Home
ಮೊಬೈಲ್

ಮಾರ್ಚ್ 19 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ Realme P3 5G ಮತ್ತು P3 Ultra 5G!

ಭಾರತೀಯ ಯುವ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Realme P3 5G ಮತ್ತು P3 Ultra 5G ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ವಾರ ದೇಶದಲ್ಲಿ ಬಿಡುಗಡೆ ಮಾಡುವುದಾಗಿ Realme ಕಂಪನಿಯು ದೃಢಪಡಿಸಿದೆ. ಕಳೆದ ಫೆಬ್ರವರಿಯಲ್ಲಿ ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿದ್ದ Realme P3 Pro 5G ಮತ್ತು Realme P3x 5G ಸ್ಮಾರ್ಟ್‌ಫೋನ್‌ಗಳಿಗೆ ಹೊಸದಾಗಿ ಈ Realme P3 5G ಮತ್ತು P3 Ultra 5G ಸ್ಮಾರ್ಟ್‌ಫೋನ್‌ಗಳನ್ನು ಸೇರಿಸಲಾಗುತ್ತಿದೆ. ಅಲ್ಲದೇ, ಈ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಚಿಪ್‌ಸೆಟ್, ಡಿಸ್‌ಪ್ಲೇ, ಬ್ಯಾಟರಿ, ಚಾರ್ಜಿಂಗ್ ವೈಶಿಷ್ಟ್ಯಗಳು ಮತ್ತು ಲಭ್ಯತೆಯ ವಿವರಗಳು ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಹಾಗಾದರೆ, Realme P3 5G ಮತ್ತು P3 Ultra 5G ಸ್ಮಾರ್ಟ್‌ಫೋನ್‌ಗಳ ಬಿಡುಗಡೆ, ಲಭ್ಯತೆ ಮತ್ತು ವೈಶಿಷ್ಟ್ಯಗಳ ಕುರಿತಂತೆ ಹೆಚ್ಚಿನ ವಿವರಗಳನ್ನು ನೋಡೋಣ ಬನ್ನಿ.

Realme P3 5G ಮತ್ತು P3 Ultra 5G ಬಿಡುಗಡೆ ದಿನಾಂಕ

ಭಾರತದಲ್ಲಿ Realme P3 5G ಮತ್ತು P3 Ultra 5G ಸ್ಮಾರ್ಟ್‌ಫೋನ್‌ಗಳು ಮಾರ್ಚ್ 19 ರಂದು ಬಿಡುಗಡೆಯಾಗಲಿವೆ. ಈ ಫೋನ್‌ಗಳು ಎಸ್‌ಕ್ಲೂಸಿವ್ ಆಗಿ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಇಂಡಿಯಾ ಇ-ಸ್ಟೋರ್ ಮೂಲಕ ಖರೀದಿಸಲು ಲಭ್ಯವಿರುತ್ತದೆ ಎಂದು ಕಂಪನಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಆದರೆ, ಬೆಲೆಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಗಮನಾರ್ಹವಾಗಿ ಈ ದಿನವೇ Realme Buds T200 Lite TWS ಇಯರ್‌ಫೋನ್‌ಗಳನ್ನು ಸಹ ಅನಾವರಣಗೊಳಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.

Realme P3 Ultra 5G ವೈಶಿಷ್ಟ್ಯಗಳು

Realme P3 Ultra, MediaTek Dimensity 8350 Ultra ಚಿಪ್‌ಸೆಟ್‌ನೊಂದಿಗೆ ವಿಶ್ವದ ಮೊದಲ ಹ್ಯಾಂಡ್‌ಸೆಟ್ ಆಗಿ ಬಿಡುಗಡೆಗೊಳ್ಳಲಿದೆ ಎಂದು ಕಂಪನಿಯು ದೃಢಪಡಿಸಿದೆ. ಇದು 1.45 ಮಿಲಿಯನ್‌ಗಿಂತ ಹೆಚ್ಚು AnTuTu ಸ್ಕೋರ್ ಅನ್ನು ಸಾಧಿಸಿದೆ ಎಂದು ಹೇಳಲಾಗಿದ್ದು, ಫೋನ್ 12GB LPDDR5x RAM ಮತ್ತು 256GB UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಬೆಂಬಲಿಸುತ್ತದೆ.

