ಯುವಕರು ಮುಗಿಬೀಳುವರು.. 25,000 ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು! ಇಲ್ಲಿದೆ ಪಟ್ಟಿ
ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಬಿಡುಗಡೆ ಭರಾಟೆ ಸಹ ಹೆಚ್ಚಾಗುತ್ತಿದೆ. ದಿನಕ್ಕೊಂದು ಹೊಸ ಮೊಬೈಲ್ (Smartphones) ಮಾರುಕಟ್ಟೆಗೆ ಬರುತ್ತಿದೆ. ಪ್ರಸಿದ್ಧ ಕಂಪನಿಗಳು ವಿಶೇಷವಾಗಿ ಕಡಿಮೆ ಬಜೆಟ್‌ನಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಫೋನ್‌ಗಳನ್ನು ಪರಿಚಯಿಸುತ್ತಿವೆ. ಗ್ರಾಹಕರು ತಮ್ಮ ಬಳಕೆಗೆ ಅನುಗುಣವಾಗಿ ಅತ್ಯುತ್ತಮ ಮೊಬೈಲ್ ಖರೀದಿಸಲು ಬಯಸುತ್ತಾರೆ. ಆದರೆ, ಬಹುತೇಕರು ಕಡಿಮೆ ಬಜೆಟ್‌ನಲ್ಲಿ ಲಭ್ಯ ಇರುವ ಉತ್ತಮ ಫೋನ್‌ಗಳನ್ನು ಹುಡುಕುತ್ತಾರೆ. ನಾವು ಈ ಲೇಖನದಲ್ಲಿ 25,000 ರೂ.ಗಳ (Best Smartphones Under Rs. 25,000) ಬಜೆಟ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಪ್ರಸ್ತುತ ದಿನಗಳಲ್ಲಿ ಎಲ್ಲಾ ಕೆಲಸಗಳಿಗೂ ಸ್ಮಾರ್ಟ್‌ಫೋನ್ ಬೇಕು. ಕಂಪನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮೊಬೈಲ್‌ಗಳನ್ನು ತರುತ್ತಿವೆ. ಅದರಲ್ಲೂ ಈ ವರ್ಷವಂತೂ ಹಲವಾರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿವೆ. ನೀವು, ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ರೆ, 25 ಸಾವಿರ ರೂ. ಬಜೆಟ್‌ನಲ್ಲಿ ಈ ಫೋನ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ. ಬನ್ನಿ, ಈ ಪಟ್ಟಿಯಲ್ಲಿ ಯಾವ್ಯಾವ ಫೋನ್‌ಗಳಿವೆ? ಅವುಗಳ ವಿಶೇಷತೆಗಳೇನು? ಎನ್ನುವುದನ್ನು ತಿಳಿಯೋಣ.

ಒಪ್ಪೋ F27 5G: ಬೆಲೆ 20,999 ರೂ.
ಒಪ್ಪೋ F27 5G (Oppo F27 5G) ಸಹ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್‌ಗಳಲ್ಲಿ ಒಂದಾಗಿದೆ. ಇದು 50 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ ಮತ್ತು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನಿನಲ್ಲಿ 8GB + 256GB ಸ್ಟೋರೇಜ್ ಲಭ್ಯವಿದೆ. ಈ ಫೋನಿನ ಮೂಲ ರೂಪಾಂತರವು 20,999 ರೂ.ಗೆ ಲಭ್ಯವಿದೆ.
ಒನ್‌ಪ್ಲಸ್ ನಾರ್ಡ್ 3: ಬೆಲೆ 21,065 ರೂ.
ಒನ್‌ಪ್ಲಸ್ ನಾರ್ಡ್ 3 (OnePlus Nord 3) ಸಹ 25 ಸಾವಿರ ರೂ.ಗಳ ಅಡಿಯಲ್ಲಿ ಲಭ್ಯವಿರುವ ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಶನ್ 9000 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 21,065 ರೂ. ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G: ಬೆಲೆ 21,719 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G (Samsung Galaxy A35 5G) ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್‌ಗಳಲ್ಲಿ ಒಂದಾಗಿದೆ. ಇದು 6.60 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 21,719 ರೂ.ಗೆ ಲಭ್ಯವಿದೆ.
ರಿಯಲ್‌ಮಿ 12 ಪ್ರೊ ಪ್ಲಸ್: ಬೆಲೆ 23,599 ರೂ.
ರಿಯಲ್‌ಮಿ 12 ಪ್ರೊ ಪ್ಲಸ್ (Realme 12 Pro+) ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವು 23,599 ರೂ.ಗೆ ಲಭ್ಯವಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಹೊಂದಿದೆ.
ನಥಿಂಗ್ ಫೋನ್ 2a ಪ್ಲಸ್: ಬೆಲೆ 25,320 ರೂ.
25 ಸಾವಿರ ರೂ. ಬಜೆಟ್‌ನಲ್ಲಿ ಲಭ್ಯವಿರುವ ಮೊಬೈಲ್‌ಗಳಲ್ಲಿ ನಥಿಂಗ್ ಫೋನ್ 2a ಪ್ಲಸ್ (Nothing Phone (2a) Plus) ಒಂದಾಗಿದೆ. ಈ ಫೋನ್ 6.70 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಈ ಮೊಬೈಲ್‌ನ ಬೆಲೆ 25,320 ರೂ. ಆಗಿದೆ.


Click it and Unblock the Notifications








