ಎಟಿಎಂ ಕಾರ್ಡ್‌ನಂತ ಸ್ಮಾರ್ಟ್‌ಫೋನ್..! ಫೀಚರ್ಸ್ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ..!
ತಂತ್ರಜ್ಞಾನ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಮಹತ್ತರ ಬದಲಾವಣೆಗಳು ಆಗುತ್ತಿದ್ದು, 2G ತಂತ್ರಜ್ಞಾನದಲ್ಲಿದ್ದ ನಾವೆಲ್ಲಾ 5G ಟೆಕ್ನಾಲಜಿ ಕಡೆ ಮುಂದುವರೆಯುತ್ತಿದ್ದೇವೆ. ಅದರಂತೆ ಸ್ಮಾರ್ಟ್‌ಫೋನ್ ಕೂಡ ತನ್ನ ಆಕಾರವನ್ನು ಬದಲಿಸಿಕೊಳ್ಳುತ್ತಿದೆ. ಈಗ ಕ್ರೆಡಿಟ್ ಕಾರ್ಡ್ ಆಕಾರದಲ್ಲೊಂದು ಸ್ಮಾರ್ಟ್‌ಫೋನ್ ವಿಶ್ವಕ್ಕೆ ಪರಿಚಯವಾಗಿದೆ.

ಹೌದು, ಕೀಬೋರ್ಡ್ ಮಾದರಿಯಿಂದ ಟಚ್ ಸ್ಕ್ರೀನ್, ಟಚ್ ಸ್ಕ್ರೀನ್‌ನಲ್ಲಿಯೇ ಅತ್ಯಾಧುನಿಕ ಫಿಂಗರ್‌ಪ್ರಿಂಟ್ ಸೆನ್ಸಾರ್, ಒಂದು ಕ್ಯಾಮೆರಾದಿಂದ ನಾಲ್ಕು ಕ್ಯಾಮೆರಾ ಹೊಂದುವುದರೊಂದಿಗೆ ಹಲವು ಸಾಧ್ಯತೆಗಳನ್ನು ಸ್ಮಾರ್ಟ್‌ಫೋನ್ ಸಾಧ್ಯವಾಗಿಸಿದೆ. ಆದರೆ, ಈಗ ವಿಷಯ ಅದಲ್ಲ, ಇತ್ತೀಚೆಗೆ ತಾನೇ ಮಡಚುವ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ವಿಷಯ ನೀವು ಕೇಳಿದ್ದಿರಿ. ಈಗ ಜಪಾನ್ ಕಂಪನಿಯೊಂದು ವಿಶ್ವದ ಅತಿ ತೆಳುವಾದ ಮತ್ತು ಕ್ರೆಡಿಟ್ ಕಾರ್ಡ್ ಹೋಲುವಂತಹ ಸ್ಮಾರ್ಟ್‌ಫೋನ್‌ನ್ನು ವಿಶ್ವಕ್ಕೆ ಪರಿಚಯಿಸಿದ್ದು, ಈ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ... ಅದೇನು ಅಂತಿರಾ ಮುಂದೆ ನೋಡಿ..

NTT Docomoದಿಂದ ಲಾಂಚ್
ವಿಶ್ವದ ಅತಿ ತೆಳುವಾದ ಮತ್ತು ಹಗುರವಾದ ಸ್ಮಾರ್ಟ್‌ಫೋನನ್ನು ಜಪಾನಿನ ಟೆಕ್ ಕಂಪನಿಯಾಗಿರುವ NTT Docomo ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ದಿಟ್ಟು ಕ್ರೆಡಿಟ್ ಕಾರ್ಡ್‌ನ ಮಾದರಿಯಲ್ಲಿಯೇ ಇರುವುದು ವಿಶೇಷ. ಅದಲ್ಲದೇ 4G ಸಂಪರ್ಕ ಹೊಂದಿರುವುದು ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಸಾಧ್ಯತೆಯನ್ನು ಹೆಚ್ಚಿಸಿದೆ.

