Subscribe to Gizbot

15 ಸಾವಿರಕ್ಕೆ ಲಭ್ಯ ಕ್ಸಿಯೋಮಿಯ ಹೊಸ Mi 5c ಸ್ಮಾರ್ಟ್‌ಪೋನು..!!

Written By:

ಕ್ಸಿಯೋಮಿ ಮತ್ತೊಂದು ಹೊಸ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ್ದು, ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಕಾಣಿಸಿಕೊಳ್ಳಲಿರುವ ಕ್ಸಿಯೋಮಿ ಹೊಸ ಸ್ಮಾರ್ಟ್‌ಪೋನ್ Mi 5c ಅನೇಕ ವಿಶೇಷತೆಗಳಿಂದ ಕೂಡಿದೆ.

15 ಸಾವಿರಕ್ಕೆ ಲಭ್ಯ ಕ್ಸಿಯೋಮಿಯ ಹೊಸ Mi 5c ಸ್ಮಾರ್ಟ್‌ಪೋನು..!!

ಓದಿರಿ: ಭಾರತ ಸ್ಮಾರ್ಟ್‌ಪೋನ್‌ ತಯಾರಿಸಲಿರುವ ನೋಕಿಯಾ: ಜೂನ್ ವೇಳೆಗೆ ಮಾರುಕಟ್ಟೆಯಲ್ಲಿ ನೋಕಿಯಾ ಲಭ್ಯ..!!

ಇದೇ ಮೊದಲ ಬಾರಿಗೆ ಕ್ಸಿಯೋಮಿ ತನ್ನದೇ ಆದ ಚಿಪ್‌ಸೆಟ್‌ ಅನ್ನು ತನ್ನ ಸ್ಮಾರ್ಟ್‌ಪೋನಲ್ಲಿ ಬಳಕೆ ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.15 ಇಂಚಿನ Full HD ಡಿಸ್‌ಪ್ಲೇ:

5.15 ಇಂಚಿನ Full HD ಡಿಸ್‌ಪ್ಲೇ:

ಕ್ಸಿಯೋಮಿ ಬಿಡುಗಡೆ ಮಾಡಲಿರುವ ಹೊಸ Mi 5c ಸ್ಮಾರ್ಟ್‌ಪೋನಿನಲ್ಲಿ 5.15 ಇಂಚಿನ Full HD ಡಿಸ್‌ಪ್ಲೇಯನ್ನು ಹೊಂದಿದ್ದು, ಹೆಚ್ಚಿನ ಬ್ರೈಟ್‌ನೆಸ್ ಈ ಡಿಸ್‌ಪ್ಲೇ ಶಾರ್ಪ್ ಪಿಚ್ಚರ್ ಕ್ವಾಲಿಟಿ ಜೊತೆಗೆನ ಉತ್ತಮ ಬ್ರೈಟ್‌ನೆಸ್ ಕಂಟ್ರೂಲರ್ ಹೊಂದಿದೆ.

ಕ್ಸಿಯೋಮಿ ಪ್ರೋಸೆಸರ್:

ಕ್ಸಿಯೋಮಿ ಪ್ರೋಸೆಸರ್:

ಇದೇ ಮೊದಲ ಬಾರಿಗೆ ಕ್ಸಿಯೋಮಿ ತನ್ನ ಸ್ಮಾರ್ಟ್‌ಪೋನಿನಲ್ಲಿ ತನ್ನದೇ ಆದ ಪ್ರೋಸೆಸರ್ ಅಳವಡಿಸಿಕೊಂಡಿದೆ, ಎಲ್ಲಾ ಕಂಪನಿಗಳು ಸ್ನಾಪ್‌ಡ್ರಾಗನ್ ಕಡೆ ಮುಖ ಮಾಡಿರುವ ಸಂದರ್ಭದಲ್ಲಿ ಕ್ಸಿಯೋಮಿ ತನ್ನದೇ ಆದ ಚಿಪ್‌ಸೆಟ್ ಅಭಿವೃದ್ಧಿಪಡಿಸಿದೆ. ಇದಕ್ಕದೇ Surge 1 ಎಂದು ನಾಮಕರಣ ಮಾಡಿದೆ. ಆಕ್ಟಾಕೋರ್ ಹೊಂದಿರುವ ಈ ಪ್ರೋಸೆಸರ್ 2.2GHz ವೇಗವನ್ನು ಒಳಗೊಂಡಿದೆ.

12 MP ಕ್ಯಾಮೆರಾ:

12 MP ಕ್ಯಾಮೆರಾ:

Mi 5c ಸ್ಮಾರ್ಟ್‌ಪೋನಿನಲ್ಲಿ 12 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, HDR ಆಯ್ಕೆ ನೀಡಲಾಗಿದೆ. ಕಡಿಮೆ ಗುಣಮಟ್ಟದ ಲೈಟ್‌ನಲ್ಲಿಯೂ ಉತ್ತಮ ಫೋಟೋ ಸೆರೆಹಿಡಿಯುವ ಸಾಮಾರ್ಥ್ಯವನ್ನು ಹೊಂದಿದೆ.

2,860 mAh ಬ್ಯಾಟರಿ:

2,860 mAh ಬ್ಯಾಟರಿ:

ಕ್ಸಿಯೋಮಿ ಬಿಡುಗಡೆ ಮಾಡುತ್ತಿರುವ Mi 5c ಸ್ಮಾರ್ಟ್‌ಪೋನಿನಲ್ಲಿ 2,860 mAh ಬ್ಯಾಟರಿ ಅಳವಡಿಸಲಾಗಿದೆ. ಅಲ್ಲದೇ ಫಾಸ್ಟ್‌ ಚಾರ್ಜಿಂಗ್ ಸಹ ಹೊಂದಿದೆ. ಅಲ್ಲದೇ USB-C ಚಾರ್ಜಾರ್ ಅಳವಡಿಸಲಾಗಿದೆ.

3GB RAM:

3GB RAM:

Mi 5c ಸ್ಮಾರ್ಟ್‌ಪೋನಿನಲ್ಲಿ 3GB RAM ಅಳವಡಿಸಲಾಗಿದ್ದು, 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಆಂಡ್ರಾಯ್ಡ್ 7.1 ನಲ್ಲಿ ಕಾರ್ಯನಿರ್ವಹಿಸಲಿದೆ.

 ಬೆಲೆ:

ಬೆಲೆ:

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ Mi 5c ಸ್ಮಾರ್ಟ್‌ಪೋನು ಭಾರತೀಯ ರೂಪಾಯಿಗಳಲ್ಲಿ 15,000 ರೂ.ಗಳಾಗಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Xiaomi has officially taken the wraps off the Mi 5c in China, it’s first phone with a custom chipset. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot