Home
ಮೊಬೈಲ್

Samsung; UFS 4.1 ಸ್ಟೋರೇಜ್‌ ಜೊತೆ ಬರಲಿದೆ ಗ್ಯಾಲಕ್ಸಿ S25 ಅಲ್ಟ್ರಾ ! ನಿರೀಕ್ಷಿತ ಫೀಚರ್ಸ್‌ ಏನಿರಲಿವೆ ?

ತನ್ನ ವಿಭಿನ್ನ ಹಾಗೂ ವಿಶೇಷ ಫೀಚರ್ಸ್‌ಗಳಿಂದಾಗಿ ಗ್ರಾಹಕರನ್ನು ಸೆಳೆಯುವ ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy) ಸ್ಮಾರ್ಟ್‌ಫೋನ್, ಆಗಾಗ ಹೊಸ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ ಗುಣಮಟ್ಟದ ವಿಷಯದಲ್ಲೂ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಸ್ಯಾಮ್‌ಸಂಗ್ ಸಂಸ್ಥೆ ಯಶಸ್ವಿಯಾಗಿದೆ. ಇದೀಗ ಸ್ಯಾಮ್‌ಸಂಗ್ Galaxy S25 Ultra ಸರಣಿಯ ನೂತನ ಸ್ಮಾರ್ಟ್‌ಫೋನ್‌ ಅನ್ನು ಸಿದ್ದಪಡಿಸುತ್ತಿದೆ ಎಂಬ ವದಂತಿಗಳು ಕೆಲವು ವೆಬ್‌ಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಬಹುದಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಕುರಿತಾದ ಹೆಚ್ಚಿನ ವಿಷಯವನ್ನು ಈ ಲೇಖನದಲ್ಲಿ ತಿಳಿಯೋಣ.

ಸ್ಯಾಮ್‌ಸಂಗ್‌ ತನ್ನ ನೆಕ್ಸ್ಟ್‌ ಜನರೇಷನ್‌ನ ಪ್ರಮುಖ Galaxy S25 Ultra ಸ್ಮಾರ್ಟ್‌ಫೋನ್‌ ಅನ್ನು ಕೆಲವು ತಿಂಗಳ ಬಳಿಕ ಲಾಂಚ್‌ ಮಾಡಲಿದೆ ಎಂಬ ವಿಷಯ ಕೆಲವು ವೆಬ್‌ಗಳಲ್ಲಿ ವದಂತಿ ಹರಿದಾಡುತ್ತಿದೆ. ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳ ಕುರಿತು ಅನೇಕ ವದಂತಿಗಳು ಈಗಾಗಲೆ ಹರಿದಾಡುತ್ತಿರುವುದನ್ನು ಗಮನಿಸಬಹುದಾಗಿದೆ. ಇತ್ತೀಚೆಗೆ ಪ್ರೀಮಿಯಂ S ಸರಣಿಯ ಫೋನ್ UFS 4.1 ಸ್ಟೋರೇಜ್‌ ಜೊತೆ ಬರಲಿದೆ ಎಂದು ಟಿಪ್‌ಸ್ಟರ್ ಮಾಹಿತಿ ನೀಡಿದೆ. ಇತ್ತೀಚಿಗೆ UFS 4.0 ಫ್ಲಾಶ್ ಸ್ಟೋರೆಜ್‌ ಜೊತೆಗೆ Galaxy S24 ಅಲ್ಟ್ರಾ ಶಿಪ್ಸ್ ಮೊಬೈಲ್‌ ಬಿಡುಗಡೆಯಾಗಿರುವುದನ್ನು ಗಮನಿಸಬಹುದಾಗಿದೆ. Galaxy S25 ಅಲ್ಟ್ರಾ ಸ್ನಾಪ್‌ಡ್ರಾಗನ್ 8 Gen 4 SoC ಯೊಂದಿಗೆ ಬರುವ ನಿರೀಕ್ಷೆಯಿದೆ. ಜೊತೆಗೆ ಇದು 200 MP ಕ್ವಾಡ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Samsung; UFS 4.1 ಸ್ಟೋರೇಜ್‌ ಜೊತೆ ಬರಲಿದೆ ಗ್ಯಾಲಕ್ಸಿ S25 ಅಲ್ಟ್ರಾ !

