ಬಿಡುಗಡೆಗೂ ಮುನ್ನವೇ 'ಒಪ್ಪೊ ಆರ್17 ಪ್ರೊ' ಖರೀದಿಗೆ ಕಾಯಲು ಕಾರಣಗಳು ಇವು!!

|

ಇಂದಿನ ದಿನಗಳಲ್ಲಿ ಒಂದು ಸ್ಮಾರ್ಟ್‌ಪೋನ್ ಖರೀದಿಸಬೇಕು ಎಂದಾಗ ಆಗುವ ಗೊಂದಲ ಬೇರೆ ಯಾವುದೇ ವಸ್ತುವಿನ ಖರೀದಿಗೆ ಆಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮೊಬೈಲ್ ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳು ಸೇರಿದಂತೆ ಅವುಗಳ ಬೆಲೆ ವಿನ್ಯಾಸವನ್ನೆಲ್ಲಾ ನೋಡಿಕೊಂಡು ಸ್ಮಾರ್ಟ್‌ಫೋನ್ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಎಲ್ಲರಿಗೂ ಕಷ್ಟವೇ ಸರಿ.

ಇಂತಹ ಸಮಸ್ಯೆ ನಿಮಗೆ ಎದುರಾಗಿದ್ದರೆ ಸ್ವಲ್ಪ ದಿನ ಕಾಯಿರಿ. ಏಕೆಂದರೆ, ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಗೂ ಮೀರಿದ ತಂತ್ರಜ್ಞಾನಗಳನ್ನು ಹೊತ್ತಿರುವ ಭವಿಷ್ಯದ 'ಒಪ್ಪೊ ಆರ್17 ಪ್ರೊ' ಸ್ಮಾರ್ಟ್‌ಫೋನ್ ನಿಮಗಾಗಿ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ 'ಒಪ್ಪೊ ಆರ್17 ಪ್ರೊ' ಈಗ ನಿಮ್ಮ ಆಯ್ಕೆಯಾಗಲಿದೆ.

ಬಿಡುಗಡೆಗೂ ಮುನ್ನವೇ 'ಒಪ್ಪೊ ಆರ್17 ಪ್ರೊ' ಖರೀದಿಗೆ ಕಾಯಲು ಕಾರಣಗಳು ಇವು!!

ಎಂಟ್ರಿ ಲೆವೆಲ್ ಡಿಸ್‌ಎಲ್‌ಆರ್ ಶಕ್ತಿಯ ಟ್ರಿಪಲ್ ರಿಯರ್ ಕ್ಯಾಮೆರಾ, VOOK ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸೇರಿದಂತೆ ನಿರೀಕ್ಷೆಗೂ ಮೀರಿದ ಪ್ರೀಮಿಯಂ ವಿನ್ಯಾಸದಲ್ಲಿ 'ಒಪ್ಪೊ ಆರ್17 ಪ್ರೊ' ಬಿಡುಗಡೆಯಾಗುವುದು ಖಚಿತವಾಗಿದೆ. ಹಾಗಾದರೆ, ಎಲ್ಲರ ಕಣ್ಮನ ಸೆಳೆಯುತ್ತಿರುವ 'ಒಪ್ಪೊ ಆರ್17' ಸ್ಮಾರ್ಟ್‌ಫೋನ್ ಹೇಗಿದೆ? ಖರೀದಿಗೆ ಬೆಸ್ಟ್ ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಪ್ರೀಮಿಯಂನಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್!

ಪ್ರೀಮಿಯಂನಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್!

ಮೊಬೈಲ್ ಮಾರುಕಟ್ಟೆಯಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿರುವ 'ಒಪ್ಪೊ ಆರ್17 ಪ್ರೊ' ಸ್ಮಾರ್ಟ್‌ಫೋನ್ ಚಿತ್ರಗಳು ಈಗಾಗಲೇ ಆನ್‌ಲೈನಿನಲ್ಲಿ ಕಾಣಿಸಿಕೊಂಡಿವೆ. ಒಪ್ಪೊ R17 ಪ್ರೊ ವಿನ್ಯಾಸವು ನೈಸರ್ಗಿಕ ನೀರು ಮತ್ತು ಬೆಳಕಿನ ಹರಿವಿನಿಂದ ಪ್ರೇರೇಪಿಸಲ್ಪಟ್ಟಿದ ಎಂದು ಕಂಪೆನಿ ಈಗಾಗಲೇ ಹೇಳಿಕೊಂಡಿದೆ. ಆನ್‌ಲೈನಿನಲ್ಲಿ ಕಾಣಿಸಿರುವ ಚಿತ್ರಗಳಲ್ಲಿ ನೋಡುವಂತೆ, ಸ್ಮಾರ್ಟ್‌ಪೋನ್ ಉದ್ಯಮದ ವಿನ್ಯಾಸದ ದಿಕ್ಕನ್ನೇ ಬದಲಿಸುವಂತಹ ಪ್ರೀಮಿಯಂನಲ್ಲಿ ಪ್ರೀಮಿಯಂ ಡಿಸೈನ್ ಅನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

ಟ್ರಿಪಲ್ ಕ್ಯಾಮೆರಾ ಫೋನ್!

