Home
ಮೊಬೈಲ್

ಭರ್ಜರಿ ಸಿಹಿಸುದ್ದಿ: ಮುಂಬರುವ Realme P3 5G ಫೋನ್ ಬೆಲೆ ₹14,999 ರೂ. ಮಾತ್ರ.!

ಭಾರತದಲ್ಲಿ ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಹೊಸ ಮಧ್ಯಮ ಶ್ರೇಣಿಯ Realme P3 5G ಸ್ಮಾರ್ಟ್‌ಫೋನ್ ಬ್ಯಾಂಕ್ ಆಫರ್‌ಗಳೊಂದಿಗೆ ಕೇವಲ ₹14,999 ಬೆಲೆಯಲ್ಲಿ ಲಭ್ಯವಾಗಲಿದೆ. Realme P3 5G ಸ್ಮಾರ್ಟ್‌ಫೋನಿನ 6 GB/128 GB ಮಾದರಿಯ ಬೆಲೆ ₹16,999, ಮತ್ತು 8 GB/128 GB ಮಾದರಿಯ ಬೆಲೆ ₹19,999 ಆಗಿರುತ್ತದೆ. 8 GB/256 GB ಆವೃತ್ತಿಯು ಸಹ ಲಭ್ಯವಿದೆ. ಪ್ರತಿಯೊಂದು ಮಾದರಿಗೂ ₹2,000 ಬ್ಯಾಂಕ್ ಕೊಡುಗೆಯನ್ನು ನೀಡುವುದಾಗಿ ಕಂಪನಿಯು ಘೋಷಿಸಿದೆ, ಇದರಿಂದಾಗಿ Realme P3 5G ಫೋನ್ ₹14,999 ರ ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.

ಭರ್ಜರಿ ಸಿಹಿಸುದ್ದಿ: ಮುಂಬರುವ Realme P3 5G ಫೋನ್ ಬೆಲೆ ₹14,999 ರೂ. ಮಾತ್ರ.!

ಇಂದು ಮುಂಜಾನೆಯಷ್ಟೇ ಪ್ರೊ ಮಾದರಿಯ Realme P3 Ultra 5G ಸ್ಮಾರ್ಟ್‌ಫೋನ್ ಬೆಲೆ ₹25,000 ಕ್ಕಿಂತ ಕಡಿಮೆ ಎಂದು Realme ಕಂಪನಿಯು ತಿಳಿಸಿತ್ತು. ಇದೀಗ Realme P3 5G ಫೋನ್ ಕೇವಲ ₹14,999 ಬೆಲೆಯಲ್ಲಿ ಲಭ್ಯವಾಗಲಿದೆ ಎಂಬ ಸುದ್ದಿ ಗ್ರಾಹಕರಿಗೆ ಸಂತೋಷ ತಂದಿದೆ. ದೇಶದ ಮೊಬೈಲ್ ಮಾರುಕಟ್ಟೆಯು ಬಹು ನಿರೀಕ್ಷೆಯಿಂದ ಎದುರುನೋಡುತ್ತಿರುವ Realme P3 5G ಸರಣಿಯ Realme P3 5G ಮತ್ತು Realme P3 Ultra 5G ಸ್ಮಾರ್ಟ್‌ಫೋನ್‌ಗಳು ಇದೇ ಮಾರ್ಚ್ 19 ರಂದು ಬಿಡುಗಡೆಗೆ ಸಿದ್ಧವಾಗಿವೆ. ಈ ಹೊಸ Realme P3 5G ಮತ್ತು P3 Ultra 5G ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು ಹೀಗಿವೆ:

Realme P3 Ultra 5G ವೈಶಿಷ್ಟ್ಯಗಳು
Realme P3 Ultra 5G, MediaTek Dimensity 8350 ಚಿಪ್‌ಸೆಟ್‌ನೊಂದಿಗೆ, ವಿಶ್ವದ ಮೊದಲ ಹ್ಯಾಂಡ್‌ಸೆಟ್ ಆಗಿ ಪರಿಚಯಿಸಲಾಗುತ್ತಿದೆ. ಇದು 1.45 ಮಿಲಿಯನ್‌ಗಿಂತ ಹೆಚ್ಚು AnTuTu ಸ್ಕೋರ್ ಅನ್ನು ಗಳಿಸಿದೆ. ಈ ಫೋನ್ 12GB LPDDR5x RAM ಮತ್ತು 256GB UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. Realme P3 Ultra 5G ಅತ್ಯುತ್ತಮ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಬಳಕೆದಾರರ ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ. BGMI ನಲ್ಲಿ 90fps ಗೇಮ್‌ಪ್ಲೇ ಮತ್ತು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ 6050mm² VC ಕೂಲಿಂಗ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ. 2,500Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿರುವ ಡಿಸ್‌ಪ್ಲೇ, 6,000mAh ಬ್ಯಾಟರಿ ಮತ್ತು 80W AI ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ, ಇದು ಗೇಮಿಂಗ್ ಸಮಯದಲ್ಲಿ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ.

