ನೀವು ಫೋನ್ ಹಿಡಿಯುವ ಸ್ಟೈಲ್ ಮೇಲೆ ನಿಮ್ಮ ಭವಿಷ್ಯ ಇದೆ!

By Gizbot Bureau
|

ನೀವು ಯಾವ ರೀತಿ ವರ್ತಿಸುತ್ತೀರಿ, ನೀವು ಎಂತಹ ಬಟ್ಟೆ ತೊಡುತ್ತೀರಿ, ಯಾವ ವಸ್ತುಗಳನ್ನು ಹಿಡಿದುಕೊಂಡಿದ್ದೀರಿ, ಎಂತಹ ವಸ್ತುಗಳನ್ನು ಹಿಡಿದುಕೊಂಡಿದ್ದೀರಿ ಎಂಬುದನ್ನು ಜನ ನೋಡುತ್ತಾರೆ ಮತ್ತು ಗಮನಿಸುತ್ತಾರೆ. ಆದರೆ ನಾವು ಫೋನ್ ನ್ನು ಹೇಗೆ ಹಿಡಿದುಕೊಳ್ಳುತ್ತೀವಿ ಎಂಬುದು ಇದೀಗ ಚರ್ಚೆಯಾಗುತ್ತಿರುವ ಪ್ರಶ್ನೆ?

ನಾವು ಯಾವಾಗಲೂ ಫೋನ್ ನ್ನು ಸುರಕ್ಷಿತವಾಗಿಟ್ಟುವ ರೀತಿಯಲ್ಲಿ, ನಮಗೆ ಕಂಫರ್ಟ್ ಆಗುವ ರೀತಿಯಲ್ಲಿ ಫೋನ್ ನ್ನು ಹಿಡಿದುಕೊಳ್ಳುತ್ತೇವೆ. ನಾವು ಫೋನ್ ಹೇಗೆ ಹಿಡಿದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ಅಡಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಅಂಶಗಳನ್ನು ನಮೂದಿಸಲಾಗಿದೆ.

ನೀವು ಫೋನ್ ಹಿಡಿಯುವ ಸ್ಟೈಲ್ ಮೇಲೆ ನಿಮ್ಮ ಭವಿಷ್ಯ ಇದೆ!

ನೀವು ಫೋನ್ ಹಿಡಿದುಕೊಳ್ಳುವ ರೀತಿ

ನಾವು ಎಲ್ಲಾ ವಸ್ತುಗಳನ್ನು ಆಚೀಚೆ ಮಾಡಿಕೊಳ್ಳುವುದು, ಗೊಂದಲ ಮಾಡಿಕೊಂಡು ಇಟ್ಟುಕೊಳ್ಳುವುದು ಮಾಡುತ್ತೇವೆ, ಆದರೆ ಫೋನ್ ಬಗ್ಗೆ ಮಾತ್ರ ವಿಶೇಷ ಕಾಳಜಿ ವಹಿಸುತ್ತೇವೆ. ಇಂದಿನ ಜಮಾನದ ಬಹುಮುಖ್ಯ ವಸ್ತು ಎಂದೆನಿಸಿರುವ ಫೋನ್ ನ್ನು ನಾವು ಹೇಗೆ ಹಿಡಿದುಕೊಳ್ಳುತ್ತೇವೆ ಎಂಬ ಆಧಾರದಲ್ಲಿ ನಮ್ಮ ವ್ಯಕ್ತಿತ್ವ ನಿರ್ಧರಿಸಬಹುದು ಎಂದರೆ ಆಶ್ಚರ್ಯವಲ್ಲವೇ? ನಮ್ಮ ಸಂಬಂಧದಲ್ಲಿ ನಾವು ಹೇಗಿದ್ದೇವೆ ಎಂಬುದನ್ನು ಇದು ವಿವರಿಸುತ್ತದೆಯಂತೆ. ಜನರು ಯಾವಾಗಲೂ ಇತರರು ಹೇಗಿದ್ದಾರೆ, ಅವರ ಅಭ್ಯಾಸಗಳೇನು ಎಂಬ ಬಗ್ಗೆ ಗಮನಿಸುತ್ತಾರೆ. ಹಾಗಾಗಿ ನಾವಿಲ್ಲಿ 4 ವಿಭಿನ್ನ ಫೋನ್ ಹಿಡಿದುಕೊಳ್ಳುವ ಅಭ್ಯಾಸ ಮತ್ತು ಅದಕ್ಕೆ ಸಂಬಂಧಿಸಿದಂತೆ ಬದುಕಿನ ಶೈಲಿಯ ವಿವರಣೆಯನ್ನು ನೀಡಿದ್ದೇವೆ.

