Home
ಮೊಬೈಲ್

ಭಾರತದಲ್ಲಿ ಶೀಘ್ರವೇ Realme Narzo 80 Pro 5G ಬಿಡುಗಡೆ: ಬೆಲೆ ಕೇವಲ 20 ಸಾವಿರ?

ಭಾರತದಲ್ಲಿ ಬಜೆಟ್ ಬೆಲೆಯ ಹೊಸ Realme Narzo 80 Pro 5G ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಸಂತೋಷದ ಸುದ್ದಿ ಈಗಾಗಲೇ ದೊರೆತಿದೆ .ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾದ Realme Narzo 70 Pro ಯ ಉತ್ತರಾಧಿಕಾರಿಯಾಗಿ ಹೊಸ Realme Narzo 80 Pro 5G ಸ್ಮಾರ್ಟ್‌ಫೋನ್ ಪರಿಚಯಗೊಳ್ಳುತ್ತಿದ್ದು, ರಿಯಲ್‌ಮಿ ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಈ ಹೊಸ ನಾರ್ಜೊ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಟೀಸರ್ ಮಾಡಲು ಪ್ರಾರಂಭಿಸಲಾಗಿದೆ. ಇದೀಗ ಈ ಸಾಧನದಲ್ಲಿ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 7400 SoC ಪ್ರೊಸೆಸರ್ ಇರುವುದನ್ನು ಖಚಿತಪಡಿಸಿದೆ. ಇದರಿಂದ ಈ ಸ್ಮಾರ್ಟ್‌ಫೋನಿನ ಬೆಲೆ ಮಾಹಿತಿ ಕೂಡ ಲೀಕ್ ಆಗಿದೆ.

Realme Narzo 80 Pro 5G ಸ್ಮಾರ್ಟ್‌ಫೋನ್ 'ಶೀಘ್ರದಲ್ಲೇ ಬರಲಿದೆ' ಎಂಬ ಟ್ಯಾಗ್‌ನೊಂದಿಗೆ ರಿಯಲ್‌ಮಿ ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 7400 SoC ಯೊಂದಿಗೆ ಬಿಡುಗಡೆಯಾಗುವುದು ದೃಢಪಡಿಸಿರುವ ಕಂಪೆನಿಯು, ಈ ಪ್ರೊಸೆಸರ್ ಅನ್ನು ಒಳಗೊಂಡ ಮೊದಲ ಫೋನ್ ಇದಾಗಿರಲಿದೆ ಎಂದು ಹೇಳಿದೆ. ಮತ್ತೊಂದು ಸಿಹಿಸುದ್ದಿ ಏನೆಂದರೆ, ಈ ಸ್ಮಾರ್ಟ್‌ಫೋನ್ 20,000 ರೂ. ಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ, ಮುಂಬರುವ ಈ ಹೊಸ Realme Narzo 80 Pro 5G ಸ್ಮಾರ್ಟ್‌ಫೋನ್ ಕುರಿತು ಮತ್ತಷ್ಟು ಮಾಹಿತಿಯನ್ನು ನೋಡೋಣ ಬನ್ನಿ.

ಭಾರತದಲ್ಲಿ ಶೀಘ್ರವೇ Realme Narzo 80 Pro 5G ಬಿಡುಗಡೆ: ಬೆಲೆ ಕೇವಲ 20 ಸಾವಿರ?

Realme Narzo 80 Pro 5G ಆನ್‌ಟುಟು ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 7,80,000 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ಈ ಫೋನ್ TSMC ಯ 4nm ಪ್ರಕ್ರಿಯೆ ನೋಡ್‌ನಲ್ಲಿ ನಿರ್ಮಿತ ಆಕ್ಟಾ-ಕೋರ್ ಆರ್ಕಿಟೆಕ್ಚರ್ ಅನ್ನು ಹೊಂದಿದ್ದು, 2.6GHz ನಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಆರ್ಮ್ ಕಾರ್ಟೆಕ್ಸ್-A78 ಕೋರ್‌ಗಳು ಮತ್ತು 2.0GHz ನಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಆರ್ಮ್ ಕಾರ್ಟೆಕ್ಸ್-A55 ಕೋರ್‌ಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ, ಮೀಡಿಯಾ ಟೆಕ್ ಡೈಮೆನ್ಸಿಟಿ 7400 SoC ಪ್ರೊಸೆಸರ್‌ನೊಂದಿಗೆ 20,000 ರೂ. ಬೆಲೆಯ ವಿಭಾಗದಲ್ಲಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುವುದರಿಂದ, Realme Narzo 80 Pro 5G ಫೋನಿನ ಬೆಲೆಯು ಕೂಡ ಇದೇ ಸುತ್ತಮುತ್ತಲಿರುವುದಾಗಿ ಹಲವಾರು ವರದಿಗಳು ಸೂಚಿಸುತ್ತವೆ.

ಈಗಾಗಲೇ, ಹಿಂದಿನ Realme Narzo 70 Pro ಸ್ಮಾರ್ಟ್‌ಫೋನ್‌ನ್ನು 18,999 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಈ ಬೆಲೆಗೆ, ಇದು 120Hz ರಿಫ್ರೆಶ್ ದರವನ್ನು ಹೊಂದಿರುವ 6.67-ಇಂಚಿನ ಪೂರ್ಣ-HD+ OLED ಡಿಸ್ಪ್ಲೇ ಮತ್ತು MediaTek Dimensity 7050 SoC ಅನ್ನು ಒಳಗೊಂಡಿದೆ. ಇದಲ್ಲದೆ, ಈ ಸ್ಮಾರ್ಟ್‌ಫೋನಿನಲ್ಲಿ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೋನಿ IMX890 ಪ್ರಾಥಮಿಕ ಸೆನ್ಸರ್‌ನ್ನು ಒಳಗೊಂಡ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆ ಇದೆ. ಕಳೆದ Realme Narzo 70 Pro 67W ವೈರ್‌ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿತ್ತು.

ಇತ್ತ ಅಮೆಜಾನ್ ಕೂಡ ತನ್ನ ವೆಬ್‌ಸೈಟ್‌ನಲ್ಲಿ ಕೂಡ Realme Narzo 80 Pro 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಕುರಿತು ಟೀಸರ್ ಮಾಡಲು ಲ್ಯಾಂಡಿಂಗ್ ಪುಟವನ್ನು ರಚಿಸಿದೆ. ಇದರಲ್ಲಿ ಸ್ಮಾರ್ಟ್‌ಫೋನಿನ ನಿಖರವಾದ ಬಿಡುಗಡೆ ದಿನಾಂಕದ ಬಗ್ಗೆ ಇದರಲ್ಲಿ ಯಾವುದೇ ಮಾಹಿತಿ ಇಲ್ಲದಿದ್ದರೂ, ಮುಂದಿನ ವಾರ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚಿನ ಸೋರಿಕೆಯ ಪ್ರಕಾರ, Realme Narzo 80 Pro 5G ಸ್ಮಾರ್ಟ್‌ಫೋನ್ 8GB + 128GB, 8GB + 256GB, ಮತ್ತು 12GB + 256GB RAM ಸ್ಟೋರೇಜ್ ಆಯ್ಕೆಗಳಲ್ಲಿ ಹಾಗೂ ಕಿತ್ತಳೆ, ಹಸಿರು ಮತ್ತು ಸಿಲ್ವರ್ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
The Realme Narzo 80 Pro 5G reportedly achieved a score exceeding 780,000 points on AnTuTu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+