ನಿಮ್ಮನ್ನು ಫಿಟ್ ಆಗಿಸುವ ಈ ಎಂಟು ಅಪ್ಲಿಕೇಶನ್‌ಗಳು

By Shwetha
|

ನಿಯಂತ್ರಿತ ಆಹಾರ ಪದ್ಧತಿ ಮತ್ತು ದೈನಂದಿನ ವ್ಯಾಯಾಮ ನಿಮಗೆ ಆರೋಗ್ಯಕರ ಮತ್ತು ಉತ್ತಮ ಜೀವನಶೈಲಿಯನ್ನು ಒದಗಿಸುತ್ತದೆ. ಆದರೆ ಒಂದೇ ರೀತಿಯ ವ್ಯಾಯಾಮಗಳನ್ನು ಮಾಡುವುದು ನಮಗೆ ಬೇಜಾರನ್ನು ಉಂಟುಮಾಡುವುದು ಖಂಡಿತ.

ಇದಕ್ಕಾಗಿಯೇ ನಾವು ಜಿಮ್‌ಗಳಿಗೆ ಹೋಗಿ ಅಲ್ಲೂ ಕೆಲವೊಂದು ಕಸರತ್ತುಗಳನ್ನು ಮಾಡುತ್ತೇವೆ. ಆದರೂ ಬೆಳಗ್ಗೆ ಬೇಗನೆದ್ದು ನಮ್ಮಿಂದ ಮುಂಚೆ ಯಾರಾದರೂ ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರೆ ಅವರು ಹೋಗುವವರೆಗೆ ಕಾದು ನಂತರ ನಾವು ವ್ಯಾಯಾಮ ಮಾಡಬೇಕಾಗುತ್ತದೆ. ಇದೆಲ್ಲಾ ಫಜೀತಿಯನ್ನುಂಟು ಮಾಡುವ ವಿಶಯಗಳಾಗಿವೆ. ಹಾಗಿದ್ದರೆ ಇಷ್ಟೆಲ್ಲಾ ಕಷ್ಟಪಡದೇ ವ್ಯಾಯಾಮ ತಿಳಿಸುವ ಗುರುಗಳು ನಮ್ಮ ಅಂಗೈಯಲ್ಲಿದ್ದರೆ ಎಷ್ಟು ಒಳ್ಳೆಯದು ಅಲ್ಲವೇ?

ಹಾಗಿದ್ದರೆ ಆ ದಿನಗಳು ಇನ್ನು ದೂರವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಫಿಟ್‌ನೆಸ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಹೊಸತನವನ್ನು ಆಸ್ವಾದಿಸಿ. ನಿಮ್ಮ ವ್ಯಾಯಮಾಕ್ಕೆ ನವೀನ ಅಂಶಗಳನ್ನು ಸೇರ್ಪಡಿಸಲು ಸಹಾಯ ಮಾಡುವಂತಹ ಎಂಟು ಅಪ್ಲಿಕೇಶನ್‌ಗಳನ್ನು ನಾವಿಲ್ಲಿ ನೀಡಿದ್ದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅವುಗಳನ್ನು ಸುಲಭವಾಗಿ ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

#1

#1

ರನ್‌ಕೀಪರ್:

ಓಡುವುದು ವ್ಯಾಯಮಾದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನೀವು ನಿಮ್ಮ ಓಟದ ಸರಾಸರಿ ವೇಗವನ್ನು ಲೆಕ್ಕಹಾಕಬೇಕೆಂಬ ಮನಸ್ಸಿದ್ದವರಾದಲ್ಲಿ, ರನ್‌ಕೀಪರ್ ನಿಮಗೆ ಸಹಾಯ ಮಾಡುತ್ತದೆ. ನೀವು ನಿತ್ಯವೂ ಓಡುವ ಓಟದ ವೇಗವನ್ನು ತಿಳಿಯಲು ಇದು ನಿಮಗೆ ಸಹಾಯ ಮಾಡುತ್ತದೆ.

#2

#2

ಮೈ ಫೀಟ್‌ನೆಸ್ ಪಾಲ್:
ಕೆಲಸದ ನಡುವೆಯೂ ಈ ಉತ್ತಮ ವ್ಯಾಯಾಮವನ್ನು ನಿಮಗೆ ಮಾಡಬಹುದಾಗಿದೆ. ಮೈ ಫಿಟ್‌ನೆಸ್ ಪಾಲ್ ಎನ್ನುವಂತಹುದ್ದು ಸರಳವಾಗಿರುವ ಕ್ಯಾಲೋರಿ ಕೌಂಟರ್ ಆಗಿದ್ದು ನೀವು ನಿತ್ಯವೂ ತೆಗೆದುಕೊಳ್ಳುವ ಆಹಾರದ ವಿಶ್ಲೇಷಣೆಯನ್ನು ಮಾಡುತ್ತದೆ. ಇದರಿಂದ ನಿಮ್ಮ ಡಯೆಟ್ ಮಾಡಲು ಉತ್ತಮವಾಗಿರುತ್ತದೆ.