ಈ Realme P3 Ultra 5G GT ಬೂಸ್ಟ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಬಳಕೆದಾರರ ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ. BGMI ನಲ್ಲಿ ಮೂರು ಗಂಟೆಗಳ ಕಾಲ 90fps ಗೇಮ್‌ಪ್ಲೇ ಮತ್ತು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿಸಲಾಗಿದೆ. ಹ್ಯಾಂಡ್‌ಸೆಟ್ 6050mm² VC ಕೂಲಿಂಗ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ.

ಮಾರ್ಚ್ 19 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ Realme P3 5G ಮತ್ತು P3 Ultra 5G

Realme P3 Ultra 5G ಡಿಸ್ಪ್ಲೇ 2,500Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. 6,000mAh ಬ್ಯಾಟರಿ ಮತ್ತು 80W AI ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ, ಇದು ಗೇಮಿಂಗ್ ಸಮಯದಲ್ಲಿ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ. ಇದು ಐದು ವರ್ಷಗಳ ಬಾಳಿಕೆ ನೀಡುತ್ತದೆ ಎಂದು ಹೇಳಲಾಗಿದೆ.

Realme P3 5G ವೈಶಿಷ್ಟ್ಯಗಳು

ಇತ್ತ Realme P3 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 Gen 4 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಶೇಕಡಾ 15 ರಷ್ಟು ಸುಧಾರಿತ CPU ಕಾರ್ಯಕ್ಷಮತೆಯನ್ನು ಒದಗಿಸುತ್ತದೆ ಎಂದು ತಿಳಿಸಲಾಗಿದೆ. AnTuTu ಪರೀಕ್ಷೆಯಲ್ಲಿ 7,50,000 ಅಂಕಗಳನ್ನು ಗಳಿಸಿದೆ ಎಂದು ಕಂಪನಿಯು ಹೇಳಿದೆ. ಈ ಹ್ಯಾಂಡ್‌ಸೆಟ್ AI ಮೋಷನ್ ಕಂಟ್ರೋಲ್ ಮತ್ತು AI ಅಲ್ಟ್ರಾ ಟಚ್ ಕಂಟ್ರೋಲ್ ಸೇರಿದಂತೆ GT ಬೂಸ್ಟ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

Realme P3 5G BGMI ಗಾಗಿ 90fps ಗೇಮ್‌ಪ್ಲೇ ಅನ್ನು ಬೆಂಬಲಿಸುತ್ತದೆ ಎಂದು ಕಂಪನಿಯು ದೃಢಪಡಿಸಿದೆ. ಸುಧಾರಿತ ಶಾಖ ಪ್ರಸರಣಕ್ಕಾಗಿ, ಇದು ಏರೋಸ್ಪೇಸ್-ಗ್ರೇಡ್ ಕೂಲಿಂಗ್ ಅನ್ನು ಹೊಂದಿದೆ. ಆಂಟೆನಾ ಅರೇ ಮ್ಯಾಟ್ರಿಕ್ಸ್ 2.0 ತಂತ್ರಜ್ಞಾನವು "ಸಬ್‌ವೇಗಳಂತಹ ಕಡಿಮೆ-ಸಿಗ್ನಲ್ ಪ್ರದೇಶಗಳಲ್ಲಿ" ಹ್ಯಾಂಡ್‌ಸೆಟ್‌ನ ಸಂಪರ್ಕವನ್ನು ಶೇಕಡಾ 30 ರಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಲಾಗಿದೆ.

Best Mobiles in India

English summary
The Realme P3 5G will get a Snapdragon 6 Gen 4 SoC. It is said to offer 15 percent improved CPU performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+