (2x ಕಾರ್ಟೆಕ್ಸ್-A76 @ 2.4GHz 6x ಕಾರ್ಟೆಕ್ಸ್-A55 @ 2GHz) ಹೊಂದಿದೆ.
4GB ಅಥವ 6GB LPDDR4x RAM, 64GB / 128GB (UFS 2.2) ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು ಜೊತೆಗೆ ಮೈಕ್ರೊ SD ಬಳಸುವ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ. ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್‌ಡಿ) ಸಿಮ್ ಗಳನ್ನು ಬಳಸಬಹುದು. ರಿಯಲ್‌ಮಿ UI 5.0 ಜೊತೆಗೆ ಆಂಡ್ಯಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ:
f/1.8 ದ್ಯುತಿರಂಧ್ರದೊಂದಿಗೆ 50MP ಬ್ಯಾಕ್ ಕ್ಯಾಮೆರಾ, ಸ್ಯಾಮ್‌ಸಂಗ್ JN1 ಸೆನ್ಸಾರ್, LED ಫ್ಲ್ಯಾಶ್, ಓಮ್ನಿವಿಷನ್ OV08D10 ಸೆನ್ಸಾರ್ ಜೊತೆಗೆ 8MP ಫ್ರಂಟ್ ಕ್ಯಾಮರಾ, f/2.0 ಅಪರ್ಚರ್ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.
ಜೊತೆಗೆ ಇದು 3.5mm ಆಡಿಯೋ ಜ್ಯಾಕ್, 1115 ಅಲ್ಟ್ರಾ ಲೀನಿಯರ್ ಬಾಟಮ್ ಪೋರ್ಟ್ ಮಾಡಿದ ಸ್ಪೀಕರ್‌ಗಳನ್ನು ಹೊಂದಿದೆ. 165.6×76.1×7.89mm ಆಯಾಮ ಹಾಗೂ 190g ತೂಕ ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಇದು IP54 ತಂತ್ರಾಂಶ ಹೊಂದಿದೆ.
5G SA / NSA (n1/n3/n5/n8/n28B/n40/n41(2535-2655MHz)/n77/n78 ಬ್ಯಾಂಡ್‌ಗಳು), ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz.), ಬ್ಲೂಟೂತ್, GPS5 , ಗ್ಲೋನಾಸ್, ಗೆಲಿಲಿಯೋ, QZSS, USB ಟೈಪ್ ಸಿ ಹೊಂದಿದೆ, ಇದರ ಜೊತೆಗೆ 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಕೂಡ ಹೊಂದಿದೆ


Click it and Unblock the Notifications