#3

#3

ನೈಕ್ ಟ್ರೈನಿಂಗ್ ಕ್ಲಬ್:
ಮಹಿಳೆಯರೇ ನೀವು ಅದೃಷ್ಟಶಾಲಿಗಳು. ಮಹಿಳೆಯರಿಗಾಗಿ ಉತ್ತಮ ವರ್ಕ್‌ಔಟ್ ಅನ್ನು ಹುಡುಕುವುದು ತುಂಬಾ ಪ್ರಯಾಸದ ಕೆಲಸವಾಗಿದೆ. ನೈಕ್ ಟ್ರೈನಿಂಗ್ ಕ್ಲಬ್ ಈ ದಿಸೆಯಲ್ಲಿ ನಿಮಗೆ ಉತ್ತಮವಾಗಿ ಸಹಾಯ ಮಾಡುತ್ತದೆ.

#4

#4

ಗೂಗಲ್ ನೌ:
ಸರಳವಾದ ಜೀವನ ಶೈಲಿ ನಿಮಗೆ ಹೆಚ್ಚಿನ ಪೌಂಡ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದಾದಲ್ಲಿ ಗೂಗಲ್ ನೌ ಉತ್ತಮವಾಗಿದೆ. ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ಇಲೋವೇಟರ್‌ನಲ್ಲಿ ಚಲಿಸುತ್ತಿರುವಾಗ ಡ್ರೈವ್ ಮಾಡುತ್ತಿರುವಾಗ ನೀವು ಫಿಟ್‌ನೆಸ್ ಕುರಿತಾದ ಎಲ್ಲಾ ಮಾಹಿತಿಗಳನ್ನು ಈ ಆಪ್‌ನಲ್ಲಿ ಪಡೆದುಕೊಳ್ಳಬಹುದು.

#5

#5

ಫಿಟ್ ರೇಡಿಯೋ:
ನಿಮ್ಮನ್ನು ಮುಂದಕ್ಕೆ ದೂಡುವಲ್ಲಿ ನಿಮಗೆ ಇದು ಸಹಾಯ ಮಾಡುತ್ತದೆ. ಮ್ಯೂಸಿಕ್ ಅನ್ನು ಕೇಳುತ್ತಲೇ ನಿಮಗೆ ಫಿಟ್‌ನೆಸ್ ಮಾಡಬಹುದಾಗಿದೆ.

#6

#6

ಝೋಂಬೀಸ್ ರನ್:

ಉತ್ತಮ ಸಂಗೀತ ನಿಮ್ಮನ್ನು ಹೆಚ್ಚು ಕಾರ್ಯತತ್ಪರಗೊಳಿಸುವುದಿಲ್ಲವೋ ಏನೋ, ಹಾಗಿದ್ದಲ್ಲಿ ಝೋಂಬೀಸ್ ನಿಮಗೆ ಸಹಾಯಕವಾಗುತ್ತದೆ.

#7

#7

ಪಾಕೆಟ್ ಯೋಗ:

ನಿಮಗೆ ಯೋಗ ಅಭ್ಯಾಸದ ಮಹತ್ವವನ್ನು ತಿಳಿಸಿಕೊಡುವಲ್ಲಿ ಪಾಕೆಟ್ ಯೋಗ ಪಾತ್ರ ಹಿರಿದಾದುದು. ಪ್ರತೀ ದಿನ ಯೋಗಾಭ್ಯಾಸ ಮಾಡುವವರಿಗೆ, ಇದು ಹೆಲ್ಪ್‌ಫುಲ್ ಆಪ್ ಆಗಿದೆ.

#8

#8

ಇನ್‌ಸ್ಟಾಂಟ್ ಹಾರ್ಟ್‌ ರೇಟ್:

ನಿಮ್ಮ ಹೃದಯ ಬಡಿತವನ್ನು ಸಕ್ರಿಯವಾಗಿರಿಸುವುದು ಮತ್ತು ವರ್ಕ್‌ಔಟ್ ಮಾಡುತ್ತಿರುವಾಗಲೇ ಪಲ್ಸ್ ಪರಿಶೀಲಿಸುವುದು ಈ ಕೆಲಸವನ್ನು ಈ ಆಪ್ ಮಾಡುತ್ತದೆ. ನಿಮ್ಮ ಪ್ರತಿಯೊಂದು ಹೃದಯ ಬಡಿತದ ಪರೀಕ್ಷೆ ಲಾಗ್ ಅನ್ನು ಈ ಅಪ್ಲಿಕೇಶನ್ ನೀಡುತ್ತದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X