ಟ್ರಿಪಲ್ ಕ್ಯಾಮೆರಾ ಫೋನ್!

ನೀವು ಒಂದು ಎಂಟ್ರಿ ಲೆವೆಲ್ ಡಿಎಸ್‌ಎಲ್‌ಆರ್ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಬೇಕು ಎಂದುಕೊಂಡಿದ್ದರೆ 'ಒಪ್ಪೊ R17 ಪ್ರೊ' ಸ್ಮಾರ್ಟ್‌ಫೋನ್ ಬಿಡುಗಡೆಯಾಗುವವರೆಗೂ ಕಾಯಲೇಬೇಕು. ಏಕೆಂದರೆ, 'ಒಪ್ಪೊ R17 ಪ್ರೊ' ಸ್ಮಾರ್ಟ್‌ಫೋನ್ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತ್ರಿವಳಿ-ಲೆನ್ಸ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಟ್ರಿಪಲ್-ಲೆನ್ಸ್ ಕ್ಯಾಮರಾ ವೇರಿಯೇಬಲ್ ದ್ಯುತಿರಂಧ್ರ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಸವಾಲಿನ ಬೆಳಕಿನ ಸ್ಥಿತಿಯಲ್ಲಿಯೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲು ಸಾಧ್ಯವಾಗಲಿದೆ.

ಸೂಪರ್ VOOK ಫ್ಲಾಶ್‌ಚಾರ್ಜ್!

ಸೂಪರ್ VOOK ಫ್ಲಾಶ್‌ಚಾರ್ಜ್!

'ಒಪ್ಪೊ R17 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಸೂಪರ್ VOOK ಫ್ಲಾಶ್‌ಚಾರ್ಜ್ ತಂತ್ರಜ್ಞಾನವನ್ನು ತರುವುದು ಖಚಿತವಾಗಿದೆ. ಸೂಪರ್ VOOC ಫ್ಲ್ಯಾಶ್ ಚಾರ್ಜ್ ಎಂಬುದು ವೇಗದ ಚಾರ್ಜಿಂಗ್ ತಂತ್ರಜ್ಞಾನವಾಗಿದ್ದು, ಇತರ ಚಾರ್ಜಿಂಗ್ ತಂತ್ರಜ್ಞಾನಗಳಿಗಿಂತ ವೇಗವಾಗಿ ಬ್ಯಾಟರಿಯನ್ನು ರೀಚಾರ್ಜ್ ಮಾಡುವ ಶಕ್ತಿಯನ್ನು ಹೊಂದಿದೆ. ಶಕ್ತಿಯುತವಾದ ದೊಡ್ಡ ಬ್ಯಾಟರಿ ಕೋಶಗಳು ಮರುಪೂರಣಗೊಳಿಸಲು ಈ ಸೂಪರ್ VOOK ಫ್ಲಾಶ್‌ಚಾರ್ಜ್ ತಂತ್ರಜ್ಞಾನದ ಅವಶ್ಯಕತೆ ಹೆಚ್ಚಿದೆ ಎಂದು ಒಪ್ಪೊ ಕಂಪೆನಿ ತಿಳಿಸಿದೆ.

ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.!

ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.!

ಸೂಪರ್ ಫ್ಲಾಷ್ ಚಾರ್ಜಿಂಗ್ ತಂತ್ರಜ್ಞಾನವನ್ನು ತರುವ ಮೊದಲು ಸೂಪರ್ ಫ್ಲಾಷ್ ಚಾರ್ಜಿಂಗ್ ಪ್ರಸ್ತಾವನೆಗಳ ಮೇಲೆ ಕಟ್ಟುನಿಟ್ಟಾದ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲು ಕಂಪನಿಗೆ ಜರ್ಮನಿಯಲ್ಲಿರುವ ರೈನ್ಲ್ಯಾಂಡ್ ಪ್ರಯೋಗಾಲಯ ಸಹಾಯ ನೀಡಿದೆಯಂತೆ. ಚಾರ್ಜಿಂಗ್ ಸುರಕ್ಷತೆಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ರೀನ್ಲ್ಯಾಂಡ್ ನಡೆಸಿದ ಸುರಕ್ಷತಾ ಪರೀಕ್ಷೆಗಳು ದೃಢಪಡಿಸಿವೆ. ಸುಮಾರು 600 ಸ್ವತಂತ್ರ ಪರೀಕ್ಷೆಗಳಲ್ಲಿ ಕೇಬಲ್‌ಗಳು, ಚಾರ್ಜಿಂಗ್ ಅಡಾಪ್ಟರ್‌ಗಳು, ಐಸಿ ಚಿಪ್ಸ್, ಇತ್ಯಾದಿಗಳಂತಹ ಸುರಕ್ಷತೆ ದೃಢಪಟ್ಟಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸುರಕ್ಷತೆ ಸರಿ. ಆದರೆ, ವೇಗ ಎಷ್ಟು?

