Home
ಮೊಬೈಲ್

ವಿವೋ ಫೋನ್ ಗಳ ಬೆಲೆಯಲ್ಲಿ ಭರ್ಜರಿ ಏರಿಕೆ

By Gizbot Bureau

ಸ್ಮಾರ್ಟ್ ಫೋನ್ ಗಳ ಜಿಎಸ್ ಟಿಯಲ್ಲಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ OEMಗಳು ತಮ್ಮ ಬೆಲೆಯಲ್ಲಿ ಬದಲಾವಣೆಯನ್ನು ಮಾಡಿದೆ ಮತ್ತು ಕೆಲವು ಡಿವೈಸ್ ಗಳ ನೈಜ ಬೆಲೆಯಲ್ಲಿ ಏರಿಕೆಯನ್ನು ಮಾಡಲಾಗಿದೆ.

ವಿವೋ

ವಿವೋ ಕೂಡ ತನ್ನ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಏರಿಸಿದ್ದು ಏರಿಕೆಯಾದ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಇವೆಲ್ಲವೂ ಕೂಡ ಅಧಿಕೃತ ಬೆಲೆಯಾಗಿದ್ದು ಕೆಲವು ಫ್ಲ್ಯಾಟ್ ಫಾರ್ಮ್ ಗಳಲ್ಲಿ ಆಫರ್ ಗಳಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರುವ ಸಾಧ್ಯತೆ ಇದೆ.

ವಿವೋ ವಿ17

ವಿವೋ ವಿ17

ವಿವೋ ವಿ17 8GB RAM ಮತ್ತು 128GB ಸ್ಟೋರೇಜ್ ವ್ಯವಸ್ಥೆ ಇರುವ ಫೋನಿನ ಬೆಲೆ 24,990 ಮತ್ತು ಒಟ್ಟಾರೆ 2,000 ರುಪಾಯಿ ಬೆಲೆ ಏರಿಕೆಯನ್ನು ಈ ಫೋನ್ ಕಂಡಿದೆ. ವಿವೋ ವಿ17 ಕ್ವಾಡ್ ಕ್ಯಾಮರಾ ಸೆಟ್ ಅಪ್ ಮತ್ತು AMOLED ಡಿಸ್ಪ್ಲೇ ಮತ್ತು ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ವ್ಯವಸ್ಥೆಯನ್ನು ಹೊಂದಿದೆ.

ವಿವೋ ಎಸ್ 1

ವಿವೋ ಎಸ್ 1

ವಿವೋ ಎಸ್1 ಮೀಡಿಯಾ ಟೆಕ್ ಹೆಲಿಯೋ ಪಿ65 ಸಾಕೆಟ್ ಜೊತೆಗೆ 4GB RAM ಮತ್ತು 128GB ಸ್ಟೊರೇಜ್ ವ್ಯವಸ್ಥೆ ಹೊಂದಿದ್ದು 15,990 ರುಪಾಯಿ ಬೆಲೆ ಇದೆ. 2,000 ಬೆಲೆ ಏರಿಕೆಯನ್ನು ಈ ಫೋನ್ ಕಂಡಿದ್ದು ಇದೀಗ 17,990 ರುಪಾಯಿಗೆ ಖರೀದಿಸಬೇಕಾಗುತ್ತದೆ.

ವಿವೋ ಎಸ್1 ಪ್ರೋ

ವಿವೋ ಎಸ್1 ಪ್ರೋ

ವಿವೋ ಎಸ್1 ಪ್ರೋ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 SoC ಹೊಂದಿದ್ದು ಅತ್ಯುತ್ತಮ ಕ್ಯಾಮರಾಗಳನ್ನು ಒಳಗೊಂಡಿದೆ. 8GB RAM ಮತ್ತು 128GB ಸ್ಟೋರೇಜ್ ಇರುವ ಇದು 20,990 ರುಪಾಯಿಗೆ ಖರೀದಿಸಬಹುದು ಮತ್ತು ಸದ್ಯ 2,000 ರುಪಾಯಿ ಬೆಲೆ ಏರಿಕೆಯನ್ನು ಕಂಡಿದೆ.

ವಿವೋ ವೈ19

ವಿವೋ ವೈ19

ವಿವೋ ವೈ19 ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಆಗಿದ್ದು 4GB RAM ಮತ್ತು 128GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. 1,000 ರುಪಾಯಿ ಬೆಲೆ ಏರಿಕೆಯನ್ನು ಕಂಡಿರುವ ಈ ಡಿವೈಸ್ ನ್ನು ಇದೀಗ 14,990 ರುಪಾಯಿಗೆ ಖರೀದಿಸುವ ಅವಕಾಶವಿದೆ.

ವಿವೋ ವೈ91ಐ 2GB RAM

ವಿವೋ ವೈ91ಐ 2GB RAM

ಬೇಸ್ ಮಾಡೆಲ್ ನ ಈ ವಿವೋ ವೈ91ಐ 2GB RAM ಮತ್ತು 32GB ಸ್ಟೋರೇಜ್ ಅಂದರೆ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ವಾಟರ್ ಡ್ರಾಪ್ ನಾಚ್ ಮತ್ತು ಡುಯಲ್ ಕ್ಯಾಮರಾ ಸಿಸ್ಟಮ್ ನ್ನು ಹೊಂದಿದ್ದು ಸದ್ಯ 7,990 ರುಪಾಯಿಗೆ ಖರೀದಿಸಬಹುದು. ಈ ಮೊದಲು 6,990 ರುಪಾಯಿಗೆ ಈ ಫೋನ್ ಸಿಗುತ್ತಿತ್ತು. ಅಂದರೆ 1,000 ಬೆಲೆ ಏರಿಕೆಯನ್ನು ಈ ಫೋನ್ ಕಂಡಿದೆ.

ವಿವೋ ವೈ15

ವಿವೋ ವೈ15

ವಿವೋ ವಿ15 ಮೀಡಿಯಾ ಟೆಕ್ ಹೆಲಿಯೋ ಪಿ22 SoC ಜೊತೆಗೆ 4GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆಯದ್ದಾಗಿದ್ದು 1,000 ಬೆಲೆ ಏರಿಕೆಯನ್ನು ಕಂಡಿದೆ ಮತ್ತು ಇದೀಗ ಭಾರತದಲ್ಲಿ 12,990 ರುಪಾಯಿ ಬೆಲೆಗೆ ಖರೀದಿಸಬಹುದು.

Best Mobiles in India

English summary
Vivo has also increased the GST price of its smartphones. Here are the latest official prices of the Vivo smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+