ಕೇವಲ ಹೆಬ್ಬೆರಳನ್ನು ಬಳಸಿ

ಕೇವಲ ಹೆಬ್ಬೆರಳನ್ನು ಬಳಸಿ

ಯಾರು ಹೆಬ್ಬೆರಳನ್ನು ಬಳಸುತ್ತಾರೋ ಅವರು ನಿರಾತಂಕವಾದ ಮತ್ತು ಎಚ್ಚರಿಕೆಯಿಂದ ಇರುವ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಅವರಿಗೆ ಪ್ರಕಾಶಮಾನವಾದ ಜೀವನವಿರುತ್ತದೆ.ಯಾವುದೇ ಸಮಸ್ಯೆಯನ್ನು ಪರಿಹರಿಸುವ ತಾಕತ್ತು ನಿಮ್ಮಲ್ಲಿರುತ್ತದೆ. ನಿಮ್ಮ ಸಾಮರ್ಥ್ಯದೊಂದಿಗೆ ನಿಮ್ಮ ಆತ್ಮವಿಶ್ವಾಸ ಹೊಂದಿಕೆಯಾಗುತ್ತದೆ ಮತ್ತು ನಿಮಗೆ ವಹಿಸಿದ ಕೆಲಸದಿಂದ ಹಿಂದೆ ಸರಿಯುವ ಸ್ವಭಾವ ನಿಮ್ಮದ್ದಲ್ಲ. ಯಾವುದೇ ಕೆಲಸವಾದರೂ ಮಾಡಿಯೇ ತೀರುವ ಗುಣವಿರುತ್ತದೆ. ಯಾವುದೇ ಸಂಬಂಧವನ್ನು ನೀವು ಇಷ್ಟಪಡುವುದಿಲ್ಲ. ಯಾವುದೇ ವ್ಯಕ್ತಿಯ ಬಗ್ಗೆ ನಿರ್ಧರಿಸುವುದಕ್ಕೆ ನಿಮಗೆ ತುಂಬಾ ಸಮಯಬೇಕಾಗುತ್ತದೆ.

ಹೆಬ್ಬೆರಳನ್ನು ಸ್ಕ್ರೋಲ್ ಮತ್ತು ಟೈಪ್ ಮಾಡುವುದಕ್ಕೆ ಬಳಸುವುದು

ಹೆಬ್ಬೆರಳನ್ನು ಸ್ಕ್ರೋಲ್ ಮತ್ತು ಟೈಪ್ ಮಾಡುವುದಕ್ಕೆ ಬಳಸುವುದು

ಹೆಬ್ಬೆರಳನ್ನು ಸ್ಕ್ರೋಲ್ ಮತ್ತು ಟೈಮ್ ಮಾಡುವುದಕ್ಕೆ ಬಳಸುವವರು ಯಾವುದೇ ಹೆಜ್ಜೆ ಇಡಬೇಕಾದರೆ ಬುದ್ದಿವಂತಿಕೆಯಿಂದ ಯೋಚಿಸುತ್ತೀರಿ ಮತ್ತು ಎಚ್ಚರಿಕೆಯನ್ನು ವಹಿಸುತ್ತೀರಿ. ನೀವು ಬಹಳ ಸೂಕ್ಷ್ಮ ಸ್ವಭಾವದವರು. ಇನ್ನೊಬ್ಬರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎಂದು ಆಲೋಚಿಸುತ್ತೀರಿ ಮತ್ತು ನೀವು ಇತರರನ್ನು ಕೇರ್ ತೆಗೆದುಕೊಳ್ಳುವ ಸ್ವಭಾವವು ಎಲ್ಲರಿಗೂ ಇಷ್ಟವಾಗುತ್ತದೆ. ಯಾವುದೇ ವ್ಯಕ್ತಿಯ ಬಗ್ಗೆ ಕೂಡಲೇ ನಿರ್ಧರಿಸಿಬಿಡುತ್ತೀರಿ ಮತ್ತು ಆ ವ್ಯಕ್ತಿಯ ಜೊತೆ ಇರುವುದಕ್ಕೆ ನೀವು ಸಾಕಷ್ಟು ಶ್ರಮಿಸುತ್ತೀರಿ. ನಿಮ್ಮ ಈ ವ್ಯಕ್ತಿತ್ವದಿಂದಾಗಿಯೇ ಕೆಲವು ಸಂಬಂಧಗಳಿಂದ ದೂರ ಸರಿಯುವ ಸಂದರ್ಬ ಎದುರಾಗಬಹುದು.