ಟಿಪ್‌ಸ್ಟರ್‌ X ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದು Tipster Sawyer Galox (@Sawyergalox) ಪ್ರತೀ ಸೆಕೆಂಡಿಗೆ 8GB ಡೇಟಾ ವರ್ಗಾವಣೆ ರೇಟ್‌ಗಳ ಜೊತೆಗೆ Galaxy S25 ಅಲ್ಟ್ರಾ UFS 4.1 ಸಂಗ್ರಹಣೆ ಸಾಮರ್ಥ್ಯ ಜೊತೆಗೆ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದೆ. ಇದು Galaxy S24 Ultra ನಲ್ಲಿ ಲಭ್ಯವಿರುವ UFS 4.0 ಫ್ಲ್ಯಾಷ್ ಸಂಗ್ರಹಣೆಯ ಮೇಲೆ ಸ್ವಲ್ಪ ಅಪ್‌ಗ್ರೇಡ್ ಆಗಿರಬಹುದು ಎಂದು ಹೇಳಲಾಗುತ್ತಿದೆ, S24 Ultra ಪ್ರತೀ ಸೆಕೆಂಡಿಗೆ 4GB ಡೇಟಾ ವರ್ಗಾವಣೆಯ ವೇಗವನ್ನು ಹೊಂದಿದೆ.

Samsung Galaxy S25 ಮತ್ತು Galaxy S25+ ಒಂದೇ UFS 4.1 ಸಂಗ್ರಹಣೆಯೊಂದಿಗೆ ಸಜ್ಜುಗೊಂಡಿದೆಯೇ ಅಥವಾ ಟಾಪ್-ಆಫ್-ಲೈನ್ Galaxy 25 ಅಲ್ಟ್ರಾ ಮಾದರಿಯು ನೆಕ್ಸ್ಟ್‌ ಜನರೇಷನ್‌ನ ಫ್ಲ್ಯಾಷ್ ಸಂಗ್ರಹಣೆಯೊಂದಿಗೆ ಸಜ್ಜುಗೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹೆಚ್ಚು ಸುಧಾರಿತ UFS 5.0 ಸಂಗ್ರಹಣೆಯು 2027ರ ವೇಳೆಗೆ ಬರುವ ನಿರೀಕ್ಷೆಯಿದೆ.

ಈ ವರ್ಷ Samsung ಸಂಸ್ಥೆ128GB ವೇರಿಯಂಟ್‌ ಹೊರತುಪಡಿಸಿ ಉಳಿದ ಎಲ್ಲಾ Galaxy S24 ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ UFS 4.0 ಸ್ಟೋರೇಜ್ ಜೊತೆಗೆ ಸಜ್ಜುಗೊಳಿಸಿದೆ. 128GB ಸ್ಟೋರೇಜ್ ಹೊಂದಿರುವ ಸ್ಟ್ಯಾಂಡರ್ಡ್ Galaxy S24 UFS 3.1 ಸ್ಟೋರೇಜ್‌ ಜೊತೆಗೆ ಬರುತ್ತದೆ. ಆದ್ದರಿಂದ ಮುಂದಿನ Galaxy S ಲೈನ್‌ಅಪ್‌ಗಾಗಿ ಬ್ರ್ಯಾಂಡ್ ಇದೇ ಮಾದರಿಯನ್ನು ಅನುಸರಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು. Galaxy S25 ಅಲ್ಟ್ರಾ ಈಗಾಗಲೇ 16GB RAM ಮತ್ತು 512G ಮತ್ತು 1TB ಸ್ಟೋರೇಜ್ ಆಯ್ಕೆಗಳೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

Galaxy S25 ಅಲ್ಟ್ರಾ ಕುರಿತು ಊಹಾಪೋಹಗಳು ಈಗಾಗಲೇ ವೆಬ್‌ನಲ್ಲಿ ಹರಿದಾಡುತ್ತಿವೆ. ಇದು 200MP ಮುಖ್ಯ ಕ್ಯಾಮೆರಾದ ನೇತೃತ್ವದ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಕ್ಯಾಮೆರಾ ಸೆಟಪ್ 5x ಆಪ್ಟಿಕಲ್ ಜೂಮ್‌ನೊಂದಿಗೆ 50 MP ಸೆನ್ಸಾರ್, 50 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50MP ಟೆಲಿಫೋಟೋ ಸೆನ್ಸಾರ್‌ ಅನ್ನು ಸಹ ಒಳಗೊಂಡಿರಬಹುದು. ಇದು ನೆಕ್ಸ್ಟ್‌ ಜನರೇಷನ್‌ನ Snapdragon 8 Gen 4 SoC ನಲ್ಲಿ ರನ್ ಆಗುವ ನಿರೀಕ್ಷೆಯಿದೆ.

Galaxy S24 ಅಲ್ಟ್ರಾ ಈ ವರ್ಷದ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಿದ್ದು, 12GB RAM + 256GB ಸ್ಟೋರೇಜ್ ವೇರಿಯಂಟ್‌ನ ಪ್ರಾರಂಭಿಕ ಬೆಲೆ 1,29,999 ರೂ. ಗಳಾಗಿವೆ.

Best Mobiles in India

English summary
Rumors are circulating in some webs that Samsung will launch its next-generation flagship Galaxy S25 Ultra smartphone after a few months. It can be seen that many rumors are already doing the rounds about the features of the smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+