ಸುರಕ್ಷತೆ ಸರಿ. ಆದರೆ, ವೇಗ ಎಷ್ಟು?

ಚಾರ್ಜಿಂಗ್ ಸುರಕ್ಷತೆಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ರೀನ್ಲ್ಯಾಂಡ್ ನಡೆಸಿದ ಸುರಕ್ಷತಾ ಪರೀಕ್ಷೆಗಳು ದೃಢಪಡಿಸಿವೆ ಎಂದು ತಿಳಿಸಿದ ನಂತರ ಪರೀಕ್ಷಾ ಫಲಿತಾಂಶದ ವೇಗ ಎಷ್ಟು ಎಂದು ತಿಳಿಯದಿದ್ದರೆ ಹೇಗೆ?. ಜರ್ಮನಿಯಲ್ಲಿರುವ ರೈನ್ಲ್ಯಾಂಡ್ ಪ್ರಯೋಗಾಲಯ ನಡೆಸಿದ ಚಾರ್ಜಿಂಗ್ ವೇಗದ ಪ್ರಮಾಣೀಕರಣ ಪರೀಕ್ಷೆಯಲ್ಲಿ 'ಒಪ್ಪೊ R17 ಪ್ರೊ' ಸ್ಮಾರ್ಟ್‌ಫೋನ್ ದಿಗ್ಭ್ರಮೆ ಮೂಡಿಸಿದೆ. R17 ಪ್ರೊ ಚಾರ್ಜಿಂಗ್ ವೇಗ ಕೇವಲ 10 ನಿಮಿಷಗಳಲ್ಲಿ 40% ಚಾರ್ಜ್ ಅನ್ನು ತಲುಪಿದೆ ಎಂದು ಪ್ರಯೋಗಾಲಯ ದೃಢಪಡಿಸಿದೆ.

ನಿಮ್ಮ ಮೆಚ್ಚಿನ ಆಯ್ಕೆಯಾಗಬಹುದು!

ನಿಮ್ಮ ಮೆಚ್ಚಿನ ಆಯ್ಕೆಯಾಗಬಹುದು!

ಈಗಾಗಲೇ ಪೇಟೆಂಟ್ ಲೈಸೆನ್ಸಿಂಗ್ ಮೂಲಕ, ಒಪ್ಪೊ ಕಂಪೆನಿ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಅತ್ಯುನ್ನತ ಸ್ಮಾರ್ಟ್‌ಫೋನ್ ಒಂದನ್ನು ನೀಡಲು ತುದಿಗಾಲಿನಲ್ಲಿ ನಿಂತಿದೆ. ಸೂಪರ್ VOOK ಫ್ಲಾಶ್‌ಚಾರ್ಜ್ ತಂತ್ರಜ್ಞಾನ, ಪ್ರೀಮಿಯಂನಲ್ಲಿ ಪ್ರೀಮಿಯಂ ಡಿಸೈನ್, ಎಂಟ್ರಿ ಲೆವೆಲ್ ಖ್ಯಾತಿಯ ಡಿಸ್‌ಎಲ್‌ಆರ್ ಖ್ಯಾತಿಯ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಕೇವಲ 10 ನಿಮಿಷಗಳಲ್ಲಿ 40% ಚಾರ್ಜ್ ಆಗುವ ಸುರಕ್ಷತಾ ಚಾರ್ಜಿಂಗ್ ತಂತ್ರಜ್ಞಾನಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಈ ಸ್ಮಾರ್ಟ್‌ಫೋನ್ ನಿಮ್ಮ ಮೆಚ್ಚಿನ ಆಯ್ಕೆಯಾಗಬಹುದು.

Best Mobiles in India

English summary
The upcoming OPPO R17 Pro will redefine flagship smartphone experience . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X