ಎರಡು ಬೆರಳಿನ ಹೆಬ್ಬೆರಳನ್ನು ಬಳಸಿ ಟೈಪ್ ಮಾಡುವುದು

ಎರಡು ಬೆರಳಿನ ಹೆಬ್ಬೆರಳನ್ನು ಬಳಸಿ ಟೈಪ್ ಮಾಡುವುದು

ಈ ರೀತಿ ಮೊಬೈಲ್ ಬಳಕೆ ಮಾಡುವವರು ಯಾವುದೇ ಕೆಲಸವನ್ನೇ ಆದರೂ ಬಹಳ ಬೇಗನೆ ಮತ್ತು ಹೆಚ್ಚು ನಿಖರವಾಗಿ ಮುಗಿಸಿ ಬಿಡುತ್ತಾರೆ. ನಿಮ್ಮ ಈ ಕೆಲಸದ ವೈಖರಿಯನ್ನು ನೀವು ಕೆಲಸ ಮಾಡುವ ಸ್ಥಳದಲ್ಲಿ ಕಾಣಲು ಸಾಧ್ಯವಿದೆ ಮತ್ತು ಕೆಲವೇ ಸೆಕೆಂಡ್ ಗಳಲ್ಲಿ ನೀವು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬಿಡುತ್ತೀರಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ಐಡಿಯಾಗಳನ್ನು ಹಂಚಿಕೊಳ್ಳುತ್ತೀರಿ, ಬೇರೆಯವರ ಜೊತೆಗೆ ಪಾರ್ಟಿ ಮಾಡುತ್ತೀರಿ, ಇತರೆ ವ್ಯಕ್ತಿಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಸ್ವಭಾವ ನಿಮ್ಮಲ್ಲಿದೆ.ನೀವು ಇತರರ ಮನಸ್ಸನ್ನು ಗೆಲ್ಲುವುದು ಕಷ್ಟ. ಬೇರೆಯವರಿಂದ ಯಾವಾಗಲೂ ಬೈಸಿಕೊಳ್ಳುತ್ತೀರಿ.

ತೋರುಬೆರಳನ್ನು ಬಳಸಿ ಮೊಬೈಲ್ ಆಪರೇಟ್ ಮಾಡುವುದು

ತೋರುಬೆರಳನ್ನು ಬಳಸಿ ಮೊಬೈಲ್ ಆಪರೇಟ್ ಮಾಡುವುದು

ಈ ರೀತಿ ಮೊಬೈಲ್ ಬಳಸುವವವರು ಕ್ರಿಯೇಟಿವ್ ಸ್ವಭಾವದವರು ಮತ್ತು ಕಲಾಕಾರರು. ನಿಮ್ಮ ಐಡಿಯಾಗಳನ್ನು ಎಲ್ಲರೂ ಪ್ರಶಂಸಿಸುತ್ತಾರೆ ಮತ್ತು ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಕ್ರಿಯೇಟಿವಿಟಿಯನ್ನು ಅವರು ಕೊಂಡಾಡುತ್ತಾರೆ. ನೀವು ನಾಚಿಕೆ ಸ್ವಭಾವದವರು ಮತ್ತು ಸಂಬಂಧದಲ್ಲಿ ನೀವೇ ಮುಂದುವರಿಯುವುದಕ್ಕೆ ಹಿಂದೆಮುಂದೆ ಯೋಚಿಸುತ್ತೀರಿ.

Best Mobiles in India

Read more about:
English summary
The Way You Hold Your Phone It Will Reveal Your Identity

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X