ಏನೇನು ಫೀಚರ್ಸ್..?
ಅತಿ ತೆಳುವಾದ ಸ್ಮಾರ್ಟ್‌ಫೋನ್ 4G ಸಂಪರ್ಕ ಹೊಂದಿದ್ದು, 2.8 ಇಂಚು E-Ink ಡಿಸ್‌ಪ್ಲೇ ಹೊಂದಿದ್ದು, ಅಮೆಜಾನ್ ಕಿಂಡಲ್ ಇಬುಕ್ ರೀಡರ್ ಡಿಸ್‌ಪ್ಲೇ ರೀತಿ ಕಾಣುತ್ತದೆ. 380 man ಬ್ಯಾಟರಿ ಹೊಂದಿರುವ ಕ್ಯೋಷೆರಾ KY-01 L ಸ್ಮಾರ್ಟ್‌ಫೋನ್ IP x2 ಡ್ರಿಪ್ ವಾಟರ್ ರೆಸಿಸ್ಟಂಟ್ ಆಗಿದೆ.

ಗಾತ್ರ ಎಷ್ಟು ಗೊತ್ತಾ..?
ಕ್ಯೋಷೆರಾ KY-01 L ಸ್ಮಾರ್ಟ್‌ಫೋನ್ 91x55x5.3 mm ಸುತ್ತಳತೆ ಹೊಂದಿದ್ದು, ಕೇವಲ 47 ಗ್ರಾಂ ತೂಕ ಹೊಂದಿದೆ. ಆಗಿದ್ದರೆ ಹೀಗಾಗಲೇ ತೆಳುವಾದ ಸ್ಮಾರ್ಟ್‌ಫೋನ್ ಕುರಿತು ನಿಮಗೊಂದು ಕಲ್ಪನೆ ಬಂದಿರುತ್ತೆ.

ಏನೀಲ್ಲ..?
ಕ್ಯೋಷೆರಾ KY-01 L ಸ್ಮಾರ್ಟ್‌ಫೋನ್‌ನಲ್ಲಿ ರಿಯರ್ ಮತ್ತು ಫ್ರಾಂಟ್ ಕ್ಯಾಮೆರಾ ಎರಡು ಇರುವುದಿಲ್ಲ. ಇನ್‌ಬ್ಯುಲ್ಟ್ ಇಂಟರ್‌ನೆಟ್ ಬ್ರೌಸರ್ ಇದೆ. ಆದರೆ, ಆಪ್ ಸ್ಟೋರ್ ಇಲ್ಲ. ಡೈಲರ್, ಕ್ಯಾಲೆಂಡರ್, ಕಾಂಟ್ಯಾಕ್ಟ್ಸ್, ಮೆಸೇಜ್, ಕ್ಲಾಕ್, ಕ್ಯಾಲ್ಕುಲೇಟರ್‌ನಂತಹ ಆಪ್‌ಗಳನ್ನು ಹೊಂದಿದೆ.

ಯಾವಾಗ ಲಭ್ಯ..? ಬೆಲೆ ಎಷ್ಟು..?
ಕಪ್ಪು ವರ್ಣದಲ್ಲಿ ಮಾತ್ರ ದೊರೆಯುವ ಕ್ಯೋಷೆರಾ KY-01 L ಸ್ಮಾರ್ಟ್‌ಫೋನ್ ಮುಂದಿನ ತಿಂಗಳು ಎಂದರೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದರ ಬೆಲೆ ಸುಮಾರು ₹20,900 ಆಗಿರುತ್ತದೆ ಎನ್ನಲಾಗಿದೆ.

ಮೊನ್ನೆ ತಾನೇ ಬಿಡುಗಡೆಯಾಗಿತ್ತು ಪಾಮ್ ಫೋನ್
ವಾರದ ಆರಂಭದಲ್ಲಿ ಇಂತಹದ್ದೆ ಸ್ಮಾರ್ಟ್‌ಫೋನ್‌ನ್ನು ಪಾಮ್ ಕಂಪನಿ ಬಿಡುಗಡೆ ಮಾಡಿತ್ತು. ಇದು 3.3 ಇಂಚು ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿರಲಿದೆ. ಸ್ನಾಪ್‌ಡ್ರಾಗನ್ 435 ಪ್ರೊಸೆಸರ್, 800 man ಬ್ಯಾಟರಿ, 3GB RAM ಮತ್ತು 32GB ಸ್ಟೋರೆಜ್ ಹೊಂದಿದ್ದು, ಟೈಪ್ ಸಿ ಯುಎಸ್‌ಬಿ ಪೋರ್ಟ್ ಹೊಂದಿದೆ.


Click it and Unblock the Notifications