Realme P3 5G ವೈಶಿಷ್ಟಗಳು
Realme P3 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 Gen 4 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಶೇಕಡಾ 15 ರಷ್ಟು ಸುಧಾರಿತ CPU ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. AnTuTu ಪರೀಕ್ಷೆಯಲ್ಲಿ 7,50,000 ಅಂಕಗಳನ್ನು ಗಳಿಸಿದೆ. AI ಮೋಷನ್ ಕಂಟ್ರೋಲ್ ಮತ್ತು AI ಅಲ್ಟ್ರಾ ಟಚ್ ಕಂಟ್ರೋಲ್ ಸೇರಿದಂತೆ GT ಬೂಸ್ಟ್ ವೈಶಿಷ್ಟಗಳನ್ನು ಬೆಂಬಲಿಸುತ್ತದೆ. BGMI ಗಾಗಿ 90fps ಗೇಮ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಸುಧಾರಿತ ಶಾಖ ಪ್ರಸರಣಕ್ಕಾಗಿ, ಇದು ಏರೋಸ್ಪೇಸ್-ಗ್ರೇಡ್ ಕೂಲಿಂಗ್ ಅನ್ನು ಹೊಂದಿದೆ. ಆಂಟೆನಾ ಅರೇ ಮ್ಯಾಟ್ರಿಕ್ಸ್ 2.0 ತಂತ್ರಜ್ಞಾನವು ಕಡಿಮೆ-ಸಿಗ್ನಲ್ ಪ್ರದೇಶಗಳಲ್ಲಿ ಹ್ಯಾಂಡ್‌ಸೆಟ್‌ನ ಸಂಪರ್ಕವನ್ನು ಶೇಕಡಾ 30 ರಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಲಾಗಿದೆ.

Realme P3 Ultra 5G ಸ್ಮಾರ್ಟ್‌ಫೋನಿನ ವಿನ್ಯಾಸ
ಹೊಸ Realme P3 Ultra 5G 'ಮೂನ್ ಡಾರ್ಕ್' ವಿನ್ಯಾಸದಲ್ಲಿ ಬಂದಿದೆ, ಇದು ಹಗುರವಾದ ನಿರ್ಮಾಣ ಮತ್ತು ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಈ ವಿನ್ಯಾಸವು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಹಸಿರು ಹಾಲೋ ಪರಿಣಾಮವನ್ನು ಉಂಟುಮಾಡುತ್ತದೆ, ಇದು ಚಂದ್ರನ ಮಣ್ಣಿನ ವಿನ್ಯಾಸವನ್ನು ಪ್ರತಿಬಿಂಬಿಸುತ್ತದೆ. ಬಳಕೆದಾರರಿಗೆ ಚಂದ್ರನ ಮೇಲ್ಮೈ ಧೂಳನ್ನು ಸ್ಪರ್ಶಿಸುವ ಅನುಭವ ನೀಡುತ್ತದೆ ಎಂದು ಕಂಪನಿಯು ತಿಳಿಸಿದೆ. Realme P3 Ultra 5G ಭಾರತದಲ್ಲಿ ಅತ್ಯಂತ ತೆಳ್ಳಗಿನ ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹೊಂದಿರುವ ಸಾಧನವಾಗಿದೆ, ಇದರ ದಪ್ಪ 7.38 ಮಿಮೀ ಮತ್ತು ತೂಕ 183 ಗ್ರಾಂ ಎಂದು ಕಂಪನಿಯು ಪ್ರಕಟಿಸಿದೆ. ಈ ಫೋನ್ ನೆಪ್ಚೂನ್ ಬ್ಲೂ ಮತ್ತು ಓರಿಯನ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ.

Best Mobiles in India

English summary
The Realme P3 5G will launch in India with a starting price of ₹14,999, including a bank offer. check here for more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+